Tirumala Tirupati: ತಿರುಮಲ ತಿರುಪತಿ ದೇವಸ್ಥಾನದಲ್ಲಿ ಉದ್ಯೋಗವಕಾಶ: ಅರ್ಜಿ ಸಲ್ಲಿಸಲು ಕೇವಲ 2 ದಿನ ಅವಕಾಶ..!
ಆಂಧ್ರಪ್ರದೇಶದ ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಇತ್ತೀಚೆಗೆ ಉದ್ಯೋಗ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಅಧಿಸೂಚನೆಯ ಮೂಲಕ 56 ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಈ ಹುದ್ದೆಗಳನ್ನು ಖಾಯಂ ಆಧಾರದ ಮೇಲೆ ಭರ್ತಿ ಮಾಡಲಾಗುತ್ತಿದೆ.
ಇದು AEE, AE, ATO ಮತ್ತು ಇತರ ಹುದ್ದೆಗಳನ್ನು ಹೊಂದಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಆಂಧ್ರಪ್ರದೇಶದಲ್ಲಿ ಹಿಂದೂ ಧರ್ಮಕ್ಕೆ ಸೇರಿದ ಅಭ್ಯರ್ಥಿಗಳು ಮಾತ್ರ ಟಿಟಿಡಿ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಬೇಕಾಗುತ್ತದೆ. ಸೂಕ್ತವಾದ ಶೈಕ್ಷಣಿಕ ಅರ್ಹತೆಗಳನ್ನು ಹೊಂದಿರುವ ಆಸಕ್ತ ಅಭ್ಯರ್ಥಿಗಳು ನವೆಂಬರ್ 23 ರೊಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು.

ಹುದ್ದೆಗಳ ಸಂಖ್ಯೆ:-
ಒಟ್ಟು ಪೋಸ್ಟ್‌ಗಳು: 56
ಸಹಾಯಕ ಕಾರ್ಯಪಾಲಕ ಇಂಜಿನಿಯರ್ (ಸಿವಿಲ್)- 27 ಹುದ್ದೆಗಳು
ಸಹಾಯಕ ಎಂಜಿನಿಯರ್ (ಸಿವಿಲ್)- 10 ಹುದ್ದೆಗಳು
ಸಹಾಯಕ ತಾಂತ್ರಿಕ ಅಧಿಕಾರಿ (ಸಿವಿಲ್)- 19 ಹುದ್ದೆಗಳು
ವಿದ್ಯಾರ್ಹತೆ:-
ಅರ್ಹತೆ: ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಬಿಇ, ಬಿ.ಟೆಕ್ (ಸಿವಿಲ್/ ಮೆಕ್ಯಾನಿಕಲ್), ಎಲ್ ಸಿಇ/ ಎಲ್ ಎಂಇ ಡಿಪ್ಲೊಮಾ (ಸಿವಿಲ್ ಇಂಜಿನಿಯರಿಂಗ್) ತೇರ್ಗಡೆಯಾಗಿರಬೇಕು.
ವಯೋಮಿತಿ:-
ವಯಸ್ಸಿನ ಮಿತಿ: ಅಭ್ಯರ್ಥಿಗಳ ವಯಸ್ಸು 42 ವರ್ಷಗಳನ್ನು ಮೀರಬಾರದು.
ಆಯ್ಕೆ ಹೇಗೆ?
ಆಯ್ಕೆ ಪ್ರಕ್ರಿಯೆ: ಈ ಹುದ್ದೆಗಳಿಗೆ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಸಂಬಳದ ವಿವರ
ಎಇಇಗೆ 57,100-1,47,760 ರೂಪಾಯಿ
ಎಇಗೆ 48,440-1,37,220 ರೂಪಾಯಿ
ಎಟಿಒ ಹುದ್ದೆಗಳಿಗೆ 37,640-1,15,500 ರೂಪಾಯಿ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ನವೆಂಬರ್ 23, 2023.
ಸಂಪೂರ್ಣ ವಿವರಗಳಿಗಾಗಿ ವೆಬ್‌ಸೈಟ್: https://ttd-recruitment.aptonline.in/












Click it and Unblock the Notifications