28 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಎಸ್‌ಪಿಎಂಸಿಐಎಲ್

ಬೆಂಗಳೂರು, ಡಿಸೆಂಬರ್ 10 : ಎಸ್‌ಪಿಎಂಸಿಐಎಲ್ 28 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 3 ಜನವರಿ 2019 ಕೊನೆಯ ದಿನವಾಗಿದೆ.

ಸೆಕ್ಯುರಿಟಿ ಪ್ರಿಂಟಿಂಗ್ ಮತ್ತು ಮಿಂಟಿಂಗ್‌ ಕಾರ್ಪೊರೇಷನ್‌ ಆಫ್‌ ಇಂಡಿಯಾ ಲಿಮಿಟೆಡ್‌ (ಎಸ್‌ಪಿಎಂಸಿಐಎಲ್) ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದ್ದು, ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಿದೆ.

ಆಫೀಸರ್ (ಲೀಗಲ್) (ಇ-1 ಲೆವೆಲ್), ಆಫೀಸರ್ (ಐಟಿ) (ಇ-1 ಲೆವೆಲ್) ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 30 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. 3 ಜನವರಿ 2019ಕ್ಕೆ ಅನ್ವಯವಾಗುವಂತೆ.

SPMCIL recruitment 2019 : Apply for 28 Officer Posts

ವಿದ್ಯಾರ್ಹತೆ ವಿವರ : ಆಫೀಸರ್ (ಲೀಗಲ್) ಹುದ್ದೆಗೆ ಪ್ರಥಮ ದರ್ಜೆಯಲ್ಲಿ ಕಾನೂನು ಪದವಿಯನ್ನು (ರೆಗ್ಯುಲರ್ ಕೋರ್ಸ್) ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯದಿಂದ ಪೂರ್ಣಗೊಳಿಸಿರಬೇಕು.

ಆಫೀಸರ್ (ಐಟಿ) : ಪ್ರಥಮ ದರ್ಜೆಯಲ್ಲಿ ಎಂಸಿಎ/ಬಿಟೆಕ್ (ಕಂಪ್ಯೂಟರ್ ಇಂಜಿನಿಯರಿಂಗ್/ಐಟಿ)ಯನ್ನು ಮಾನ್ಯತೆ ಪಡೆದ ಸಂಸ್ಥೆ/ವಿಶ್ವವಿದ್ಯಾಲಯಗಳಿಂದ ಪೂರ್ಣಗೊಳಿಸಿರಬೇಕು.

ಆಯ್ಕೆಯಾದ ಅಭ್ಯರ್ಥಿಗಳಿಗೆ 40000-140000 ಪ್ರತಿ ತಿಂಗಳ ವೇತನ ನಿಗದಿ ಮಾಡಲಾಗಿದೆ.

ಅರ್ಜಿ ಶುಲ್ಕಗಳು : ಸಾಮಾನ್ಯ/ಓಬಿಸಿ ಅಭ್ಯರ್ಥಿಗಳಿಗೆ 400 ರೂ., ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ 100 ರೂ.ಗಳು.

ಆನ್‌ಲೈನ್ ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+