ಕೊಪ್ಪಳ; ಮೇ 22 ಮತ್ತು 23ರಂದು ಕ್ಯಾಂಪಸ್ ಸಂದರ್ಶನ

ಕೊಪ್ಪಳ, ಮೇ 19; ಅಪ್ರೆಂಟಿಸ್ ತರಬೇತಿಗಾಗಿ ಕ್ಯಾಂಪಸ್ ಸಂದರ್ಶನವನ್ನು ಮೇ 22 ಮತ್ತು ಮೇ 23ರಂದು ಆಯೋಜನೆ ಮಾಡಲಾಗಿದೆ. ಟೋಯೋಟಾ ಕಿರ್ಲೋಸ್ಕರ್ ಮೋಟರ್ ಪ್ರೈ.ಲಿ ಬಿಡದಿ ಈ ಸಂದರ್ಶನ ಆಯೋಜನೆ ಮಾಡಿದೆ.

ಕೊಪ್ಪಳದ ಕುಷ್ಟಗಿ ರಸ್ತೆಯ ಟಣಕನಕಲ್ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕ್ಯಾಂಪಸ್ ಸಂದರ್ಶನ ಆಯೋಜನೆ ಮಾಡಲಾಗಿದೆ. ಆಸಕ್ತರು ಇದರ ಉಪಯೋಗ ಪಡೆದುಕೊಳ್ಳಬೇಕು ಎಂದು ಕೊಪ್ಪಳ ಸರ್ಕಾರಿ ಐಟಿಐ ಪ್ರಾಚಾರ್ಯರು ತಿಳಿಸಿದ್ದಾರೆ.

Toyota Apprenticeship Campus Interview At Koppal On May 22 And 23

ಕ್ಯಾಂಪಸ್ ಸಂದರ್ಶನಕ್ಕೆ ಪ್ರತಿಷ್ಠಿತ ಕಂಪನಿಯಾದ ಟೋಯೋಟಾ ಕಿರ್ಲೋಸ್ಕರ್ ಮೋಟರ್ ಪ್ರೈ.ಲಿ ಬಿಡದಿ ಆಗಮಿಸಲಿದ್ದು, ಐಟಿಐ ಪಾಸಾದ ಹಾಗೂ ಪ್ರಸ್ತುತ ಎರಡನೇಯ ವರ್ಷದಲ್ಲಿ ತರಬೇತಿ ಪಡೆಯುತ್ತಿರುವ ಎಲೆಕ್ಟ್ರಿಷಿಯನ್, ಫಿಟ್ಟರ್, ಟರ್ನರ್, ಮೆಕಾನಿಕ್ ಮೋಟರ್ ವಹಿಕಲ್, ಮೆಕಾನಿಕ್ ಡಿಜೈಲ್, ಟೂಲ್ & ಡೈ ಮೇಕಿಂಗ್ & ವೇಲ್ಡರ್ ಹಾಗೂ ಮಷಿನಿಷ್ಟ್ ವೃತ್ತಿಗಳ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದ್ದಾರೆ.

ಅಪ್ರೆಂಟಿಸ್‌ ತರಬೇತಿಗಾಗಿ ಮೇ 22ರಂದು ಲಿಖಿತ ಪರೀಕ್ಷೆ ಹಾಗೂ ಮೇ 23ರಂದು ತಾಂತ್ರಿಕ ಸಂದರ್ಶನ ಮತ್ತು ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಆಸಕ್ತರು ತಮ್ಮ ಆಧಾರ್ ಕಾರ್ಡ್, ಫೋಟೋ, ವಿದ್ಯಾರ್ಹತೆಗೆ ಸಂಬಂಧಿಸಿದ ಎಲ್ಲಾ ಮೂಲ ದಾಖಲಾತಿಗಳು ಹಾಗೂ 2 ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಬೆಳಗ್ಗೆ 9ಕ್ಕೆ ಹಾಜರಾಗಬೇಕು.

Toyota Apprenticeship Campus Interview At Koppal On May 22 And 23

ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಪ್ರಾಚಾರ್ಯರು, ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಕೊಪ್ಪಳ (ಟಣಕನಕಲ್, ಕುಷ್ಟಗಿ ರಸ್ತೆ, ಕೊಪ್ಪಳ) ಇವರನ್ನು ಸಂಪರ್ಕಿಸಬಹುದು. ಕರೆ ಮಾಡಲು ದೂರವಾಣಿ ಸಂಖ್ಯೆ 9019233400, 9008536895, 9448813422, 9742532353, 9945577155.

ಲಘು ವಾಹನ ಚಾಲನಾ ತರಬೇತಿ; ಕೆನರಾ ಬ್ಯಾಂಕ್ ದೇಶಪಾಂಡೆ ರುಡ್ ಸೆಟ್ ದಾಂಡೇಲಿ ಹಾಗೂ ಟಾಟಾ ಮೋಟಾರ್ಸ್- ಧಾರವಾಡ ಇವರ ಜಂಟಿ ಸಹಯೋಗದಲ್ಲಿ 30 ದಿನಗಳ ಲಘು ವಾಹನ ಚಾಲನಾ ತರಬೇತಿಯನ್ನು ಉಚಿತವಾಗಿ ನೀಡಲಾಗುತ್ತಿದೆ. 20-45 ವರ್ಷ ವಯೋಮಿತಿಯೊಳಗಿನ ಅಭ್ಯರ್ಥಿಗಳು ಇದರಲ್ಲಿ ಪಾಲ್ಗೊಳ್ಳಬಹುದಾಗಿದ್ದು, ಯುವಕರಿಂದ ಅರ್ಜಿ ಆಹ್ವಾನಿಸಲಾಗಿದೆ.

ಆಸಕ್ತರು ತಮ್ಮ ಹೆಸರು, ಹುಟ್ಟಿದ ದಿನಾಂಕ, ಪೂರ್ಣ ವಿಳಾಸ, ಮೊಬೈಲ್ ಸಂಖ್ಯೆ, ವಿದ್ಯಾರ್ಹತೆ, ತರಬೇತಿಯ ಅವಶ್ಯಕತೆ, ಹಾಲಿ ಮಾಡುತ್ತಿರುವ ಕೆಲಸ ಇತ್ಯಾದಿ ವಿವರಗಳನ್ನು ಬರೆದು ಅರ್ಜಿಯನ್ನು ಮೇ 30ರೊಳಗೆ ಕೆನರಾ ಬ್ಯಾಂಕ್ ದೇಶಪಾಂಡೆ ರುಡ್‌ ಸೆಟ್, ವಿಸ್ತರಣಾ ಕೇಂದ್ರ ಹಸನಮಾಳ್, ದಾಂಡೇಲಿ-581325 ವಿಳಾಸಕ್ಕೆ ಕಳಿಸಬೇಕು.

ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ 08284-298547/ 9449782425 ಸಂಖ್ಯೆಗೆ ಕರೆ ಮಾಡಬಹುದಿ. ಈ ತರಬೇತಿಯು ಊಟೋಪಚಾರ ಹಾಗೂ ವಸತಿಯೊಂದಿಗೆ ಸಂಪೂರ್ಣ ಉಚಿತವಾಗಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+