ಎಸ್ಬಿಐ 2020 ನೇಮಕಾತಿ: 45 ಹುದ್ದೆಗಳಿಗೆ ಅರ್ಜಿ ಆಹ್ವಾನ
ನವದೆಹಲಿ, ಜನವರಿ 24: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ(ಎಸ್ ಬಿಐ) 2020ನೇ ಸಾಲಿನ ನೇಮಕಾತಿ ಆರಂಭಿಸಿದೆ. ಈ ಕುರಿತಂತೆ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಿದೆ. ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳಿಗೆ ಅರ್ಜಿ ಹಾಕಲು ಬಯಸುವ ಅರ್ಹ, ಆಸಕ್ತ ಅಭ್ಯರ್ಥಿಗಳು ಫೆಬ್ರವರಿ 12ರೊಳಗೆ ಅರ್ಜಿ ಸಲ್ಲಿಸಬಹುದು.
ಸಂಸ್ಥೆ ಹೆಸರು: ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ
ಹುದ್ದೆ ಹೆಸರು: ಡೆಪ್ಯುಟಿ ಮ್ಯಾನೇಜರ್
ಒಟ್ಟು ಹುದ್ದೆ: 45
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 12.02.2020.
ವಿದ್ಯಾರ್ಹತೆ: ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ( 3 ವರ್ಷ/5 ವರ್ಷ).

ಸಂಬಳ ನಿರೀಕ್ಷೆ: 31705 ರಿಂದ 45950/- ಪ್ರತಿ ತಿಂಗಳು.
ವಯೋಮಿತಿ: ಸಾಮಾನ್ಯ ಹಾಗೂ ಮೀಸಲಾತಿ ರಹಿತ ಅಭ್ಯರ್ಥಿಗಳಿಗೆ ಕನಿಷ್ಠ 25 ವರ್ಷ ಗರಿಷ್ಠ 35 ವರ್ಷ(31.10.2019ರಂತೆ). ವಿಕಲ ಚೇತನರಿಗೆ 10 ವರ್ಷ ,ಎಸ್ ಸಿ, ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿ ಅಭ್ಯರ್ಥಿಗಳಿಗೆ 03 ವರ್ಷ ವಯೋಮಿತಿಯಲ್ಲಿ ವಿನಾಯಿತಿ ಇರುತ್ತದೆ.
ನೇಮಕಾತಿ ಪ್ರಕ್ರಿಯೆ: ಪ್ರಾಥಮಿಕ ಪರೀಕ್ಷೆ ಹಾಗೂ ಮುಖ್ಯ ಪರೀಕ್ಷೆ.
ಅರ್ಜಿ ಶುಲ್ಕ:
ಸಾಮಾನ್ಯ/ ಒಬಿಸಿ: 750 ರು
ಎಸ್ ಸಿ/ ಎಸ್ಟಿ/ ಮಾಜಿ ಯೋಧ: ಯಾವುದೇ ಶುಲ್ಕವಿಲ್ಲ
ಪ್ರಮುಖ ದಿನಾಂಕ:
ಆನ್ ಲೈನ್ ನಲ್ಲಿ ಅರ್ಜಿ ಸಲ್ಲಿಕೆ ಆರಂಭ ದಿನ : 23.01.2020
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 12.02.2020
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ಮಾಹಿತಿಗಾಗಿ ಕ್ಲಿಕ್ ಮಾಡಿ












Click it and Unblock the Notifications