156 ಹುದ್ದೆಗಳ ಭರ್ತಿಗೆ ಅರ್ಜಿಗಳನ್ನುಕರೆದ ಸಶಸ್ತ್ರ ಸೀಮಾ ದಳ
ಬೆಂಗಳೂರು, ಫೆಬ್ರವರಿ 01 : ಎಸ್‌ಎಸ್‌ಬಿ ಇನ್ಸ್‌ಪೆಕ್ಟರ್ ಮತ್ತು ಇಂಜಿನಿಯರ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಗಳನ್ನು ಸಲ್ಲಿಸಲು 28/3/2019 ಕೊನೆಯ ದಿನವಾಗಿದೆ.
ಸಶಸ್ತ್ರ ಸೀಮಾ ದಳ (ಎಸ್‌ಎಸ್‌ಬಿ) 156 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಇನ್ಸ್‌ಪೆಕ್ಟರ್, ಸುಬೇದಾರ್ ಮೇಜರ್, ಸಬ್ ಇನ್ಸ್‌ಪೆಕ್ಟರ್, ಡೆಪ್ಯೂಟಿ ಇನ್ಸ್‌ಪೆಕ್ಟರ್ ಜನರಲ್, ಸೀನಿಯರ್ ಫೀಲ್ಡ್ ಆಫೀಸರ್, ಚೀಫ್ ವೆಟರ್‌ನಿಟಿ ಆಫೀಸರ್, ಎಕ್ಸಿಕ್ಯೂಟೀವ್ ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ.
ಅರ್ಜಿಗಳನ್ನು ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೊಮಾ, ಯಾವುದೇ ಪದವಿ ಅಥವ ತತ್ಸಮಾನ ವಿದ್ಯಾರ್ಹತೆಯನ್ನು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವ ಸಂಸ್ಥೆಯಿಂದ ಪೂರ್ಣಗೊಳಿಸಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 52 ವರ್ಷದ ಗರಿಷ್ಠ ವಯೋಮಿತಿಯನ್ನು ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳನ್ನು ಲಿಖಿತ, ದೈಹಿಕ, ವೈದ್ಯಕೀಯ ಪರೀಕ್ಷೆಗಳ ಮೂಲಕ ಆಯ್ಕೆ ಮಾಡಲಾಗುತ್ತದೆ.
ಅರ್ಜಿ ಹಾಕುವುದು ಹೇಗೆ? : ಅಭ್ಯರ್ಥಿಗಳು ಅರ್ಜಿಗಳನ್ನು ಭರ್ತಿ ಮಾಡಿ, ಸಹಿ ಹಾಕಿ, ವಿದ್ಯಾರ್ಹತೆ, ಜನನ, ಗುರುತಿನ ಚೀಟಿಯ ನಕಲು ಪ್ರತಿಗಳೊಂದಿಗೆ ಜಾತಿ ಪ್ರಮಾಣ ಪತ್ರ ಮತ್ತು ಇತರ ದಾಖಲೆಗಳನ್ನು ಸೇರಿಸಿ ಕೆಳಗಿನ ವಿಳಾಸಕ್ಕೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸಲು ವಿಳಾಸ : Assistant Director (Pers IV),
Directorate General, Sashastra Seema, Bal,
East Block V, R.K Puram, New Delhi - 110066.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications