SBI Recruitment 2022: 664ಕ್ಕೂ ಅಧಿಕ ಹುದ್ದೆಗಳಿಗೆ ಅರ್ಜಿ ಆಹ್ವಾನ
ಬೆಂಗಳೂರು, ಸೆ.1: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 2022ನೇ ಸಾಲಿನ ನೇಮಕಾತಿ ಮುಂದುವರೆಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಸ್ಪೆಷಲಿಸ್ಟ್ ಕೆಡರ್ ಅಧಿಕಾರಿ(SCO) ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಸೆಪ್ಟೆಂಬರ್ 20ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಒಟ್ಟು ಹುದ್ದೆಗಳು: 664
ಹುದ್ದೆ ಹೆಸರು: Specialist Cadre Officers
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 20
ಹುದ್ದೆಗಳ ವಿವರ/ವಿದ್ಯಾರ್ಹತೆ:
* ಮ್ಯಾನೇಜರ್ (Performance Planning & Review)
ಒಟ್ಟು ಹುದ್ದೆ: 02
ವಿದ್ಯಾರ್ಹತೆ: ಅಭ್ಯರ್ಥಿಯು B.Com./B.E./B.Tech ಮತ್ತು ಮ್ಯಾನೇಜ್ಮೆಂಟ್ / MBA ನಲ್ಲಿ PG ಮತ್ತು 5 ವರ್ಷಗಳ ಅನುಭವವನ್ನು ಹೊಂದಿರಬೇಕು. ಬ್ಯಾಂಕಿಂಗ್/ವೆಲ್ತ್ ಮ್ಯಾನೇಜ್ಮೆಂಟ್, ಬ್ರೋಕಿಂಗ್ ಸಂಸ್ಥೆಗಳಲ್ಲಿನ ಅನುಭವ ಹೊಂದಿರುವವರಿಗೆ ಆದ್ಯತೆ.
* Central Operations Team(Support)
ಒಟ್ಟು ಹುದ್ದೆ: 02
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ ಪದವಿ, ಫೈನಾನ್ಸ್ ಸೇವೆ, ಸಲಹೆ, ಖಾಸಗಿ ಬ್ಯಾಂಕಿಂಗ್, ವೆಲ್ತ್ ಮ್ಯಾನೇಜ್ಮೆಂಟ್ ಕ್ಷೇತ್ರಗಳಲ್ಲಿ 3 ವರ್ಷಗಳ ಅನುಭವ.ವೆಲ್ತ್ ಮ್ಯಾನೇಜ್ಮೆಂಟ್, ಬ್ರೋಕಿಂಗ್ ಸಂಸ್ಥೆಗಳಲ್ಲಿನ ಅನುಭವ ಹೊಂದಿರುವವರಿಗೆ ಆದ್ಯತೆ.
* ಮ್ಯಾನೇಜರ್ Business Development)
ಒಟ್ಟು ಹುದ್ದೆ: 02
ವಿದ್ಯಾರ್ಹತೆ: ಅಭ್ಯರ್ಥಿಯು ಪದವಿಯನ್ನು ಹೊಂದಿರಬೇಕು ಮತ್ತು MBA/PGDM ಮತ್ತು 5 ವರ್ಷಗಳ ಅನುಭವವನ್ನು ಹೊಂದಿರಬೇಕು. ಬ್ಯಾಂಕಿಂಗ್/ವೆಲ್ತ್ ಮ್ಯಾನೇಜ್ಮೆಂಟ್, ಬ್ರೋಕಿಂಗ್ ಸಂಸ್ಥೆಗಳಲ್ಲಿನ ಅನುಭವ ಹೊಂದಿರುವವರಿಗೆ ಆದ್ಯತೆ.
* ಪ್ರಾಡೆಕ್ಟ್ ಮ್ಯಾನೇಜರ್( Business)
ಒಟ್ಟು ಹುದ್ದೆ: 02
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದಿರುವ ವಿಶ್ವವಿದ್ಯಾಲಯದಿಂದ MBA/PGDM ಮತ್ತು 5 ವರ್ಷಗಳ ಅನುಭವವನ್ನು ಹೊಂದಿರಬೇಕು. ಬ್ಯಾಂಕಿಂಗ್/ವೆಲ್ತ್ ಮ್ಯಾನೇಜ್ಮೆಂಟ್, ಬ್ರೋಕಿಂಗ್ ಸಂಸ್ಥೆಗಳಲ್ಲಿನ ಅನುಭವ, ಸೂಪರ್ ವೈಸರಿ ಕಾರ್ಯ ನಿರ್ವಹಣೆಯಲ್ಲಿ ಅನುಭವ ಹೊಂದಿರುವವರಿಗೆ ಆದ್ಯತೆ.
ಹುದ್ದೆಗಳು -ಒಟ್ಟು ಹುದ್ದೆಗಳ ಸಂಖ್ಯೆ
ಮ್ಯಾನೇಜರ್(Business Process) : 1
ಸೆಂಟ್ರಲ್ ಅಪರೇಷನ್ಸ್ ಟೀಂ- ಸಪೋರ್ಟ್: 2
ಪ್ರಾಜೆಕ್ಟ್ ಡೆವಲಪ್ಮೆಮ್ಟ್ ಮ್ಯಾನೇಜರ್ (Business): 2
ರಿಲೇಷನ್ ಶಿಪ್ ಮ್ಯಾನೇಜರ್: 335
ಇನ್ಮೆಷ್ಟ್ ಮೆಂಟ್ ಆಫೀಸರ್:52
ಹಿರಿಯ ರಿಲೇಷನ್ ಶಿಪ್ ಮ್ಯಾನೇಜರ್: 147
ರಿಲೇಷನ್ ಶಿಪ್ ಮ್ಯಾನೇಜರ್ (ಟೀಂ ಲೀಡ್): 37
ರಿಜನಲ್ ಹೆಡ್: 12
ಕಸ್ಟಮರ್ ರಿಲೇಷನ್ ಶಿಪ್ ಎಕ್ಸಿ ಕ್ಯೂಟಿವ್: 75

ವಯೋಮಿತಿ: ಸಾಮಾನ್ಯ ಹಾಗೂ ಮೀಸಲಾತಿ ರಹಿತ ಅಭ್ಯರ್ಥಿಗಳಿಗೆ ಕನಿಷ್ಠ 21 ವರ್ಷ ಗರಿಷ್ಠ 30 ವರ್ಷ (ಡಿಸೆಂಬರ್ 1, 2021ರಂತೆ). ಅಭ್ಯರ್ಥಿಗಳು 02/12/1991 ರಿಂದ 01/12/2000ರೊಳಗೆ ಜನಿಸಿದವರಾಗಬೇಕು.ದಿವ್ಯಾಂಗರಿಗೆ, ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ10 ವರ್ಷ, ಎಸ್ ಸಿ, ಎಸ್ಟಿ ಅಭ್ಯರ್ಥಿಗಳಿಗೆ 15 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 13 ವರ್ಷ, ಮಾಜಿ ಯೋಧ 05, ಹಿಂದುಳಿದ ವರ್ಗ 03 ವರ್ಷಗಳ ವಯೋಮಿತಿಯಲ್ಲಿ ವಿನಾಯಿತಿ ಇರುತ್ತದೆ.
ಅರ್ಜಿ ಶುಲ್ಕ:
ಸಾಮಾನ್ಯ/ ಒಬಿಸಿ/ಆರ್ಥಿಕವಾಗಿ ಹಿಂದುಳಿದ ವರ್ಗ: 750 ರು
ಎಸ್‌ಸಿ/ ಎಸ್ಟಿ/ ಮಾಜಿ ಯೋಧ: ಯಾವುದೇ ಶುಲ್ಕವಿಲ್ಲ
ಶುಲ್ಕಪಾವತಿ ವಿಧಾನ: ಡೆಬಿಟ್ ಕಾರ್ಡ್/ ಕ್ರೆಡಿಟ್ ಕಾರ್ಡ್/ ಇಂಟರ್ನೆಟ್ ಬ್ಯಾಂಕಿಂಗ್
ನೇಮಕಾತಿ ಪ್ರಕ್ರಿಯೆ: ಪ್ರಾಥಮಿಕ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆ, ಸಂದರ್ಶನ.
ಪ್ರಮುಖ ದಿನಾಂಕ:
ಆನ್‌ಲೈನ್‌ನಲ್ಲಿಅರ್ಜಿ ಸಲ್ಲಿಸಲು ಆರಂಭ ದಿನಾಂಕ : 31/08/2022
ಆನ್‌ಲೈನ್‌ನಲ್ಲಿಅರ್ಜಿ ಸಲ್ಲಿಸಲು ಕೊನೆ ದಿನಾಂಕ : 28/09/2022
ಆನ್‌ಲೈನ್‌ನಲ್ಲಿ ಪರೀಕ್ಷೆ ದಿನಾಂಕವನ್ನು ನಂತರ ಪ್ರಕಟಿಸಲಾಗುವುದು.
ಅರ್ಜಿ ಸಲ್ಲಿಸುವ ವಿಧಾನ:
* ಎಸ್‌ಬಿಐ ನೇಮಕಾತಿ ಅಧಿಸೂಚನೆ 2022ರಲ್ಲಿ ನೀಡಿರುವಂಥ ಅರ್ಹತೆ ಇದ್ದ ಅಭ್ಯರ್ಥಿಗಳು ನೇಮಕಾತಿ ಲಿಂಕ್ ಕ್ಲಿಕ್ ಮಾಡಿ.
* ಐಬಿಪಿಎಸ್ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳಬೇಕು.
* ಆನ್‌ಲೈನ್ ಅರ್ಜಿ ಸಲ್ಲಿಸುವಾಗ ಚಾಲ್ತಿಯಲ್ಲಿರುವ ಇಮೇಲ್ ಐಡಿ ಹಾಗೂ ಮೊಬೈಲ್ ಸಂಖ್ಯೆಯನ್ನು ನೀಡಿ.
* ವಿದ್ಯಾರ್ಹತೆಗೆ ತಕ್ಕ ದಾಖಲೆ, ವಯೋಮಿತಿ ದಾಖಲೆಯನ್ನು ಲಗತ್ತಿಸಿ
* ಅರ್ಜಿ ಜೊತೆಗೆ 10ನೇ ತರಗತಿ ಅಂಕಪಟ್ಟಿ, ಪದವಿ ಪ್ರಮಾಣ ಪತ್ರ, ಜಾತಿ ಪ್ರಮಾಣ ಪತ್ರ, ಅನುಭವ ಆಧಾರ ಪತ್ರ, ಗುರುತಿನ ದೃಢೀಕರಣ ಪತ್ರ ಹಾಗೂ ಇನ್ನಿತರ ಸಂಬಂಧಿಸಿದ ಪ್ರಮಾಣ ಪತ್ರಗಳನ್ನು ಲಗತ್ತಿಸತಕ್ಕದ್ದು.
* SBI Specialist Cadre Officers ಲಿಂಕ್ ಮಾತ್ರ ಕ್ಲಿಕ್ ಮಾಡಿ
* ಭರ್ತಿಯಾಗಿ ಅರ್ಜಿ ಜೊತೆಗೆ ಅಗತ್ಯ ದಾಖಲೆ, ಪ್ರಮಾಣ ಪತ್ರಗಳನ್ನು ಸ್ಕ್ಯಾನ್ ಮಾಡಿ ಒದಗಿಸಿ, ಇತ್ತೀಚಿನ ಭಾವಚಿತ್ರ ನೀಡಿ
* ಅರ್ಜಿ ಸಲ್ಲಿಕೆ ನಂಬರ್, ಸ್ವೀಕೃತಿ ಸಂಖ್ಯೆಯನ್ನು ಗುರುತಿಟ್ಟುಕೊಳ್ಳಿ, ಪರೀಕ್ಷೆ ನಡೆಯುವ ಮುಂದಿನ ದಿನಾಂಕದ ಬಗ್ಗೆ ನಿಮ್ಮ ಇಮೇಲ್, ಮೊಬೈಲ್ ಸಂಖ್ಯೆಗೆ ಮಾಹಿತಿ ನೀಡಲಾಗುತ್ತದೆ.
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications