UIIC Recruitment 2024: ಕೇಂದ್ರ ಸರ್ಕಾರಿ 300 ಉದ್ಯೋಗ ಖಾಲಿ ಇವೆ, ವೇತನ, ನೇಮಕಾತಿ ಪ್ರಕ್ರಿಯೆ ವಿವರ
ಬೆಂಗಳೂರು, ಜನವರಿ 05: ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ (UIIC) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.
ಸದ್ಯ ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿಯಲ್ಲಿ ಒಟ್ಟು 300 ಸಹಾಯಕ ಹುದ್ದೆಗಳು ಖಾಲಿ ಇವೆ. ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಅರ್ಹರು ಈ ಕೂಡಲೇ ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಬೇಕು. ಹಾಗಾದರೆ ಅರ್ಜಿ ಸಲ್ಲಿಕೆಗು ಮೊದಲು ನೀವು ಅರ್ಜಿ ಶುಲ್ಕ, ಸಲ್ಲಿಕೆ ವಿಧಾನ, ವೇತನ, ವಯೋಮಿತಿ ಸೇರಿದಂತೆ ಇನ್ನಿತರ ನೇಮಕಾತಿ ಪೂರ್ಣ ಮಾಹಿತಿ ತಿಳಿಯಿರಿ.

ನೇಮಕಾತಿ ಪೂರ್ಣ ಮಾಹಿತಿ
ಸಂಸ್ಥೆ ಹೆಸರು: ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್
ಹುದ್ದೆ ಹೆಸರು: ಸಹಾಯಕ ಹುದ್ದೆಗಳು
ಖಾಲಿ ಹುದ್ದೆ ಎಷ್ಟಿವೆ: ಬರೋಬ್ಬರಿ 300
ಮಾಸಿಕ ವೇತನ: 22,405 ರಿಂದ 62,265 ರೂಪಾಯಿ
ಪೋಸ್ಟಿಂಗ್ ಎಲ್ಲಿ: ಭಾರತ
ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ: ಜನವರಿ 6
ಶೈಕ್ಷಣಿಕ ಅರ್ಹತೆ
ಅರ್ಹ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಪದವಿ ಪೂರ್ಣಗೊಳಿಸಿರಬೇಕು ಎಂದು ಯುನೈಟೆಡ್ ಇಂಡಿಯಾ ಇನ್ಶೂರೆನ್ಸ್ ಕಂಪನಿ ಲಿಮಿಟೆಡ್ ನೇಮಕಾತಿ ಅಧಿಸೂಚನೆ ತಿಳಿಸಿದೆ.
ವಯಸ್ಸಿನ ಮಿತಿ ಮಾಹಿತಿ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸು ಕಳೆದ ವರ್ಷ 2023ರ ಸೆಪ್ಟೆಂಬರ್ 30ಕ್ಕೆ ಕನಿಷ್ಠ 21 ವರ್ಷ ಮತ್ತು ಗರಿಷ್ಠ 30 ವರ್ಷ ಮೀರಿರಬಾರದು. ಇನ್ನೂ ವಯೋಮಿತಿ ಸಡಿಲಿಕೆ ನೋಡುವುದಾದರೆ, ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಮೂರು ವರ್ಷ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಭ್ಯರ್ಥಿಗಳಿಗೆ 05 ವರ್ಷ ಮತ್ತುPwBD ಅಭ್ಯರ್ಥಿಗಳಿಗೆ ಹತ್ತು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಅರ್ಜಿ ಶುಲ್ಕ ವಿವರ ಹೀಗಿದೆ
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ/PwBD/ಕಂಪನಿ ಅಭ್ಯರ್ಥಿಗಳ ಖಾಯಂ ಉದ್ಯೋಗಿಗಳಿಗೆ ಅರ್ಜಿ ಶುಲ್ಕ ಕೇವಲ 250/- ರೂಪಾಯಿ ಇದೆ. ಇನ್ನಿತರ ಎಲ್ಲ ವರ್ಗ ಅಭರ್ಥಿಗಳಿಗೆ ರೂ.1000 ನಿಗದಿ ಮಾಡಲಾಗಿದೆ. ಈ ಹಣವನ್ನು ಆನ್‌ಲೈನ್ ಮೂಲಕ ಪಾವತಿಸುವಂತೆ ಅಧಿಸೂಚನೆ ಸೂಚಿಸಿದೆ.
ಅಭ್ಯರ್ಥಿಗಳ ಆಯ್ಕೆ ಹೇಗೆ?
ಅಭ್ಯರ್ಥಿಗಳಿಗೆ ಮೊದಲು ಆನ್‌ಲೈನ್ ಮೂಲಕ ಪರೀಕ್ಷೆ ನಡೆಸಲಾಗುತ್ತದೆ. ಅಲ್ಲಿ ಆಯ್ಕೆ ಆಗುವವರಿಗೆ ನೇರ ಸಂದರ್ಶನ ನಡೆಸಲಾಗುವುದು. ಬಳಿಕ ಅವರಿಗೆ ಭಾರತದಲ್ಲಿ ಎಲ್ಲಿಯಾದರೂ ಪೋಸಿಂಗ್ ನೀಡಲಾಗುವುದು. ಇದರಿಂದಿಗೆ ಅವರಿಗೆ ಮಾಸಿಕ 22,405 ರಿಂದ 62,265 ರೂಪಾಯಿ ವೇತನ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ.
ಅರ್ಜಿ ಸಲ್ಲಿಕೆ ವಿಧಾನ
ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅಪ್ಲೈ ಮಾಡಲು ಮೊದಲು ನೀವು ಈ ಲಿಂಕ್ https://uiic.co.in/en/home ಗೆ ಭೇಟಿ ನೀಡಬೇಕು. ಇಲ್ಲಿರುವ ಅಧಿಸೂಚನೆಯನ್ನು ಒಮ್ಮೆ ಓದಿಸಿಕೊಂಡು ನೇರವಾಗಿ ನೀವು ನಿಗದಿತ ದಿನಾಂಕದೊಳಗೆ ಅರ್ಜಿಸಲ್ಲಿಸಬೇಕು.
ನೆನಪಿಡಬೇಕಾದ ದಿನಗಳು
ಅರ್ಜಿ ಸಲ್ಲಿಕೆ ಆರಂಭವಾಗಿದ್ದು, ಕಳೆದ ವರ್ಷ 2023ರ ಡಿಸೆಂಬರ್ 16
ಅರ್ಜಿ ಸಲ್ಲಿಕೆ ಕೊನೆ ದಿನ ನಾಳೆ ಜನವರಿ 6












Click it and Unblock the Notifications