ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ 21 ಹುದ್ದೆಗಳಿಗೆ ಅರ್ಜಿ ಆಹ್ವಾನ
ತುಮಕೂರು, ಮಾರ್ಚ್ 15: ತುಮಕೂರು ಜಿಲ್ಲಾ ನ್ಯಾಯಾಲಯದಲ್ಲಿ 2002ನೇ ಸಾಲಿನ ನೇಮಕಾತಿ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಟೈಪಿಸ್ಟ್ ಸೇರಿದಂತೆ 21 ವಿವಿಧ ಹುದ್ದೆಗಳಿಗೆ ಆರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಅರ್ಹ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಏಪ್ರಿಲ್ 18ರೊಳಗೆ ಸಲ್ಲಿಸಬಹುದು.
ಸಂಸ್ಥೆ ಹೆಸರು: ತುಮಕೂರು ಇ ಕೋರ್ಟ್ (ತುಮಕೂರು ಜಿಲ್ಲಾ ನ್ಯಾಯಾಲಯ)
ಹುದ್ದೆ ಹೆಸರು: ಪ್ರೋಸಸ್ ಸರ್ವರ್, ಟೈಪಿಸ್ಟ್, ಟೈಪಿಸ್ಟ್- ಕಾಪಿಸ್ಟ್
ಒಟ್ಟು ಹುದ್ದೆ: 21
ಉದ್ಯೋಗ ಸ್ಥಳ: ತುಮಕೂರು-ಕರ್ನಾಟಕ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 18.04.2020.
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಎಸ್ಎಸ್ಎಲ್ ಸಿ ಪಾಸಾಗಿರಬೇಕು.

ವಯೋಮಿತಿ
ಕನಿಷ್ಠ: 18 ವರ್ಷ.
ಗರಿಷ್ಠ: 35 ವರ್ಷ.
ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ/ ಕೆಟಗರಿ -1, ಅಂಗವಿಕಲ: 100 ರು
ಸಾಮಾನ್ಯ, ಕೆಟಗರಿ 2ಎ, 2ಬಿ ಹಾಗೂ 3ಎ ಮತ್ತು 3ಬಿ: 200 ರು
ನೇಮಕಾತಿ ಪ್ರಕ್ರಿಯೆ: ಟೈಪಿಂಗ್ ಟೆಸ್ಟ್, ಲಿಖಿತ ಪರೀಕ್ಷೆ ಹಾಗೂ ವೈಯಕ್ತಿಕ ಸಂದರ್ಶನ.
ಪ್ರಮುಖ ದಿನಾಂಕಗಳು:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 19.03.2020.
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 18.04.2020
ಅರ್ಜಿಸಲ್ಲಿಸುವ ವಿಧಾನ ಹಾಗೂ ಇನ್ನಿತರ ಹೆಚ್ಚಿನ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications