ಸ್ಟಾಫ್ ಸೆಲೆಕ್ಷನ್ ಕಮಿಷನ್ ನೇಮಕಾತಿ: 3261 ಹುದ್ದೆಗಳಿವೆ

ನವದೆಹಲಿ, ಅಕ್ಟೋಬರ್ 4: ಸ್ಟಾಫ್ ಸೆಲೆಕ್ಷನ್ ಕಮಿಷನ್ (SSC) 2021ನೇ ಸಾಲಿನ ನೇಮಕಾತಿ ಮುಂದುವರೆಸಿದೆ. ವಿವಿಧ ಹುದ್ದೆಗಳ ನೇಮಕಾತಿ ಕುರಿತಂತೆ ಅಧಿಕೃತ ವೆಬ್ ತಾಣಗಳಲ್ಲಿ ಪ್ರಕಟಿಸಿದೆ. ಕರ್ನಾಟಕ ಕೇರಳ ವಿಭಾಗದ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ತಮ್ಮ ಅರ್ಜಿಗಳನ್ನು ಆನ್ ಲೈನ್ ಮೂಲಕ ಅಕ್ಟೋಬರ್ 25ರೊಳಗೆ ಸಲ್ಲಿಸಬಹುದು.

ಸಂಸ್ಥೆ ಹೆಸರು: Staff Selection Commission(SSC)
ಹುದ್ದೆ ಹೆಸರು: phase 9
ಒಟ್ಟು ಹುದ್ದೆ: 3261

ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಅಕ್ಟೋಬರ್ 25, 2021

ಹುದ್ದೆ ಹೆಸರು-ಹುದ್ದೆ ಸಂಖ್ಯೆ
SSC ER ಪ್ರದೇಶ: 800
SSC KKR ಪ್ರದೇಶ: 117
SSC MPR ಪ್ರದೇಶ: 137
SSC NR ಪ್ರದೇಶ: 1159
SSC NWR ಪ್ರದೇಶ: 618
SSC SR ಪ್ರದೇಶ: 159
SSC WR ಪ್ರದೇಶ: 271

SSC KKR Recruitment 2021 KKR 3261 Phase 9 vacancies

ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ 10, 12, ಪದವಿ ಅಥವಾ ತತ್ಸಮಾನ ವಿದ್ಯಾರ್ಹತೆ.

ವಯೋಮಿತಿ: SSC ನಿಯಮಾವಳಿಯಂತೆ 18 ರಿಂದ 30 ವರ್ಷ(01/01/2021ರಂತೆ).
ಒಬಿಸಿ ಅಭ್ಯರ್ಥಿ: 3 ವರ್ಷ
ಎಸ್ ಸಿ, ಎಸ್ಟಿ ಅಭ್ಯರ್ಥಿ: 5 ವರ್ಷ
ದಿವ್ಯಾಂಗ: 10 ವರ್ಷ
ದಿವ್ಯಾಂಗ + ಒಬಿಸಿ: 13 ವರ್ಷ
ದಿವ್ಯಾಂಗ: ಎಸ್ ಸಿ/ ಎಸ್ ಟಿ: 15 ವರ್ಷ ವಿನಾಯತಿ ಸಿಗಲಿದೆ.

ಅರ್ಜಿ ಶುಲ್ಕ:
ಎಸ್ ಸಿ/ ಎಸ್ಟಿ/ ಮಾಜಿಯೋಧ/ ಮಹಿಳೆ: ಯಾವುದೇ ಶುಲ್ಕ.
ಸಾಮಾನ್ಯ, ಇತರೆ: 100ರು
ಶುಲ್ಕ ಪಾವತಿ: ಆನ್ ಲೈನ್ ಅಥವಾ ಆಫ್ ಲೈನ್ ಚಲನ್.

ಆನ್‌ಲೈನ್‌ನಲ್ಲಿ BHIM ಯುಪಿಐ, ನೆಟ್ ಬ್ಯಾಂಕಿಂಗ್, ವೀಸಾ, ಮಾಸ್ಟರ್ ಕಾರ್ಡ್, ಮಾಸ್ಟ್ರೋ, ರುಪೇ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ಬಳಸಬಹುದು. ಅಥವಾ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಬ್ರ್ಯಾಂಚ್ ಮೂಲಕ ಎಸ್ ಬಿ ಐ ಚಲನ್ ಪಡೆದುಕೊಳ್ಳಬಹುದು.

ನೇಮಕಾತಿ:
ಕಂಪ್ಯೂಟರ್ ಆಧಾರಿತ ಪರೀಕ್ಷೆ, ನೆಗಟಿವ್ ಮಾರ್ಕ್ಸ್ ಪರೀಕ್ಷೆ, ಕೌಶಲ್ಯ ಪರೀಕ್ಷೆ, ಟೈಪಿಂಗ್/ ಡೇಟಾ ಎಂಟ್ರಿ/ ಕಂಪ್ಯೂಟರ್ ಜ್ಞಾನ.

ಪ್ರಮುಖ ದಿನಾಂಕ:
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 24/09/2021
ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 25/10/2021
2022ರ ಜನವರಿ ಅಥವಾ ಫೆಬ್ರವರಿ ತಿಂಗಳಲ್ಲಿ ಕಂಪ್ಯೂಟರ್ ಪರೀಕ್ಷೆ ನಡೆಯುವ ಸಾಧ್ಯತೆಯಿದೆ.

ಅರ್ಜಿ ಸಲ್ಲಿಸುವ ವಿಧಾನ:
* SSC ನೇಮಕಾತಿ ಅಧಿಸೂಚನೆ 2021ರಲ್ಲಿ ನೀಡಿರುವಂಥ ಕರ್ನಾಟಕ-ಕೇರಳ ವಿಭಾಗದ ಪ್ರಕಟಣೆಯನ್ನು ತಪ್ಪದೇ ಓದಿ ನಂತರ ಅರ್ಜಿ ಭರ್ತಿ ಮಾಡಿ
* ಅರ್ಹತೆ ಇದ್ದ ಅಭ್ಯರ್ಥಿಗಳು SSC ವೆಬ್ ತಾಣದಲ್ಲಿ ನೇಮಕಾತಿ ಲಿಂಕ್ ಕ್ಲಿಕ್ ಮಾಡಿ.
* ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಚಾಲ್ತಿಯಲ್ಲಿರುವ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ
* ವಿದ್ಯಾರ್ಹತೆಗೆ ತಕ್ಕ ದಾಖಲೆ, ವಯೋಮಿತಿ ದಾಖಲೆಯನ್ನು ಲಗತ್ತಿಸಿ, ಗೇಟ್ ಪರೀಕ್ಷೆ ವಿಷಯ ಹಾಗೂ ಅಂಕ ವಿವರಗಳನ್ನು ಒದಗಿಸಬೇಕು.
* ಅರ್ಜಿ ಜೊತೆಗೆ 10ನೇ ತರಗತಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅನುಭವ ಆಧಾರ ಪತ್ರ, ಗುರುತಿನ ದೃಢೀಕರಣ ಪತ್ರ ಹಾಗೂ ಇನ್ನಿತರ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದ್ದು.
* SSC ವೆಬ್ ತಾಣದಲ್ಲಿ ಸಂಬಂಧಪಟ್ಟ ಹುದ್ದೆಯ ಲಿಂಕ್ ಮಾತ್ರ ಕ್ಲಿಕ್ ಮಾಡಿ
* ಭರ್ತಿಯಾಗಿ ಅರ್ಜಿ ಜೊತೆಗೆ ಅಗತ್ಯ ದಾಖಲೆ, ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಒದಗಿಸಿ, ಇತ್ತೀಚಿನ ಭಾವಚಿತ್ರ ನೀಡಿ
* ಅರ್ಜಿ ಸಲ್ಲಿಕೆ ನಂಬರ್, ಸ್ವೀಕೃತಿ ಸಂಖ್ಯೆಯನ್ನು ಗುರುತಿಟ್ಟುಕೊಳ್ಳಿ, ಪರೀಕ್ಷೆ ನಡೆಯುವ ಮುಂದಿನ ದಿನಾಂಕದ ಬಗ್ಗೆ ನಿಮ್ಮ ಇಮೇಲ್, ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲಾಗುತ್ತದೆ.

ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+