ಎಸ್ ಬಿಐನಲ್ಲಿ 2000 ಪ್ರೊಬೇಷನರಿ ಅಧಿಕಾರಿ ಹುದ್ದೆಗಳಿಗೆ ಅಹ್ವಾನ
ಬೆಂಗಳೂರು, ಏಪ್ರಿಲ್ 02: ಸರ್ಕಾರಿ ಸ್ವಾಮ್ಯದ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (ಎಸ್ ಬಿಐ) ದೇಶದೆಲ್ಲೆಡೆ ಪ್ರೊಬೇಷನರಿ ಆಫೀಸರ್ (ಪಿಒ) ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಸುಮಾರು 2,000 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ. ಆಸಕ್ತ ಅಭ್ಯರ್ಥಿಗಳು ಏಪ್ರಿಲ್ 02 ರಿಂದ 22ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು: ಸ್ಟೇಟ್ ಬ್ಯಾಂಕ್ ಅಫ್ ಇಂಡಿಯಾ(ಎಸ್ ಬಿಐ)
ಹುದ್ದೆ ಹೆಸರು: ಪ್ರೊಬೆಷನರಿ ಅಧಿಕಾರಿ
ಒಟ್ಟು ಹುದ್ದೆಗಳು : 2000
ಉದ್ಯೋಗ ಸ್ಥಳ : ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ : 22.04.2019
ಪೂರ್ವಭಾವಿ ಪರೀಕ್ಷಾ ಕೇಂದ್ರಗಳು ಬೆಳಗಾವಿ, ಬಳ್ಳಾರಿ, ಬೆಂಗಳೂರು, ಬೀದರ್, ದಾವಣಗೆರೆ,ಧಾರವಾಡ, ಕಲಬುರಗಿ, ಹುಬ್ಬಳ್ಳಿ, ಮಂಡ್ಯ, ಮಂಗಳೂರು,ಮೈಸೂರು, ಶಿವಮೊಗ್ಗ ಹಾಗೂ ಉಡುಪಿ. ಮುಖ್ಯ ಪರೀಕ್ಷೆ ಬೆಂಗಳೂರಿನಲ್ಲಿ ನಡೆಯಲಿದೆ. ಎಸ್ ಬಿಐ ವೆಬ್ ತಾಣದಲ್ಲಿ ಪರೀಕ್ಷೆ ಸಿಲಬಸ್ ಕೂಡಾ ಲಭ್ಯವಿರುತ್ತದೆ. ಹೆಚ್ಚಿನ ವಿವರಗಳನ್ನು ಇಂಗ್ಲೀಷ್ ನಲ್ಲಿ ಪಡೆಯಲು ಈ ಲಿಂಕ್ ಕ್ಲಿಕ್ ಮಾಡಿ

ವಯೋಮಿತಿ
ಅಭ್ಯರ್ಥಿಗಳಿಗೆ ವಯೋಮಿತಿ ವಿವರ: 01/04/2019ರಂತೆ ಅಭ್ಯರ್ಥಿಯ ವಯಸ್ಸು 21 ರಿಂದ 30 ವರ್ಷ ವಯಸ್ಸಾಗಿರಬೇಕು. ಎಸ್/ಎಸ್ಟಿ ಅಭ್ಯರ್ಥಿಗಳಿಗೆ 5 ವರ್ಷ, ಒಬಿಸಿಗೆ 3 ವರ್ಷ ವಿನಾಯಿತಿ ಇರುತ್ತದೆ.

ಅಭ್ಯರ್ಥಿಗಳಿಗೆ ವಿದ್ಯಾರ್ಹತೆ, ಆಯ್ಕೆ ಪ್ರಕ್ರಿಯೆ
* ಸರ್ಕಾರದಿಂದ ಮಾನ್ಯತೆ ಪಡೆದ ವಿದ್ಯಾಸಂಸ್ಥೆಯಿಂದ ಪದವಿ ಅಥವಾ ತತ್ಸಮಾನ ಅರ್ಹತೆ ಪಡೆದಿರಬೇಕು.
* ಅರ್ಹತೆ, ಅನುಭವ ಆಧಾರ ಮೇಲೆ ಸಂದರ್ಶನ ಮಾಡಿ ಆಯ್ಕೆ ಮಾಡಲಾಗುತ್ತದೆ.
* ಆನ್ ಲೈನ್ ಪರೀಕ್ಷೆ (ಪ್ರಿಮಿಲಿನರಿ ಹಾಗೂ ಮುಖ್ಯ ಪರೀಕ್ಷೆ), ಗ್ರೂಪ್ ನಲ್ಲಿ ಮಾತುಕತೆ, ಸಂದರ್ಶನ ಇರುತ್ತದೆ

ಅರ್ಜಿ ಶುಲ್ಕ
ಸಾಮಾನ್ಯವರ್ಗದ ಅಭ್ಯರ್ಥಿಗಳು, ಒಬಿಸಿ ಅಭ್ಯರ್ಥಿಗಳು Rs. 750/- ಪಾವತಿಸಬೇಕು.
(Rs. 125/- for SC/ ST/ PwD ಅಭ್ಯರ್ಥಿಗಳಿಗೆ) ಆನ್ ಲೈನ್ ಗೇಟ್ ವೇ ಮೂಲಕ ಡೆಬಿಟ್/ ಕ್ರೆಡಿಟ್/ ಇಂಟರ್ನೆಟ್ ಬ್ಯಾಂಕಿಂಗ್ ಬಳಸಿ ಪಾವತಿಸಬಹುದು.

ಅರ್ಜಿ ಸಲ್ಲಿಸುವುದು ಹೇಗೆ
ಆನ್ ಲೈನ್ ನಲ್ಲಿ www.statebankofindia.com or www.sbi.co.in ಗೆ ಲಾಗ್ ಇನ್ ಆಗಿ 02/04/2019 ರಿಂದ 24/004/2019 ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ. *ಪ್ರಿಲಿಮಿನರಿ ಪರೀಕ್ಷೆ ಕಾಲ್ ಲೆಟರ್ ಡೌನ್ ಲೋಡ್ ಮಾಡಲು ದಿನಾಂಕ 14/06/2016 ನಂತರ
* ಪ್ರಿಲಿಮಿನರಿ ಪರೀಕ್ಷಾ ದಿನಾಂಕ ಮೇ ತಿಂಗಳ ಮೂರನೇ ವಾರದಲ್ಲಿ ನಡೆಯುವ ಸಾಧ್ಯತೆಯಿದೆ.
* ಮುಖ್ಯ ಪರೀಕ್ಷೆ ಆನ್ ಲೈನ್ 20.07.2019
* ಅಂತಿಮ ಫಲಿತಾಂಶ ಅಕ್ಟೋಬರ್ 2ನೇ ವಾರದಲ್ಲಿ ನಿರೀಕ್ಷಿಸಬಹುದು.











Click it and Unblock the Notifications