ಶಿವಮೊಗ್ಗ; ಆಯುಷ್ ಇಲಾಖೆ ನೇಮಕಾತಿ, ಅರ್ಜಿ ಹಾಕಿ

ಶಿವಮೊಗ್ಗ, ಸೆಪ್ಟೆಂಬರ್ 22: ಜಿಲ್ಲಾ ಪಂಚಾಯತ್ ಶಿವಮೊಗ್ಗ, ಜಿಲ್ಲಾ ಆಯುಷ್ ಅಧಿಕಾರಿಗಳ ಕಚೇರಿ 6 ಹುದ್ದೆಗಳ ನೇಮಕಾತಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು 29/9/2020ರ ಮಧ್ಯಾಹ್ನ 12ಗಂಟೆಯೊಳಗೆ ಅರ್ಜಿಗಳನ್ನು ಸಲ್ಲಿಸಬಹುದು.

ಆಯುಷ್ ನಿರ್ದೇಶನಾಲಯದ ಪತ್ರ ಸಂಖ್ಯೆ ಅನ್ವಯ ಹೆಲ್ತ್ ಅಂಡ್ ವೆಲ್ ನೆಸ್ ಸೆಂಟರ್‌ಗಳನ್ನಾಗಿ ಮೇಲ್ದರ್ಜೆಗೇರಿಸಲಾದ ಶಿವಮೊಗ್ಗ ಜಿಲ್ಲೆಯಲ್ಲಿನ ಮೂರು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳಿಗೆ ತಲಾ 2 ಹುದ್ದೆಗಳನ್ನು ನೇಮಕ ಮಾಡಲಾಗುತ್ತಿದೆ.

ತಲಾ 1 ಪುರುಷ, 1 ಮಹಿಳೆಯಂತೆ ಒಟ್ಟು 6 ಯೋಗ ತರಬೇತಿದಾರ ಹುದ್ದೆಗಳನ್ನು ಮೆರಿಟ್ ಆಧಾರದ ಮೇಲೆ ನೇಮಕ ಮಾಡಲಾಗುತ್ತಿದೆ. ಈ ಹುದ್ದೆಗಳು ಅರೆಕಾಲಿಕ ಎಂದು ನೇಮಕಾತಿ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.

ಆಸಕ್ತರು ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಅಧಿಕಾರಿಗಳ ಕಾರ್ಯಾಲಯವನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಲಾಗಿದೆ. 29/9/2020ರ ಮಧ್ಯಾಹ್ನ 2.30ರಿಂದ 5.30ರ ತನಕ ನೇರ ಸಂದರ್ಶನ ನಡೆಯಲಿದೆ.

ಮೊದಲನೇ ಯೋಗ ತರಬೇತಿದಾರ

ಮೊದಲನೇ ಯೋಗ ತರಬೇತಿದಾರ

ಮೊದಲನೇ ಯೋಗ ತರಬೇತಿದಾರ (3 ಹುದ್ದೆ) ಮಾಸಿಕ ವೇತನ 8000 ರೂ.ಗಳು. ಅರ್ಜಿ ಸಲ್ಲಿಸಿಸುವ ಅಭ್ಯರ್ಥಿಗಳು 10+2 ಪಾಸಾಗಿರಬೇಕು ಮತ್ತು ಯೋಗ ತರಬೇತಿದಾರ ಯೋಗ ಸರ್ಟಿಫಿಕೇಶನ್ ಬೋರ್ಡ್‌ನಿಂದ ಯೋಗ ವೆನ್ ನೆಸ್ ಇನ್‌ಸ್ಟ್ರಕ್ಟರ್ ಕೋರ್ಸ್ ಸರ್ಟಿಫಿಕೇಟ್ ಹೊಂದಿರಬೇಕು. 10+2 ಪಾಸಾಗಿರಬೇಕು ಜೊತೆಗೆ ಹೆಸರಾಂತ ಸಂಸ್ಥೆಯಿಂದ ಯೋಗ ತರಬೇತಿಯ ಅನುಭವ ಹೊಂದಿರಬೇಕು. ಸ್ಥಳೀಯರಿಗೆ ಆದ್ಯತೆ ನೀಡಲಾಗುತ್ತದೆ.

2ನೇ ಯೋಗ ತರಬೇತಿದಾರ

2ನೇ ಯೋಗ ತರಬೇತಿದಾರ

ಎರಡನೇ ಯೋಗ ತರಬೇತಿದಾರರು, ಮಹಿಳೆಯರು (3 ಹುದ್ದೆ). ಅಭ್ಯರ್ಥಿಗಳು 10+2 ಪಾಸಾಗಿರಬೇಕು ಮತ್ತು ಯೋಗ ತರಬೇತಿದಾರ ಯೋಗ ಸರ್ಟಿಫಿಕೇಶನ್ ಬೋರ್ಡ್‌ನಿಂದ ಯೋಗ ವೆನ್ ನೆಸ್ ಇನ್‌ಸ್ಟ್ರಕ್ಟರ್ ಕೋರ್ಸ್ ಸರ್ಟಿಫಿಕೇಟ್ ಹೊಂದಿರಬೇಕು. 10+2 ಪಾಸಾಗಿರಬೇಕು ಜೊತೆಗೆ ಹೆಸರಾಂತ ಸಂಸ್ಥೆಯಿಂದ ಯೋಗ ತರಬೇತಿಯ ಅನುಭವ ಹೊಂದಿರಬೇಕು.

ಅರ್ಜಿಗಳನ್ನು ಸಲ್ಲಿಸಿ

ಅರ್ಜಿಗಳನ್ನು ಸಲ್ಲಿಸಿ

ಆಸಕ್ತರು 29/9/2020ರಂದು ಬೆಳಗ್ಗೆ 10 ರಿಂದ 12ರ ತನಕ ಜಿಲ್ಲಾ ಆಯುಷ್ ಕಚೇರಿಯಲ್ಲಿ ಅರ್ಜಿಯನ್ನು ಪಡೆದು ಭರ್ತಿ ಮಾಡಿ, ಆಧಾರ್ ಕಾರ್ಡ್, ಎಸ್‌ಎಸ್‌ಎಲ್‌ಸಿ, ದ್ವಿತೀಯ ಪಿಯುಸಿ ಅಂಕಪಟ್ಟಿ, ಯೋಗ ತರಬೇತಿ ಪ್ರಮಾಣಪತ್ರಗಳ 1 ಸೆಟ್ ನಕಲು ಪ್ರತಿಯನ್ನು ಸಲ್ಲಿಸಬೇಕು. ಮಧ್ಯಾಹ್ನ 2.30 ರಿಂದ 5.30ರ ತನಕ ನೇರ ಸಂದರ್ಶನಕ್ಕೆ ಹಾಜರಾಗಬೇಕು.

ವಯೋಮಿತಿ ಸೂಚನೆಗಳು

ವಯೋಮಿತಿ ಸೂಚನೆಗಳು

ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕನಿಷ್ಠ 21 ವರ್ಷ, ಗರಿಷ್ಠ 60 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. ದ್ವಿತೀಯ ಪಿಯುಸಿ ಮೆರಿಟ್ ಆಧಾರದ ಮೇಲೆ ಆಯ್ಕೆ ನಡೆಯಲಿದೆ. ಯಾವುದೇ ಸಂದರ್ಭದಲ್ಲಿಯೂ ಕೂಡಾ ಸದರಿ ಹುದ್ದೆಯನ್ನು ಖಾಯಂ ಎಂದು ಪರಿಗಣಿಸುವುದಿಲ್ಲ. 11 ತಿಂಗಳ ಅವಧಿಗೆ ಅರೆಕಾಲಿಕವಾಗಿ ನೇಮಿಸಿಕೊಳ್ಳಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+