ಈಗಲೇ ಅರ್ಜಿ ಹಾಕಿ, 24,369 ಹುದ್ದೆಗಳಿಗೆ ಅರ್ಜಿ ಆಹ್ವಾನ

ನವದೆಹಲಿ, ನವೆಂಬರ್‌ 28: ಸಿಎಪಿಎಫ್, ಎಸ್‌ಎಸ್‌ಎಫ್ ಮತ್ತು ಅಸ್ಸಾಂ ರೈಫಲ್ಸ್‌ನಲ್ಲಿ ಖಾಲಿ ಇರುವ ಬರೋಬ್ಬರಿ 24,369 ಕಾನ್‌ಸ್ಟೇಬಲ್ ಹುದ್ದೆಗಳ ನೇಮಕಾತಿಗಾಗಿ ಸ್ಟಾಫ್ ಸೆಲೆಕ್ಷನ್ ಕಮಿಷನ್ (ಎಸ್‌ಎಸ್‌ಸಿ) ಅರ್ಜಿ ಆಹ್ವಾನಿಸಿದೆ.

ಇಲಾಖೆಯ ಅರ್ಹತಾ ಮಾನದಂಡಗಳನ್ನು ಹೊಂದಿರುವವ ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯನ್ನು ಓದಿ ನಂತರ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಹುದ್ದೆಯ ಹೆಸರು: ಕಾನ್‌ಸ್ಟೇಬರ್‌ ಜಿಡಿ, ಅಧಿಸೂಚನೆ ದಿನಾಂಕ 27-10-2022, ಒಟ್ಟು ಹುದ್ದೆಗಳ ಸಂಖ್ಯೆ 24,369, ಅರ್ಜಿ ಶುಲ್ಕ 100 ರೂಪಾಯಿಗಳು, ಎಸ್‌ಸಿ, ಎಸ್‌ಟಿ ಹಾಗೂ ಮಹಿಳಾ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇರುವುದಿಲ್ಲ.

ಶುಲ್ಕ ಪಾವತಿಸಲು ಎಸ್‌ಬಿಐ ಚಲನ್‌ ಇಲ್ಲವೇ ಎಸ್‌ಬಿಐ ನೆಟ್‌ ಬ್ಯಾಂಕಿಂಗ್‌, ಭೀಮ್‌ ಯುಪಿಐ, ನೆಟ್‌ ಬ್ಯಾಂಕಿಂಗ್‌ ವೀಸಾ ಕಾರ್ಡ್‌ಗಳನ್ನು ಬಳಸಬಹುದು. ಇಲ್ಲವೇ ಮಾಸ್ಟರ್‌ ಕಾರ್ಡ್ ಮೇಸ್ಟ್ರೋ, ರುಪೇ ಕ್ರೇಡಿಟ್‌ ಅಥೌಆ ಡೆಬಿಟ್‌ ಕಾರ್ಡ್‌ಗಳ ಮೂಲಕ ಪಾವತಿಸಬಹುದು.

The Staff Selection Commission invites applications for 24,369 posts.

ಅರ್ಜಿ ಸಲ್ಲಿಸಲು ಅಕ್ಟೋಬರ್‌ 27ರಿಂದ ಪ್ರಾರಂಭ, ದಿನಾಂಕ ಅರ್ಜಿ ಸಲ್ಲಿಸಲು ಸೆಪ್ಟೆಂಬರ್‌ 30ರಂದು 11 ಗಂಟೆವರೆಗೂ ಅವಕಾಶ ನೀಡಲಾಗಿದೆ. ಬ್ಯಾಂಕ್‌ ಚಲನ್‌ ತೆಗೆದುಕೊಳ್ಳಲು ಸೆಪ್ಟೆಂಬರ್‌ 30ರಂದು 11 ಗಂಟೆವರೆಗೆ ಅವಕಾಶವಿರುತ್ತದೆ. ಶುಲ್ಕ ಪಾವತಿಸಲು ಡಿಸೆಂಬರ್‌ 1ರ 11 ಗಂಟೆವರೆಗೆ ಸಮಯ ನೀಡಲಾಗಿದೆ. ಕಂಪ್ಯೂಟರ್‌ ಆಧಾರಿತ ಪರೀಕ್ಷೆಯ ವೇಳಾಪಟ್ಟಿಯನ್ನು ಜನವರಿಯಲ್ಲಿ ಘೋಷಣೆ ಮಾಡಲಾಗುತ್ತದೆ.

ವಯೋಮಿತಿಯು ಕನಿಷ್ಠ 18 ವರ್ಷ ತುಂಬಿರಬೇಕು ಗರಿಷ್ಠ 23 ವರ್ಷಗಳು ಆಗಿರುತ್ತದೆ. ವಿದ್ಯಾರ್ಹತೆಯು ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾನಿಲಯದಿಂದ ಮೆಟ್ರಿಕ್ಯೂಲೇಶನ್‌ ಅಥವಾ 10ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.

ವೇತನವು ಆರಂಭಿಕವಾಗಿ 18,000ದಿಂದ ಮೂಲ ವೇತನ ಇರುತ್ತದೆ. ಖಾಲಿ ಇರುವ ಹುದ್ದೆಗಳು ವರ್ಗವಾಗಿ ನೋಡುವುದಾದರೆ ಬಿಎಸ್‌ಎಫ್‌ ಒಟ್ಟು 10,497 ಹುದ್ದೆಗಳು, ಸಿಐಎಸ್‌ಎಫ್‌ 100 ಹುದ್ದೆಗಳು, ಸಿಆರ್‌ಪಿಎಫ್‌ 8,911 ಹುದ್ದೆಗಳು, ಎಸ್‌ಎಸ್‌ಬಿ 1284 ಹುದ್ದೆಗಳು, ಐಟಿಬಿಪಿ 1613 ಹುದ್ದೆಗಳು, ಎಆರ್‌ 1697 ಹುದ್ದೆಗಳು, ಎಸ್‌ಎಸ್‌ಎಫ್‌ 103 ಹುದ್ದೆಗಳು ಎನ್‌ಸಿಬಿಯಲ್ಲಿ 164 ಹುದ್ದೆಗಳು ಖಾಲಿ ಇವೆ. ಎಲ್ಲವೂ ಸೇರಿ ಒಟ್ಟು 24,205 ಹುದ್ದೆಗಳು ಖಾಲಿ ಇವೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+