South Central Railway Recuritment 2023: ದಕ್ಷಿಣ ಮಧ್ಯೆ ರೈಲ್ವೆ ಇಲಾಖೆ:4103ಹುದ್ದೆ ಭರ್ತಿಗೆ ಅರ್ಜಿ ಆಹ್ವಾನ
ಬೆಂಗಳೂರು, ಜನವರಿ 18: ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಇಚ್ಛಿಸುವವರಿಗೆ ಸುವರ್ಣ ಅವಕಾಶ ದೊರೆತಿದೆ. ಹೌದು, ದಕ್ಷಿಣ ಮಧ್ಯೆ ರೈಲ್ವೆ ಇಲಾಖೆಯು ತನ್ನಲ್ಲಿ ಖಾಲಿ ಇರುವ ಒಟ್ಟು ಸುಮಾರು 4000 ಅಧಿಕಾರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆಕಸ್ತರು ಜನವರಿ 29ರೊಳಗೆ ಅರ್ಜಿ ಸಲ್ಲಿಬಹುದು.
ರೈಲ್ವೆ ನೇಮಕಾತಿ ಮಂಡಳಿ (ದಕ್ಷಿಣ ಮಧ್ಯೆ ರೈಲ್ವೆ) ಉದ್ಯೋಗ ಪ್ರಕಟಣೆ ಬಿಡುಗಡೆಗೊಳಿಸಿದೆ. ಈ ಹುದ್ದೆಗಳನ್ನು ಸೇಬಯಸುವವರು ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ. ಅರ್ಜಿ ಸಲ್ಲಿಕೆಗೆ ಬೇಕಾದ ಅರ್ಹತೆ, ಹುದ್ದೆಗಳ ವಿವರ ಸೇರಿದಂತೆ ಎಲ್ಲ ಮಾಹಿತಿ ಇಲ್ಲಿ ತಿಳಿದುಕೊಳ್ಳಿ.
ಹುದ್ದೆಗಳ ವಿವರ
ಖಾಲಿ ಇರುವ ಉದ್ದೆಗಳ ಸಂಖ್ಯೆ - 4103
ಎಸಿ ಮೆಕಾನಿಕ್ -250
ಕಾರ್ಪೆಂಟರ್ - 18
ಡೀಸೆಲ್ ಮೆಕ್ಯಾನಿಕ್ -531
ಇಲೆಕ್ಟ್ರಾನಿಕ್ಸ್ - 1019
ಇಲೆಕ್ಟ್ರಾನಿಕ್ ಮೆಕ್ಯಾನಿಕ್ - 92
ಫಿಟ್ಟರ್ - 1460
ಮಷಿನಿಸ್ಟ್ - 71
ಎಂಎಂಡಬ್ಲ್ಯೂ - 24
ಎಂಎಂಟಿಎಂ - 05
ಪೇಂಟರ್ - 80
ವೆಲ್ಡರ್ - 553

ವಿದ್ಯಾರ್ಹತೆ ಏನಿದೆ
ಅರ್ಜಿ ಸಲ್ಲಿಸಬಯಸುವ ಆಸಕ್ತ ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿಯನ್ನು ಕನಿಷ್ಠ 50 ಅಂಕ ಸಹಿತ ಉತ್ತೀರ್ಣವಾಗಿರಬೇಕು. ಜೊತೆಗೆ ಐಟಿಐ ಕೋರ್ಸ್ ಅನ್ನು ಹುದ್ದೆಗಳಿಗೆ ಅನುಗುಣವಾಗಿ ಆಯಾ ಟ್ರೇಡ್‌ನಡಿ ಉತ್ತೀರ್ಣ ಆಗಿರಬೇಕು.
ವಯಸ್ಸಿನ ಮಿತಿ
ಕನಿಷ್ಠ 15 ಹಾಗೂ ಗರಿಷ್ಠ 24 ವರ್ಷ ವಯೋಮಿತಿ ಮೀರದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ. ಇನ್ನೂ ಜಾತಿವಾರು ವಯಸ್ಸಿನ ಮೀತಿ ಮೀಸಲಾತಿ ನಿಯಮದಡಿ ಅರ್ಹರಿಗೆ ಅನ್ವಯವಾಗಲಿದೆ ಎಂದು ಇಲಾಖೆ ಅಧಿಸೂಚನೆ ತಿಳಿಸಿದೆ.
ಅರ್ಜಿ ಶುಲ್ಕ- ಆಯ್ಕೆ ವಿಧಾನ
ಸಾಮಾನ್ಯ ವರ್ಗ/ ಒಬಿಸಿ / ಇಡಬ್ಲುಎಸ್ ಅಭ್ಯರ್ಥಿಗಳಿಗೆ -100 ರೂ.ಶುಲ್ಕ
ಪರಿಶಿಷ್ಟ ಜಾರಿ, ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ
ಮೆಟ್ರಿಕ್ಯೂಲೇಷನ್ ನಲ್ಲಿನ ಶೇ.50 ಅಂಕಗಳು, ಐಟಿಐನ ಶೇ. 50 ಅಂಕಗಳನ್ನು ಪರಿಗಣಿಸಿ, ಟ್ರೇಡ್‌ವಾರು ಮೆರಿಟ್ ಲಿಸ್ಟ್ ಸಿದ್ಧಪಡಿಸಿ ಆಯ್ಕೆ ಮಾಡಲಾಗುತ್ತವುದು. ನಂತರ ಆಯ್ಕೆ ಪಟ್ಟಿ ಪ್ರಕಟಿಸಲಾಗುವುದು.

ಅರ್ಜಿ ಸಲ್ಲಿಕೆ ವಿಧಾನ
ಆಸಕ್ತ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ https://scr.indianrailways.gov.in/ ಗೆ ಭೇಟಿ ನೀಡಬೇಕು.
ಬಳಿಕ ಹೋಮ್ ಪೇಜ್‌ನಲ್ಲಿ ಕಾಣುವ ಅರ್ಜಿ ಸಲ್ಲಿಕೆಗೆ ನೀಡಲಾದ ಲಿಂಕ್ http://34.93.184.238/register.php ಮೇಲೆ ಕ್ಲಿಕ್ ಮಾಡಬೇಕು. ತೆರೆಯುವ ವೆಬ್ ಪುಟದಲ್ಲಿ ಅಗತ್ಯ ಮಾಹಿತಿ ಒದಗಿಸುವ ಮೂಲಕ ಅರ್ಜಿ ಸಲ್ಲಿಸಬೇಕು.
ಅರ್ಜಿ ಶುಲ್ಕವನ್ನು ಆನ್‌ಲೈನ್ ಮೂಲಕವೂ ಪಾವತಿಗೆ ಅವಕಾಶ ನೀಡಲಾಗಿದೆ.
ವೇತನ- ಉದ್ಯೋಗ ಸ್ಥಳ
ರೈಲ್ವೆ ನಿಗಮಗಳ ನಿಯಮಗಳ ಮೂಲಕ ವೇತನ, ಮಾಸಿಕ ಸ್ಟೈಫಂಡ್ ನೀಡಲಾಗುವುದು. ಆಯ್ಕೆ ಅಭ್ಯರ್ಥಿಗಳು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ತೆಲಂಗಾಣ ರಾಜ್ಯಗಳಲ್ಲಿ ಕಾರ್ಯ ನಿರ್ವಹಿಸಬೇಕು. ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಬೇಕು.












Click it and Unblock the Notifications