SSC Recruitment 2023: ಒಟ್ಟು 99 ಹುದ್ದೆ ಖಾಲಿ ಇವೆ, ಕೂಡಲೇ ಅರ್ಜಿ ಹಾಕಿ ಸರ್ಕಾರಿ ಉದ್ಯೋಗ ಪಡೆಯಿರಿ
ಬೆಂಗಳೂರು, ಸೆಪ್ಟಂಬರ್ 20: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಪ್ರಕ್ರಿಯೆ ಆರಂಭಿಸಿದ್ದು, ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ಹುದ್ದೆ ಸೇರಬಯಸುವವರು ಆನ್ಲೈನ್ ಮೂಲಕ ಈ ಕೂಡಲೇ ಅರ್ಜಿ ಹಾಕಿ ಕೈ ತುಂಬ ಸಂಬಳದ ಉದ್ಯೋಗ ಸೇರಬಹುದಾಗಿದೆ.
ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) ಒಟ್ಟು 99 ಸೀನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್/ ಅಪ್ಪರ್ ಡಿವಿಶನ್ ಕ್ಲರ್ಕ್ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಸ್ಟಾಫ್ ಸೆಲೆಕ್ಷನ್ ಕಮಿಷನ್(SSC)ನ ಅಧಿಕೃತ ವೆಬ್ಸೈಟ್ಗೆ ಭೇಟಿ ನೀಡಿ ಅಧಿಸೂಚನೆ ಪೂರ್ತಿ ಓದಿ ಅಕ್ಟೋಬರ್ 3ರೊಳಗೆ ಅರ್ಜಿ ಸಲ್ಲಿಸಬೇಕು.

ನೇಮಕಾತಿ ವಿವರ
ಸಂಸ್ಥೆ ಹೆಸರು: ಸ್ಟಾಫ್ ಸೆಲೆಕ್ಷನ್ ಕಮಿಷನ್
ಖಾಲಿ ಹುದ್ದೆ ಹೆಸರು: ಸೀನಿಯರ್ ಸೆಕ್ರೆಟರಿಯೇಟ್ ಅಸಿಸ್ಟೆಂಟ್/ ಅಪ್ಪರ್ ಡಿವಿಶನ್ ಕ್ಲರ್ಕ್
ಒಟ್ಟು ಹುದ್ದೆ: 99
ಪೊಸ್ಟಿಂಗ್: ಭಾರತದಲ್ಲಿ ಎಲ್ಲಿಯಾದರೂ ಕೊಡಬಹುದು
ಮಾಸಿಕ ವೇತನ: 25,500 ರೂ.ನಿಂದ 81,100 ರೂ.
ವಯಸ್ಸಿನ ಮಿತಿ
ಅಭ್ಯರ್ಥಿಗಳ ವಯಸ್ಸು ಸೆಪ್ಟೆಂಬರ್ ಇದೇ 12 ಗರಿಷ್ಠ 50 ವರ್ಷ ವಯಸ್ಸು ಮೀರಿರಬಾರದು. ಇನ್ನೂ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗಿದೆ.

ಮಾಸಿಕ ವೇತನ
ಅರ್ಜಿ ಸಲ್ಲಿಸಿ ನೇಮಕಾತಿ ಪ್ರಕ್ರಿಯೆಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ₹ 25,500-81,100 ಸಂಬಳ ನಿಗದಿ ಮಾಡಲಾಗಿದೆ. ಭಾರತದ ಎಲ್ಲಿಯಾದರೂ ಕೆಲಸ ಮಾಡಲು ಅಭ್ಯರ್ಥಿಗಳು ಸಿದ್ಧರಿರಬೇಕು ಎಂದು ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ ಅಧಿಸೂಚನೆ ತಿಳಿಸಿದೆ.
ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಕೆ ವಿಳಾಸ ನೋಡುವುದಾದರೆ, ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳ ಸಹಿತ 'ಪ್ರಾದೇಶಿಕ ನಿರ್ದೇಶಕರು, ಸಿಬ್ಬಂದಿ ಆಯ್ಕೆ ಆಯೋಗ (ಉತ್ತರ ಪ್ರದೇಶ) ಬ್ಲಾಕ್ ನಂ.12, C.G.O. ಕಾಂಪ್ಲೆಕ್ಸ್, ಲೋಧಿ ರಸ್ತೆ, ನವದೆಹಲಿ-110003 ಇಲ್ಲಿಗೆ ಕಳಹಿಸಬೇಕು.
ನೆನಪಿಡಬೇಕಾದ ದಿನಾಂಕ
*ಆನ್ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆ ದಿನ - ಅಕ್ಟೋಬರ್ 3
*ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆ ದಿನ- ಅಕ್ಟೋಬರ್ 13
*ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ: ಫೆಬ್ರವರಿ-ಮಾರ್ಚ್ 2024












Click it and Unblock the Notifications