ಯುನಿಯನ್ ಬ್ಯಾಂಕಿನಲ್ಲಿ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಡಿಸೆಂಬರ್ 26: ಭಾರತದಾದ್ಯಂತ ಯುನಿಯನ್ ಬ್ಯಾಂಕ್ ಆಫ್ ಇಂಡಿಯಾನಲ್ಲಿ ಖಾಲಿ ಇರುವ ವಿದೇಶೀ ವಿನಿಮಯ ಅಧಿಕಾರಿ ಮತ್ತು ಖಜಾನೆ ಅಧಿಕಾರಿಯನ್ನು ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.
50 ವಿದೇಶೀ ವಿನಿಮಯ ಅಧಿಕಾರಿ ಮತ್ತು 50 ಖಜಾನೆ ಅಧಿಕಾರಿ ಒಟ್ಟು 100 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ್ದು, ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ದಿನಾಂಕ ಜನವರಿ 13,2018ರೊಳಗೆ ಅರ್ಜಿ ಸಲ್ಲಿಸಲು ಕೋರಲಾಗಿದೆ.

1. ವಿದೇಶೀ ವಿನಿಮಯ ಅಧಿಕಾರಿ
* ವಿದ್ಯಾರ್ಹತೆ: ಭಾರತ ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಯಾವುದಾದರೂ ಡಿಗ್ರಿ(ಪದವಿ) ಪೂರ್ಣಗೊಳಿಸಿರಬೇಕು.
* ವೇತನ ಶ್ರೇಣಿ: 31705 ರಿಂದ 45950 ರು.ತಿಂಗಳಿಗೆ.
2. ಖಜಾನೆ ಅಧಿಕಾರಿ
* ವಿದ್ಯಾರ್ಹತೆ: ಭಾರತ ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯಗಳಲ್ಲಿ ಸಂಖ್ಯಾಶಾಸ್ತ್ರ, ಫೈನಾನ್ಸ್, ಗಣಿತ ವಿಷಯಗಳಲ್ಲಿ ಪದವಿ ಪಡೆದಿರಬೇಕು.
* ವೇತನ ಶ್ರೇಣಿ: 31705 ರಿಂದ 45950 ರು.ತಿಂಗಳಿಗೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ಕಿಸಿ.












Click it and Unblock the Notifications