ಬೆಳಗಾವಿಯಲ್ಲಿ ಕೆಲಸ ಖಾಲಿ ಇದೆ, ವೇತನ ವಿವರ

ಬೆಳಗಾವಿ, ಡಿಸೆಂಬರ್ 06; ಬೆಳಗಾವಿಯಲ್ಲಿ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಮತ್ತು ಅರ್ಹರು 26/12/2023ರೊಳಗೆ ತಲುಪುವಂತೆ ಅರ್ಜಿಗಳನ್ನು ಕಳುಹಿಸಿಕೊಡಬೇಕು ಎಂದು ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.

ಫತ್ತೇಖಾನ ದೇಸಾಯಿ ಪ್ರೌಢಶಾಲೆ, ಪಾಚ್ಛಾಪೂರ 591122 ಹುಕ್ಕೇರಿ ತಾಲೂಕು, ಶೈಕ್ಷಣಿಕ ಜಿಲ್ಲೆ ಚಿಕ್ಕೋಡಿ, ಬೆಳಗಾವಿ ಜಿಲ್ಲೆ ಈ ನೇಮಕಾತಿ ಪ್ರಕಟಣೆ ಹೊರಡಿಸಿದೆ. ಸಂಸ್ಥೆಯ ಆಡಳಿತಕ್ಕೆ ಒಳಪಟ್ಟ ಅನುದಾನಿತ ಫತ್ತೇಖಾನಾ ದೇಸಾಯಿ ಪ್ರೌಢಶಾಲೆ, ಪಾಚ್ಛಾಪೂರ ಇಲ್ಲಿ ಖಾಲಿ ಇರುವ ವಿವಿಧ ಭಾಷೆಗಳ ಅನುದಾನಿತ ಸಹಶಿಕ್ಷಕರ ಹುದ್ದೆಗಳನ್ನು ತುಂಬಲು ಮಾನ್ಯ ಅಪರ ಆಯುಕ್ತರು ಶಾಲಾ ಶಿಕ್ಷಣ ಇಲಾಖೆ ಧಾರವಾಡ ಅನುಮತಿ ನೀಡಿರುತ್ತಾರೆ.

Teacher Recruitment At Belagavi Apply Till December 26

ವಿಷಯಗಳು, ವೇತನ ವಿವರ; ಉರ್ದು ಭಾಷಾ ಶಿಕ್ಷಕರು, ಉರ್ದು ಬೋಧನಾ ಮಾಧ್ಯಮ ಹುದ್ದೆಗೆ ಅರ್ಜಿ ಕರೆಯಲಾಗಿದೆ. ಬಿಎ. ಬಿಎಡ್‌ ವಿದ್ಯಾರ್ಹತೆ ಹೊಂದಿರಬೇಕು. ವೇತನ 33,450-62,600 ರೂ.ಗಳು.

ಸಹ ಶಿಕ್ಷಕರು ವಿಜ್ಞಾನ (ಪಿ. ಸಿ. ಎಂ). ವಿದ್ಯಾರ್ಹತೆ ಬಿ. ಎಸ್. ಸಿ./ ಬಿ.ಎಡ್‌ ಬೋಧನಾ ಮಾಧ್ಯಮ ಉರ್ದು. ವೇತನ ಶ್ರೇಣಿ 33,450-62,600 ರೂ.ಗಳು.

ಹಿಂದಿ ಭಾಷಾ ಶಿಕ್ಷಕರು. ವಿದ್ಯಾರ್ಹತೆ ಬಿ. ಎ. ಬಿ. ಎಡ್‌. ಬೋಧನಾ ಮಾಧ್ಯಮ ಕನ್ನಡ. ವೇತನ ಶ್ರೇಣಿ 33,450-62,600 ರೂ.ಗಳು.

ಈ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ತಮ್ಮ ಸಂಪೂರ್ಣ ವಿವರಗಳಾದ ಪೂರ್ಣ ಹೆಸರು, ಜನ್ಮ ದಿನಾಂಕ, ವಿದ್ಯಾರ್ಹತೆ ಹೊಂದಿದ ವರ್ಷ, ಪಡೆದ ಅಂಕ, ಪ್ರತಿಶತ ಅಂಕ, ಬೋರ್ಡ್‌/ ವಿಶ್ವವಿದ್ಯಾಲಯದ ಹೆಸರು, ಬೋಧನೆಯ ಅನುಭವದ ಪೂರ್ಣ ವಿವರ, ಸಂಪರ್ಕ ವಿಳಾಸ, ಮೊಬೈಲ್ ಸಂಖ್ಯೆ ಇತ್ಯಾದಿ ಮಾಹಿತಿಗಳೊಂದಿಗೆ ನಿಗದಿತ ಅವಧಿಯೊಳಗೆ ಅರ್ಹ ದೃಢೀಕೃತ ಅಂಕಪಟ್ಟಿಗಳು ಹಾಗೂ ದಾಖಲಾತಿಗಳೊಂದಿಗೆ (ಎಸ್‌. ಎಸ್.ಎಲ್.ಸಿ. ಯಿಂದ ಬಿ.ಎಡ್. ಹಾಗೂ ಇನ್ನುಳಿದ ಅರ್ಹ ದಾಖಲೆಗಳು) ಅರ್ಜಿಯನ್ನು ಸಲ್ಲಿಸಬೇಕು.

ಮೀಸಲಾತಿ ಅಡಿಯಲ್ಲಿ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಜಾತಿ ಪ್ರಮಾಣ ಪತ್ರವನ್ನು ಸಲ್ಲಿಸಬೇಕು. ಲಕೋಟೆಯ ಮೇಲೆ ಪ್ರೌಢಶಾಲಾ ಸಹಶಿಕ್ಷಕರ ಹುದ್ದೆಯ ವಿಷಯವನ್ನು ಕಡ್ಡಾಯವಾಗಿ ನಮೂದಿಸಿ ಪ್ರಕ್ರಿಯಾ ಶುಲ್ಕ ರೂ. 1000 ಬ್ಯಾಂಕ್ ಡಿಡಿಯನ್ನು ಅಧ್ಯಕ್ಷರು ಫತ್ತೇಖಾನಾ ದೇಸಾಯಿ ಹೈಸ್ಕೂಲ್ ವಿಶ್ವಸ್ಥ ಮಂಡಳ ಪಾಚ್ಛಾಪೂರ ಇವರ ಹೆಸರಿನಲ್ಲಿ ಪಡೆದು ಅರ್ಜಿಯೊಂದಿಗೆ ಲಗತ್ತಿಸಿ ಅಧ್ಯಕ್ಷರು ಫತೇಖಾನ ದೇಸಾಯಿ ಹೈಸ್ಕೂಲ ವಿಶ್ವಸ್ಥ ಮಂಡಳ ಪಾಚ್ಛಾಪೂರ ಇವರಿಗೆ ದಿನಾಂಕ 26/12/2023 ರೊಳಗಾಗಿ ತಲುಪುವಂತೆ ಕಳುಹಿಸಿಕೊಡಬೇಕು.

ಕೊನೆಯ ದಿನಾಂಕದ ನಂತರ ಬಂದ ಅರ್ಜಿಗಳನ್ನು ಮತ್ತು ಅಪೂರ್ಣ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಹಾಗೂ ಪ್ರಕ್ರಿಯಾ ಶುಲ್ಕವನ್ನು ಯಾವುದೇ ಕಾರಣದಿಂದ ಹಿಂತಿರುಗಿಸಲಾಗುವುದಿಲ್ಲ. ಆಡಳಿತ ಮಂಡಳಿಯವರಿಗೆ ಸಲ್ಲಿಸಿದ ಒಂದು ಪ್ರತಿಯನ್ನು ಉಪನಿರ್ದೆಶಕರು, (ಆಡಳಿತ) ಶಾಲಾ ಶಿಕ್ಷಣ ಇಲಾಖೆ ಚಿಕ್ಕೋಡಿ ಇವರಿಗೆ ಕಳುಹಿಸಿಕೊಡಬೇಕು.

ಅರ್ಹ ಅಭ್ಯರ್ಥಿಗಳಿಗೆ ನಿಯಮಾನುಸಾರ ಸಂದರ್ಶನ ದಿನಾಂಕವನ್ನು ಪತ್ರದ ಮೂಲಕ ತಿಳಿಸಲಾಗುವುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+