Get Updates
Get notified of breaking news, exclusive insights, and must-see stories!

Elon Musk Job Offer: ಭರ್ಜರಿ ಉದ್ಯೋಗಾವಕಶಗಳನ್ನ ಘೋಷಿಸಿದ ಎಲಾನ್‌ ಮಸ್ಕ್‌

Elon Musk Job Offer: ಟೆಸ್ಲಾ ಮೋಟಾರ್ಸ್‌ನ ಸಿಇಒ ಎಲಾನ್‌ ಮಸ್ಕ್ ವಿಶ್ವದ ಅತ್ಯಂತ ಶ್ರೀಮಂತ ಉದ್ಯಮಿಗಳಲ್ಲೊಬ್ಬರಾಗಿದ್ದಾರೆ. ಇನ್ನು ಇವರು ಸಾಮಾಜಿ ಜಾಲತಾಣದಲ್ಲಿ ಪ್ರಮುಖ ವಿಚಾರ ಯಾವುದೇ ಇರಲಿ, ಅದಕ್ಕೆ ಧೈರ್ಯವಾಗಿ ಕಾಮೆಂಟ್ ಮಾಡುತ್ತಾರೆ. ಇನ್ನು ಆಗಾಗ ಉದ್ಯೋಗವಕಾಶಗಳನ್ನು ಕಲ್ಪಿಸುತ್ತಲೇ ಇರುತ್ತಾರೆ. ಇದೀಗ ಸಾಫ್ಟ್‌ವೇರ್ ಇಂಜಿನಿಯರ್ಸ್‌ಗಳಿಗೆ ಉದ್ಯೋಗ ಘೋಷಣೆ ಮಾಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಖಗೋಳಶಾಸ್ತ್ರಕ್ಕೆ ಸಂಬಂಧಿಸಿದ ಸಂಶೋಧನೆಗಳನ್ನ ಮಾಡಲು ಎಲಾನ್‌ ಮಸ್ಕ್ ಸ್ಪೇಸ್ ಎಕ್ಸ್ (ಟ್ಟಿಟರ್‌) ಎಂಬ ಕಂಪನಿಯನ್ನ ಮುನ್ನಡೆಸುತ್ತಿದ್ದಾರೆ. ಅಲ್ಲದೆ, ಪ್ರಸಿದ್ಧ ಟೆಸ್ಲಾ ಕಾರು ಕಂಪನಿಯ ಸಿಇಓ ಕೂಡ ಆಗಿದ್ದಾರೆ. ಇದೀಗ ರೋಬೋಟ್ ಮತ್ತು ಮಾನವ ರೋಬೋಟ್‌ಗಳ ಬಗ್ಗೆ ದೊಡ್ಡ ಸಂಶೋಧನೆಯನ್ನ ಸಹ ಮಾಡುತ್ತಿದ್ದಾರೆ. ಅಲ್ಲದೆ ಇತ್ತೀಚೆಗಷ್ಟೇ ಟ್ವಿಟರ್ ಖರೀದಿಸಿ ಎಕ್ಸ್ ಎಂದು ಮರುನಾಮಕರಣ ಮಾಡಿ ಅದರಲ್ಲಿ ಹಲವು ಬದಲಾವಣೆಗಳನ್ನು ತರುವ ಮೂಲಕ ಗಮನ ಸೆಳೆದಿದ್ದಾರೆ.

Tesla Motors CEO Elon Musk has Announced a job offer for engineers

ಖಗೋಳ, ಆಟೊಮೊಬೈಲ್, ಸಾಫ್ಟ್‌ವೇರ್ ಸೇರಿ ಎಲ್ಲಾ ಕ್ಷೇತ್ರಗಳಲ್ಲೂ ಎಲಾನ್‌ ಮಸ್ಕ್ ಆಗಾಗ ಉದ್ಯೋಗವಕಾಶಗಳನ್ನು ಕಲ್ಪಿಸುತ್ತಲೇ ಬಂದಿದ್ದಾರೆ. ಇದೀಗ ಸಾಫ್ಟ್‌ವೇರ್ ಇಂಜಿನಿಯರ್‌ಗಳಿಗೆ ಉದ್ಯೋಗವಕಾಶಗಳ ಬಗ್ಗೆ ಘೋಷಣೆಯೊಂದನ್ನು ಮಾಡಿದ್ದಾರೆ. ನೀವು ಯಾವುದೇ ಕಂಪನಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಕೆಲಸ ಮಾಡಲು ಬಯಸಿದರೆ, ನೀವು ಸಾಫ್ಟ್‌ವೇರ್ ಎಂಜಿನಿಯರಿಂಗ್ ಓದಿರಬೇಕು. ಆದರೆ, ಉದ್ಯೋಗ ಪ್ರಕಟಣೆಯಲ್ಲಿ ಯಾವುದೇ ಶೈಕ್ಷಣಿಕ ಅರ್ಹತೆಯ ಅಗತ್ಯವಿಲ್ಲ ಎಂದು ಎಲಾನ್‌ ಮಸ್ಕ್‌ ಹೇಳಿದ್ದಾರೆ.

ಎಲಾನ್ ಮಸ್ಕ್ ಅವರು ತಮ್ಮ ಟ್ವಿಟರ್ ಖಾತೆಯಲ್ಲು ಈ ಕುರಿತು ಪೋಸ್ಟ್ ಮಾಡಿಕೊಂಡಿದ್ದಾರೆ. ನೀವು ಸಾಫ್ಟ್‌ವೇರ್ ಇಂಜಿನಿಯರ್ ಆಗಿದ್ದರೆ ಮತ್ತು ಎವೆರಿಥಿಂಗ್‌ ಆಪ್ ಅನ್ನು ನಿರ್ಮಿಸಲು ಬಯಸಿದರೆ, ನಿಮ್ಮ ಕೆಲಸದ ವಿವರಗಳನ್ನು ನಮಗೆ ಕಳುಹಿಸಿ. ನೀವು ಯಾವ ಕಾಲೇಜಿನಲ್ಲಿ ಓದಿದ್ದೀರಿ, ಕಾಲೇಜಿಗೆ ಸೇರಿದ್ದೀರಾ ಅಥವಾ ಇಲ್ಲವೇ ಮತ್ತು ಮೊದಲು ದೊಡ್ಡ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೀರಾ ಎಂಬುದು ನಮಗೆ ಅಗತ್ಯವಿಲ್ಲ. ನಿಮ್ಮ ಕೋಡಿಂಗ್ ಕೌಶಲ್ಯವನ್ನು ಮಾತ್ರ ತೋರಿಸಿ ಎಂದು ಹೇಳಿದ್ದಾರೆ.

ಎಲಾನ್‌ ಮಸ್ಕ್ ಅವರ ಗಮನ ಇದೀಗ Space X, ಟೆಸ್ಲಾದಲ್ಲಿ ನೇಮಕಾತಿ ಮಾಡಿಕೊಳ್ಳುತ್ತ ಇದೆ. X ಅನ್ನು ಹೆಚ್ಚಿನ ಜನರು ಬಳಕೆ ಮಾಡುವಂತೆ ಕಾರ್ಯನಿರ್ವಹಿಸುವ ಗುರಿ ಅವರದ್ದಾಗಿದೆ. ಆದ್ದರಿಂದ ಎವೆರಿಥಿಂಗ್ ಅಪ್ಲಿಕೇಶನ್ ಅನ್ನು ರಚಿಸುವ ಗುರಿಯನ್ನು ಹೊಂದಿದ್ದು, ಇದಕ್ಕೆ ಸಾಫ್ಟ್‌ವೇರ್ ಇಂಜಿನಿಯರ್‌ಗಳನ್ನು ನೇಮಕ ಮಾಡಿಕೊಳ್ಳಲು ಮುಂದಾಗಿದ್ದಾರೆ ಎಂದು ತಿಳಿದುಬಂದಿದೆ.

ಎಲಾನ್‌ ಮಸ್ಕ್‌ನ ಎವೆರಿಥಿಂಗ್ ಅಪ್ಲಿಕೇಶನ್ ಪರಿಕಲ್ಪನೆಯು ಚೀನಾದ WeChat ಅನ್ನು ಹೋಲುತ್ತದೆ. ಇದು ಶಾಪಿಂಗ್, ಸಾಮಾಜಿಕ ಜಾಲತಾಣ ಮತ್ತು ಯುಪಿಐ ಪಾವತಿ ಸೇವೆಗಳಿಗಾಗಿ ಬಳಸಲಾಗುವ ಅಪ್ಲಿಕೇಶನ್ ಆಗಿದೆ. ಇದು ಎಲಾನ್ ಮಸ್ಕ್ ಅವರ ಬಹುನಿರೀಕ್ಷಿತ ಯೋಜನೆಯಾಗಿದೆ. ಇದನ್ನು ಮತ್ತಷ್ಟು ಅಭಿವೃದ್ಧಿಗೊಳಿಸುವ ಗುರಿ ಎಲಾನ್‌ ಮಸ್ಕ್‌ ಅವರದ್ದಾಗಿದೆ.

ಎಲಾನ್ ಮಸ್ಕ್ ಹೊಸ ಎವರಿಥಿಂಗ್ ಕಂಪನಿ ಹಲವು ಪ್ಲಾಟ್‌ಫಾರ್ಮ್‌ಗಳನ್ನು ಒಂದೇ ಆ್ಯಪಗ್‌ನಡಿಯಲ್ಲಿ ತರಲಾಗುತ್ತಿದೆ. ಅಂದರೆ ಇ ಕಾಮರ್ಸ್ ಶಾಪಿಂಗ್, ಮೆಸೇಜಿಂಗ್, ಸೋಶಿಯಲ್‌ ನೆಟ್‌ವರ್ಕಿಂಗ್, ಆರ್ಥಿಕತೆಗೆ ಸಂಬಂಧಿಸಿದ ಸೇವೆಗಳು ಸೇರಿದಂತೆ ಹಲವು ಸೇವೆಗಳನ್ನು ಎವ್ರಿಥಿಂಗ್ ಆ್ಯಪ್ ನೀಡಲಿದೆ. ಈ ಒಂದೇ ಆ್ಯಪ್ ಮೂಲಕ ಹಲವು ಸೇವೆಗಳನ್ನು ಪಡೆಯಬಹುದಾಗಿದೆ. ಇದನ್ನು ಇದೀಗ ಇದೀಗ ಮತ್ತಷ್ಟು ಅಭಿವದ್ಧಿಪಡಿಸಲಾಗುತ್ತಿದೆ. ಈ ಹಿನ್ನೆಲೆ ಎಂಜಿನೀಯರ್‌ಗಳ ಅವಶ್ಯಕತೆಯಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+