ಆರ್ಥಿಕ ಸಮೀಕ್ಷೆ ವರದಿ: ನಿರುದ್ಯೋಗದ ಪ್ರಮಾಣ ಇಳಿಕೆ

ನವದೆಹಲಿ, ಜುಲೈ 22: ಮಂಗಳವಾರ ಕೇಂದ್ರ ಹಣಕಾಸು ಮತ್ತು ಕಾರ್ಪೊರೇಟ್ ವ್ಯವಹಾರಗಳ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ 2024-25ನೇ ಸಾಲಿನ ಪೂರ್ಣ ಪ್ರಮಾಣದ ಬಜೆಟ್ ಮಂಡಿಸಲಿದ್ದಾರೆ. ಇದಕ್ಕೂ ಮೊದಲು ಲೋಕಸಭೆಯಲ್ಲಿ ಅವರು ಆರ್ಥಿಕ ಸಮೀಕ್ಷೆ ವರದಿ 2023-24 ಮಂಡಿಸಿದರು.

ಸೋಮವಾರದಿಂದ ಲೋಕಸಭೆ ಬಜೆಟ್ ಅಧಿವೇಶನ ಆರಂಭವಾಗಿದೆ. ಬಜೆಟ್‌ ಮಂಡನೆಗೂ ಮುನ್ನ ನಿರ್ಮಲಾ ಸೀತಾರಾಮನ್ ಆರ್ಥಿಕ ಸಮೀಕ್ಷೆ ವರದಿ ಮಂಡಿಸಿದರು. ಇದು ಬಜೆಟ್ ಮಂಡನೆಗೂ ಮುನ್ನ ಕೇಂದ್ರ ಸರ್ಕಾರ ಮಂಡಿಸುವ ವಾರ್ಷಿಕ ದಾಖಲೆಯೇ ಈ ಸಮೀಕ್ಷೆಯಾಗಿದೆ.

Unemployment Rate Down In Last Five Years Says Economic Survey

ಮುಖ್ಯ ಆರ್ಥಿಕ ಸಲಹೆಗಾರರ ಮೇಲ್ವಿಚಾರಣೆಯಲ್ಲಿ ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಇಲಾಖೆಯ ಆರ್ಥಿಕ ವಿಭಾಗದಿಂದ ಈ ವರದಿಯನ್ನು ಸಿದ್ಧಪಡಿಸಲಾಗಿರುತ್ತದೆ. 1960ರಿಂದ ಬಜೆಟ್‌ನ ಪೂರ್ವಭಾವಿಯಾಗಿ ಆರ್ಥಿಕ ಸಮೀಕ್ಷೆ ವರದಿ ಮಂಡಿಸುವ ಸಂಪ್ರದಾಯವನ್ನು ಪಾಲಿಸಿಕೊಂಡು ಬರಲಾಗುತ್ತಿದೆ.

ನಿರುದ್ಯೋಗಿ ಪ್ರಮಾಣದಲ್ಲಿ ಇಳಿಕೆ: ಆರ್ಥಿಕ ಸಮೀಕ್ಷೆ ವರದಿಯಲ್ಲಿ ದೇಶದಲ್ಲಿ ಕಳೆದ ಐದು ವರ್ಷದಲ್ಲಿ ನಿರುದ್ಯೋಗದ ಪ್ರಮಾಣ ಶೇ 17.8ರಿಂದ 10ಕ್ಕೆ ಇಳಿಕೆಯಾಗಿದೆ ಎಂದು ಉಲ್ಲೇಖಿಸಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ 3.0 ಸರ್ಕಾರ ಮಂಡಿಸಿದ ಮೊದಲ ಆರ್ಥಿಕ ಸಮೀಕ್ಷೆ ಇದಾಗಿದೆ. ಭಾರತದ ಉದ್ಯೋಗಾವಕಾಶದ ಅವಕಾಶವು ರಾಷ್ಟ್ರದಾದ್ಯಂತ ಆರ್ಥಿಕ ಬೆಳವಣಿಗೆ ಮತ್ತು ಸಾಮಾಜಿಕ ಅಭಿವೃದ್ಧಿಯನ್ನು ಉತ್ತೇಜಿಸುವಲ್ಲಿ ಪ್ರಮುಖವಾಗಿದೆ ಎಂದು ಹೇಳಿದೆ.

ಸಮೀಕ್ಷೆಯ ಪ್ರಕಾರ 57.3% ರಷ್ಟು ಉದ್ಯೋಗಿಗಳು ಸ್ವಯಂ ಉದ್ಯೋಗಿಗಳಾಗಿದ್ದು, 18.3% ರಷ್ಟು ವೇತನವಿಲ್ಲದ ಕುಟುಂಬ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಸಾಂದರ್ಭಿಕ ಕಾರ್ಮಿಕರು 21.8% ರಷ್ಟಿದ್ದರೆ, ಸಾಮಾನ್ಯ ವೇತನ/ ಸಂಬಳದ ಕೆಲಸಗಾರರು 20.9% ರಷ್ಟಿದ್ದಾರೆ ಎಂದು ತಿಳಿಸಿದೆ.

ಸಮೀಕ್ಷೆಯ ಪ್ರಮುಖ ಮಾಹಿತಿ ಪ್ರಕಾರ 15 ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವ್ಯಕ್ತಿಗಳಿಗೆ ವಾರ್ಷಿಕ ನಿರುದ್ಯೋಗ ದರವು ಕೋವಿಡ್‌-19 ಸಾಂಕ್ರಾಮಿಕದ ನಂತರ ಇಳಿಮುಖವಾಗಿದೆ. ಇದಲ್ಲದೆ, ಯುವ ನಿರುದ್ಯೋಗ ದರವು 2017-18ರಲ್ಲಿ 17.8% ರಿಂದ 2022-23 ರಲ್ಲಿ 10%ಕ್ಕೆ ಇಳಿದಿದೆ ಎಂದು ಸಮೀಕ್ಷೆಯು ಸೂಚಿಸುತ್ತದೆ, ಕಾರ್ಮಿಕ ವಲಯದಲ್ಲಿ ಯುವಕರ ಭಾಗವಹಿಸುವಿಕೆಯೂ ಹೆಚ್ಚಾಗಿದೆ.

2022-23ರಲ್ಲಿ ಭಾರತದ ಉದ್ಯೋಗಿಗಳ ಸಂಖ್ಯೆ ಸುಮಾರು 56.5 ಕೋಟಿ ಎಂದು ಅಂದಾಜಿಸಲಾಗಿದೆ. ಉದ್ಯೋಗ ವಿತರಣೆಯು ಕೃಷಿಯಲ್ಲಿ 45%, ಉತ್ಪಾದನೆಯಲ್ಲಿ 11.4%, ಸೇವೆಗಳಲ್ಲಿ 28.9% ಮತ್ತು ನಿರ್ಮಾಣ ಕ್ಷೇತ್ರದಲ್ಲಿ 13% ಅನ್ನು ಒಳಗೊಂಡಿದೆ. ವಿಶೇಷವಾಗಿ ಮಹಿಳೆಯರಿಗೆ ಉದ್ಯೋಗವನ್ನು ಒದಗಿಸುವಲ್ಲಿ ಕೃಷಿಯ ಮಹತ್ವದ ಪಾತ್ರ, ಸವಾಲುಗಳು ಮತ್ತು ಅವಕಾಶಗಳನ್ನು ಹೊಂದಿದೆ.

57.3% ರಷ್ಟು ಉದ್ಯೋಗಿಗಳು ಸ್ವಯಂ ಉದ್ಯೋಗಿಗಳಾಗಿದ್ದು, 18.3% ರಷ್ಟು ವೇತನವಿಲ್ಲದ ಕುಟುಂಬ ಕೆಲಸಗಾರರಾಗಿ ಕೆಲಸ ಮಾಡುತ್ತಿದ್ದಾರೆ. ಸಾಂದರ್ಭಿಕ ಕಾರ್ಮಿಕರು 21.8% ರಷ್ಟಿದ್ದರೆ, ಸಾಮಾನ್ಯ ವೇತನ/ ಸಂಬಳದ ಕೆಲಸಗಾರರು 20.9% ರಷ್ಟಿದ್ದಾರೆ. ಗಮನಾರ್ಹವಾಗಿ, ಮಹಿಳಾ ಸ್ವಯಂ ಉದ್ಯೋಗವು ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿದೆ, ಕಳೆದ 6 ವರ್ಷಗಳಲ್ಲಿ ಮಹಿಳಾ ಉದ್ಯೋಗಿಗಳ ಸಂಖ್ಯೆಯಲ್ಲಿಯೂ ಏರಿಕೆಯಾಗಿದೆ. ಮಹಿಳಾ ಉದ್ಯೋಗಿಗಳ ಸಂಖ್ಯೆ ಶೇ 16.9ಕ್ಕೆ 2017-18 ಮತ್ತು 2022-23ಕ್ಕೆ ಹೋಲಿಕೆ ಮಾಡಿದಾಗ ಏರಿಕೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+