SSC Recruitment: PUC ಪಾಸಾದವರಿಗೂ ಕೇಂದ್ರ ಸರ್ಕಾರಿ ಉದ್ಯೋಗ: 2006 ಹುದ್ದೆಗಳಿಗೆ ಈಗಲೇ ಅರ್ಜಿ ಹಾಕಿ
ಬೆಂಗಳೂರು, ಜುಲೈ 29: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ತನ್ನಲ್ಲಿ ಖಾಲಿ ಇರುವ ಸಾವಿರಾರು ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಪಿಯುಸಿ ಪಾಸಾದವರು ಸಹ ಅರ್ಜಿ ಹಾಕುವ ಮೂಲಕ ಕೇಂದ್ರ ಸರ್ಕಾರಿ ಉದ್ಯೋಗ ಪಡೆದುಕೊಳ್ಳುವ ಬಂಪರ್ ಅವಕಾಶ ನೀಡಲಾಗಿದೆ.
ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ನಲ್ಲಿ ಒಟ್ಟು 2006 ಸ್ಟೆನೋಗ್ರಾಫರ್ ಹುದ್ದೆಗಳು ಖಾಲಿ ಇವೆ. ಆಸಕ್ತರು ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮುಂದಿನ ತಿಂಗಳು ಆಗಸ್ಟ್ 17ರೊಳಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ. ನೀವು ಅರ್ಜಿ ಹಾಕಲು ಅಧಿಕೃತ ವೆಬ್‌ಸೈಟ್ ssc.nic.in ಗೆ ಭೇಟಿ ನೀಡಬೇಕು.

ಹೆಚ್ಚಿನ ಮಾಹಿತಿಗಾಗಿ ಅರ್ಜಿ ಸಲ್ಲಿಕೆ ಮೊದಲು ಯಾವೆಲ್ಲ ಹುದ್ದೆಗಳು ಖಾಲಿ ಇವೆ. ಶೈಕ್ಷಣಿಕ ಅರ್ಹತೆ, ವೇತನ, ವಯೋಮಿತಿ, ಅರ್ಜಿ ಶುಲ್ಕ, ಇನ್ನಿತರ ನೇಮಕಾತಿ ಪೂರ್ಣ ಮಾಹಿತಿ ಇಲ್ಲಿದೆ. ಅಧಿಸೂಚನೆ ಓದಿಕೊಂಡು ಸಹ ಅರ್ಜಿ ಸಲ್ಲಿಸಬಹುದು.
ನೇಮಕಾತಿ ಪೂರ್ಣ ಮಾಹಿತಿ
ನೇಮಕಾತಿ ಸಂಸ್ಥೆ ಹೆಸರು: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC)
ಹುದ್ದೆಗಳ ಹೆಸರು: ಸ್ಟೆನೋಗ್ರಾಫರ್ ಹುದ್ದೆಗಳು
ಒಟ್ಟು ಹುದ್ದೆ: 2006
ಪೋಸ್ಟಿಂಗ್: ಭಾರತದಲ್ಲಿ ಎಲ್ಲಿಯಾದರೂ
ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ: ssc.nic.in
ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಆಗಸ್ಟ್ 17
ಶೈಕ್ಷಣಿಕ ಅರ್ಹತೆ
ಅರ್ಹ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ 12ನೇ ತರಗತಿ/ಪಿಯುಸಿ ಪಾಸಾಗಿರಬೇಕು ಎಂದು ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.
ವಯಸ್ಸಿನ ಮಿತಿ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳ ವಯಸ್ಸು ಅರ್ಜಿ ಸಲ್ಲಿಕೆ ತಿಂಗಳಾದ ಆಗಸ್ಟ್ 1ರ ಹೊತ್ತಿಗೆ ಕನಿಷ್ಠ 18 ಹಾಗೂ ಗರಿಷ್ಠ 40 ವರ್ಷವೆಂದು ನಿಗದಿ ಮಾಡಲಾಗಿದೆ. ಜಾತಿ ಮೀಸಲಾತಿ ಅನುಗುಣವಾಗಿ ಅರ್ಹರಿಗೆ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು.
ಸ್ಟೆನೋಗ್ರಾಫರ್ ಗ್ರೇಡ್ ಸಿ ಹುದ್ದೆಗೆ ವಯಸ್ಸಿನ ಮೀತಿ 18ರಿಂದ 30 ವರ್ಷ ಹಾಗೂ ಸ್ಟೆನೋಗ್ರಾಫರ್ ಗ್ರೇಡ್ ಡಿ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ 18ರಿಂದ 27 ವರ್ಷ ವಯಸ್ಸಾಗಿರಬೇಕು.

ವಯಸ್ಸಿನ ಸಡಿಲಿಕೆ ಯಾರಿಗೆಲ್ಲ ಸಿಗಲಿದೆ?
ಹಿಂದುಳಿದ ವರ್ಗದ (OBC) ಅಭ್ಯರ್ಥಿಗಳಿಗೆ ಜಾತಿ ಮೀಸಲಾತಿಗೆ ಅನುಗುಣವಾಗಿ 03 ವರ್ಷ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಐದು ವರ್ಷ, PWD ಅಭ್ಯರ್ಥಿಗಳಿಗೆ 10 ವರ್ಷವಾದರೆ, ಹಿಂದುಳಿದ ವರ್ಗದ PWD ಅಭ್ಯರ್ಥಿಗಳಿಗೆ 13 ವರ್ಷ ಹಾಗೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ PWD ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ 15 ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಸಿಗಲಿದೆ.
ಅರ್ಜಿ ಶುಲ್ಕದ ಮಾಹಿತಿ
OC / BC / MBC ಅಭ್ಯರ್ಥಿಗಳಿಗೆ ಮಾತ್ರವೇ ಅರ್ಜಿ ಶುಲ್ಕ 100 ರೂ.ನಿಗದಿ ಮಾಡಲಾಗಿದೆ. ಉಳಿದ ಯಾವುದೇ ಜಾತಿ ಸಮುದಾಯ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಶುಲ್ಕ ಕೊಡಬೇಕಾಗಿಲ್ಲ ಎಂದು ಎಸ್‌ಎಸ್‌ಸಿ ಅಧಿಸೂಚನೆ ಸ್ಪಷ್ಟಪಡಿಸಿದೆ.
ಆಯ್ಕೆ ಪ್ರಕ್ರಿಯೆ, ವೇತನ & ಪೋಸ್ಟಿಂಗ್ ಮಾಹಿತಿ
ಅರ್ಜಿ ಸಲ್ಲಿಸಿರುವ ಅಭ್ಯರ್ಥಿಗಳನ್ನು ವಿವಿಧ ಪರೀಕ್ಷೆಗಳ ಮೂಲಕ ಆನ್‌ಲೈನ್ ಲಿಖಿತ ಪರೀಕ್ಷೆ (CBT), ಸ್ಟೆನೋಗ್ರಫಿ ಕೌಶಲ್ಯ ಪರೀಕ್ಷೆ ನಡೆಯಲಿದೆ. ನಂತರ ಅಭ್ಯರ್ಥಿಗಳ ದಾಖಲೆ ಪರಿಶೀಲನೆ ನಡೆಸಿ, ಕೊನೆಗೆ ವೈದ್ಯಕೀಯ ಪರೀಕ್ಷೆ ನಡೆಸಿ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಯ್ಕೆ ಆಗುವವರಿಗೆ ಮಾಸಿಕ ವೇತನ ನಿಗದಿಪಡಿಸಿಲ್ಲ. ಕಾರ್ಯಾನುಭವ ಆಧಾರದಲ್ಲಿ ನಿಯಮಾನುಸಾರ ವೇತನ ನೀಡಲಾಗುವುದು ಹಾಗೂ ಭಾರತದಲ್ಲಿ ಎಲ್ಲಿ ಬೇಕಾದರೂ ಪೋಸ್ಟಿಂಗ್ ನೀಡಲಾಗುವುದು ಎಂದು ಎಸ್‌ಎಸ್‌ಸಿ ಮಾಹಿತಿ ನೀಡಿದೆ.
ನೆನಪಿಡಬೇಕಾದ ದಿನಗಳು
ಅರ್ಜಿ ಸಲ್ಲಿಕೆ ಆರಂಭ ದಿನ: ಜುಲೈ 26
ಅರ್ಜಿ ಸಲ್ಲಿಕೆ ಕೊನೆ ದಿನ: ಆಗಸ್ಟ್ 17
ಅರ್ಜಿ ಶುಲ್ಕ ಪಾವತಿಗೆ ಕಡೆಯ ದಿನಾಂಕ: ಆಗಸ್ಟ್ 18












Click it and Unblock the Notifications