UAS Recruitment 2023: ಧಾರವಾಡ ಕೃಷಿ ವಿವಿಯಲ್ಲಿ 21 ಖಾಲಿ ಹುದ್ದೆಗಳ ನೇಮಕಾತಿ, ನೇರ ಸಂದರ್ಶನ

ಬೆಂಗಳೂರು, ಜುಲೈ 10: ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ (UASD Recruitment 2023) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಧಾರವಾಡ ಮತ್ತು ವಿಜಯಪುರ ಜಿಲ್ಲೆಗಳ ಸರ್ಕಾರಿ ಉದ್ಯೋಗಿ ಹುಡುಕುತ್ತಿರುವ ಉದ್ಯೋಗಾಸಕ್ತರಿಗೆ ಇದೊಂದು ಸುವರ್ಣ ಅವಕಾಶವಾಗಿದೆ.

ಕೃಷಿ ವಿಜ್ಞಾನ ವಿಶ್ವವಿದ್ಯಾಲಯ ಧಾರವಾಡ (UASD) ಸಂಸ್ಥೆಯಲ್ಲಿ ಒಟ್ಟು 21 ಕಮ್ಯುನಿಟಿ ಹೆಲ್ಪರ್ಸ್, ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಸರ್ಕಾರಿ ಉದ್ಯೋಗ ಪಡೆಯಲು ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ. ಇದೇ ಜುಲೈ 18 ಬೆಳಗ್ಗೆ 10.30ಕ್ಕೆ ಸಂದರ್ಶನ (ಸಂದರ್ಶನ) ನಡೆಯಲಿದೆ. ಆಸಕ್ತರು ಭಾಗವಹಿಸಬಹುದು.

UAS Recruitment 2023: UAS Recruitment Invites Application 21 Posts, Apply Before July 18th

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತ ಸಂಪೂರ್ಣ ವಿವರ ಶೈಕ್ಷಣಿಕ ಅರ್ಹತೆ, ವೇತನ, ವಯೋಮಿತಿ ಇನ್ನಿತರ ಇಲ್ಲಿ ತಿಳಿಯಿರಿ.

ಹುದ್ದೆಯ ವಿವರ

ಹುದ್ದೆ ಹೆಸರು - ಕಮ್ಯುನಿಟಿ ಹೆಲ್ಪರ್ಸ್, ಪ್ರಾಜೆಕ್ಟ್ ಸಹಾಯಕ

ಒಟ್ಟು ಹುದ್ದೆ - 21

ಶೈಕ್ಷಣಿಕ ಅರ್ಹತೆ - M.Sc, B.Sc

ಮಾಸಿಕ ವೇತನ - ₹70,000

ಒಟ್ಟು ಖಾಲಿ ಹುದ್ದೆಗಳ ಪೈಕಿ ಒಂದು ಕನ್ಸಲ್ಟೆಂಟ್, ಒಂದು ಸೀನಿಯರ್ ರಿಸರ್ಚ್ ಫೆಲೋ (SRF), 4 ಪ್ರಾಜೆಕ್ಟ್ ಸಹಾಯಕ,

2 ಪ್ರಾಜೆಕ್ಟ್ ಸಹಾಯಕ- ಹೈಡ್ರೋಲಾಜಿ, ಒಂದು ಫೀಲ್ಡ್ ಅಸಿಸ್ಟೆಂಟ್/ ಫೀಲ್ಡ್ ಸೂಪರ್ ವೈಸರ್ ಮತ್ತು 12 ಕಮ್ಯುನಿಟಿ ಹೆಲ್ಪರ್ಸ್ (ಜಲ ಮಿತ್ರ) ಹುದ್ದೆಗಳು ಖಾಲಿ ಇವೆ.

ಹುದ್ದೆವಾರು ಅರ್ಹತೆ ಏನಿರಬೇಕು

ಕನ್ಸಲ್ಟೆಂಟ್- ಆರ್ಎಸ್ ಮತ್ತು ಜಿಎಸ್‌ನಲ್ಲಿ M.Sc ಆಗಿರಬೇಕು. ಜಿಯೋ-ಇನ್ಫರ್ಮ್ಯಾಟಿಕ್ಸ್‌ ಹುದ್ದೆಗೆ ಪಿಎಚ್‌ಡಿ ಮುಗಿಸಿರಬೇಕು, ಇನ್ನೂ ಸೀನಿಯರ್ ರಿಸರ್ಚ್ ಫೆಲೋ (SRF) - ಅಗ್ರಿಕಲ್ಚರ್ ನಲ್ಲಿ M.Sc, ಸಾಯಿಲ್ ಸೈನ್ಸ್, ಆಗ್ರೋನಮಿ ಪ್ರಾಜೆಕ್ಟ್ ಸಹಾಯಕಗೆ ಎಲ್ಆರ್ಐ, ಡಿಪ್ಲೊಮಾ, ಪದವಿ, ಅಗ್ರಿಕಲ್ಚರ್‌ನಲ್ಲಿ ಬಿ.ಎಸ್‌ಸಿ, ಪ್ರಾಜೆಕ್ಟ್ ಅಸಿಸ್ಟೆಂಟ್ ಹುದ್ದೆಗೆ ಹೈಡ್ರೋಲಾಜಿ-ಅಗ್ರಿಕಲ್ಚರ್ ನಲ್ಲಿ B.Sc, ಅಗ್ರಿಕಲ್ಚರಲ್ ಎಂಜಿನಿಯರಿಂಗ್‌ನಲ್ಲಿ B.Tec, ಫೀಲ್ಡ್ ಅಸಿಸ್ಟೆಂಟ್/ ಫೀಲ್ಡ್ ಸೂಪರ್ ವೈಸರ್, ಕಮ್ಯುನಿಟಿ ಹೆಲ್ಪರ್ಸ್ (ಜಲ ಮಿತ್ರ) ಹುದ್ದೆಗಳಿಗೆ 10ನೇ ತರಗತಿ ಪಾಸಾಗಿರಬೇಕು.

UAS Recruitment 2023: UAS Recruitment Invites Application 21 Posts, Apply Before July 18th

ವೇತನ- ಸಂದರ್ಶನ ನಡೆಯುವ ಸ್ಥಳ

ಈ ಧಾರವಾಡ ಕೃಷಿ ವಿವಿಯ ವಿವಿಧ ಹುದ್ದೆಗಳಗೆ ಬೇರೆ ಬೇರೆ ವೇತನ ನಿಗದಿಯಾಗಿದೆ. ಆಯ್ಕೆಯಾಗುವವರಿಗೆ ಮಾಸಿಕ ₹5000 ರೂ. ನಿಂದ ₹70,000 ವರೆಗೆ ದೊರೆಯಲಿದೆ. ಚೇಂಬರ್ ಆಫ್ ಆಫೀಸ್ ಆಫ್ ಅಸೋಸಿಯೇಟ್

ಸಂಶೋಧನಾ ನಿರ್ದೇಶಕರು (HQ) ಕೃಷಿನಗರ ಧಾರವಾಡದಲ್ಲಿ ನಡೆಯಲಿದೆ. ಇದೇ ವೇಳೆ ಧಾರವಾಡ ಜೊತೆಗೆ

ಬೆಳಗಾವಿ, ಹಾವೇರಿ, ವಿಜಯಪುರದಲ್ಲಿ ಏಕಕಾಲಕ್ಕೆ ಸಂದರ್ಶನ ಜರುಗಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+