Railway Recruitment 2023: ಹುಬ್ಬಳ್ಳಿ-ಬೆಂಗಳೂರಿನಲ್ಲೇ ಸರ್ಕಾರಿ ಉದ್ಯೋಗ, ವೇತನ, ಹುದ್ದೆ ಪೂರ್ಣ ವಿವರ ನೋಡಿ

ಬೆಂಗಳೂರು, ಜಲೈ 04: ನೈಋತ್ಯ ರೈಲ್ವೆ (ದಕ್ಷಿಣ ಪಶ್ಚಿಮ ರೈಲ್ವೆ-SWR) ತನ್ನಲ್ಲಿ ಖಾಲಿ ಇರುವ ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಉತ್ತರ ಕರ್ನಾಟಕದ ಉತ್ತರ ಭಾಗದ ಹುಬ್ಬಳ್ಳಿ ಮತ್ತು ದಕ್ಷಿಣ ಭಾಗದ ಬೆಂಗಳೂರಿನಲ್ಲಿ ಸರ್ಕಾರಿ ಉದ್ಯೊಗ ಅರಸುತ್ತಿರುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ನೈಋತ್ಯ ರೈಲ್ವೆ (SWR)ಯು ಖಾಲಿ ಇರುವ 904 ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಮುಂದಿನ ತಿಂಗಳ ಆಗಸ್ಟ್ 02 ರೊಳಗೆ ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಸಲ್ಲಿಕೆಗೂ ಮುನ್ನ ಅಭ್ಯರ್ಥಿಗಳು ಇಲ್ಲಿ ತಿಳಿಸಲಾಗಿರುವ ಅರ್ಜಿ ಸಲ್ಲಿಕೆ ವಿಧಾನ, ವೇತನ, ಶೈಕ್ಷಣಿಕ ಅರ್ಹತೆ, ವಯೋಮಿತಿ ಇನ್ನಿತರ ಅಂಶಗಳನ್ನು ಗಮನಿಸಬೇಕು. ಜೊತೆಗೆ ರೈಲ್ವೆ ಇಲಾಖೆ ಅಧಿಸೂಚನೆ ಪೂರ್ಣ ಓದಿಕೊಂಡು ಅರ್ಜಿ ಸಲ್ಲಿಸಿದರೆ ಒಳಿತು.

SWR Recruitment 2023: SWR Invited Applications 904 Apprentice Jobs, Apply Till August 2nd

ಹುದ್ದೆಗಳ ಸಂಪೂರ್ಣ ವಿವರ

ಸಂಸ್ಥೆ ಹೆಸರು: ನೈಋತ್ಯ ರೈಲ್ವೆ (SWR)

ಖಾಲಿ ಹುದ್ದೆಗಳು- 904

ಹುದ್ದೆಯ ಹೆಸರು: ಅಪ್ರೆಂಟಿಸ್

ವೇತನ- ನಿಗದಿ ಮಾಡಿಲ್ಲ

ಉದ್ಯೋಗ ಸ್ಥಳ: ಹುಬ್ಬಳ್ಳಿ, ಮೈಸೂರು, ಬೆಂಗಳೂರು

ಪ್ರದೇಶವಾರು ಹುದ್ದೆ ಮಾಹಿತಿ

ಬೆಂಗಳೂರು - 230

ಮೈಸೂರು- 177

ಮೈಸೂರು ಕೇಂದ್ರ ಕಾರ್ಯಾಗಾರ- 43

ಹುಬ್ಬಳ್ಳಿ - 237

ಹುಬ್ಬಳ್ಳಿ ಗಾಡಿ ದುರಸ್ತಿ ಕಾರ್ಯಾಗಾರ- 217

ವಿದ್ಯಾರ್ಹತೆ ಏನಿರಬೇಕು

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಯು ಮಾನ್ಯತೆ ಪಡೆದ ಯಾವುದೇ ವಿಶ್ವವಿದ್ಯಾಲಯ ಅಥವಾ ಮಂಡಳಿಗಳಿಂದ SSLC, ITI, NTC ಯಲ್ಲಿ ಉತ್ತೀರ್ಣಗೊಂಡಿರಬೇಕು ಎಂದು ನೈಋತ್ಯ ರೈಲ್ವೆ (SWR) ಅಧಿಕೃತ ಅಧಿಸೂಚನೆ ತಿಳಿಸಿದೆ.

SWR Recruitment 2023: SWR Invited Applications 904 Apprentice Jobs, Apply Till August 2nd

ವಯೋಮಿತಿ ಮತ್ತು ಸಡಿಲಿಕೆ ವಿವರ

ನೈಋತ್ಯ ರೈಲ್ವೆ ನೇಮಕಾತಿ ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಯ ಕೊನೆ ದಿನವಾದ ಮುಂದಿನ ತಿಂಗಳ 02-ಆಗಸ್ಟ್ 2023ರ ಹೊತ್ತಿಗೆ ಕನಿಷ್ಠ 15 ವರ್ಷ ಹಾಗೂ ಗರಿಷ್ಠ 24 ವರ್ಷ ಮೀರಿರಬಾರದು. ಈ ಅರ್ಹತೆಯಲ್ಲಿ ಜಾತಿವಾರು ಸಡಿಲಿಕೆ ನೀಡಲಾಗಿದೆ. ಎಸ್‌ಸಿ ಎಸ್‌ಟಿ ಅಭ್ಯರ್ಥಿಗಳಿಗೆ ಐದು ವರ್ಷ, ಇತರೆ ಹಿಂದುಳಿದ ವರ್ಗ (OBC) ಅಭ್ಯರ್ಥಿಗಳಿಗೆ 03 ವರ್ಷ ಹಾಗೂ ವಿಶೇಷಚೆತನ (PwD) ಅಭ್ಯರ್ಥಿಗಳಿಗೆ 10 ವರ್ಷಗಳ ವರೆಗೆ ವಯೋಮಿತಿ ಸಡಿಲಿಕೆ ಇರಲಿದೆ.

ಆಯ್ಕೆ ಪ್ರಕ್ರಿಯೆ: ಅರ್ಜಿ ಶುಲ್ಕ ಮಾಹಿತಿ

ಎಸ್‌ಸಿ ಎಸ್‌ಟಿ ವರ್ಗದವರಿಗೆ, ಮಹಿಳಾ ಅಭ್ಯರ್ಥಿಗಳು ಮತ್ತು ವಿಶೇಷ ಚೇತನ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ. ಇನ್ನುಳಿದಂತೆ ಬೇರೆಲ್ಲ ವರ್ಗದ ಅಭ್ಯರ್ಥಿಗಳಿಗೆ 100ರೂಪಾಯಿ ಅರ್ಜಿ ಶುಲ್ಕ ನಿದಿಪಡಿಸಲಾಗಿದೆ. ಈ ಹಣವನ್ನು ನೀವು ಆನ್ಲೈನ್ ಮೂಲಕ ಪಾವತಿಸಬೇಕಿದೆ.

ಅಭ್ಯರ್ಥಿಗಳನ್ನು ಅವರು ಗಳಿಸಿರುವ ಅಂಕಗಳು/ಮೆರಿಟ್ ಆಧಾರದಲ್ಲಿ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುವುದು ಎಂದು ರೈಲ್ವೆಯ ಅಧಿಸೂಚನೆ ಹೇಳಿದೆ.

SWR ನೇಮಕಾತಿ 2023 ಗೆ ಅರ್ಜಿ ಸಲ್ಲಿಸುವುದು ಹೇಗೆ

ಅಭ್ಯರ್ಥಿಗಳು ಆನ್‌ಲೈನ್‌ ಅರ್ಜಿ ಸಲ್ಲಿಸಲು ಮೊದಲು ಅಧಿಕೃತ ವೆಬ್‌ಸೈಟ್‌ https://jobs.rrchubli.in/act-2223/ಗೆ ಬೇಟಿ ನೀಡಬೇಕು. ಅಲ್ಲಿ ಸರಿಯಾದ ಇಮೇಲ್ ಐಡಿ ಮತ್ತು ಮೊಬೈಲ್ ನಂಬರ್ ನಮೂದಿಸಬೇಕು. ಜೊತೆಗೆ ಅಗತ್ಯ ಐಟಿ ಕಾರ್ಡ್‌, ವಯಸ್ಸು, ಶೈಕ್ಷಣಿಕ ಅರ್ಹತೆ, ಅನುಭವದ ಮಾಹಿತಿಗಳನ್ನು ಒದಗಿಸಿ. ಜೊತೆಗೆ ನಿಮಗೆ ನಿಗದಿಯಾಗಿರುವ ಅರ್ಜಿ ಶುಲ್ಕ ಪಾವತಿಸಿ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+