38 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಎಸ್‌ಬಿಐ

ಬೆಂಗಳೂರು, ನವೆಂಬರ್ 23 : ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 6/12/2018 ಕೊನೆಯ ದಿನವಾಗಿದೆ.

ಸ್ಟೇಟ್ ಬ್ಯಾಂಕ್ ಇಂಡಿಯಾ (ಎಸ್‌ಬಿಐ) 38 ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಮಾತ್ರ ಅರ್ಜಿಗಳನ್ನು ಸಲ್ಲಿಸಬೇಕು ಎಂದು ಸ್ಪಷ್ಟಪಡಿಸಲಾಗಿದೆ.

ನವೆಂಬರ್ 22ರಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ನೇಮಕಾತಿ ಅಧಿಸೂಚನೆಯನ್ನು ಹೊರಡಿಸಿದೆ. ಆಸಕ್ತ ಅಭ್ಯರ್ಥಿಗಳು 6/12/2018 ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳನ್ನು ಶಾರ್ಟ್‌ಲಿಸ್ಟ್‌ ಮತ್ತು ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ. Cadre Officers ಹುದ್ದೆಯ ದರ್ಜೆಯ 38 ಹುದ್ದೆಗಳನ್ನು ಭರ್ತಿ ಮಾಡಲು ಈ ಅಧಿಸೂಚನೆಯನ್ನು ಹೊರಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಯಾವ-ಯಾವ ಹುದ್ದೆಗಳು

ಯಾವ-ಯಾವ ಹುದ್ದೆಗಳು

ಉಪಾಧ್ಯಕ್ಷ, ಸಹಾಯಕ ಉಪಾಧ್ಯಕ್ಷ, ಸೀನಿಯರ್ ಮ್ಯಾನೇಜರ್, ಫ್ಯಾಕಲ್ಟಿ (ಎಸ್‌ಬಿಐಎಲ್), ಫ್ಯಾಕಲ್ಟಿ (ಎಸ್‌ಬಿಐಸಿಬಿ, ಹೈದರಾಬಾದ್), ಫ್ಯಾಕಲ್ಟಿ (ಗುರ್‌ಗಾಂವ್), ಮಾರ್ಕೆಟಿಂಗ್ ಎಕ್ಸಿಕ್ಯುಟೀಚ್ (ಎಸ್‌ಬಿಐಎಲ್ ಕೋಲ್ಕತ್ತಾ) ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.

ವಿದ್ಯಾರ್ಹತೆಯ ವಿವರ

ವಿದ್ಯಾರ್ಹತೆಯ ವಿವರ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಪೂರ್ಣಗೊಳಿಸಿರಬೇಕು ಬಿಇ/ಬಿಟೆಕ್/ಎಂಬಿಎ(ಫೈನಾನ್ಸ್)/ಸಿಎ/ಸಿಎಫ್‌ಎ/ಎಂಬಿಎ/ಪೋಸ್ಟ್ ಗ್ರಾಜ್ಯುಯೇಷನ್ ಡಿಪ್ಲೊಮಾ/ಪಿಎಚ್‌ಡಿ ಇನ್ ಎಚ್‌ಆರ್ ತತ್ಸಮಾನ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಪಡೆದರು ಅರ್ಜಿ ಸಲ್ಲಿಸಬಹುದು.

ವಯೋಮಿತಿ ವಿವರ

ವಯೋಮಿತಿ ವಿವರ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 21 ವರ್ಷದ ಕನಿಷ್ಠ ವಯೋಮಿತಿ ನಿಗದಿ ಮಾಡಲಾಗಿದೆ. ಅರ್ಜಿ ಸಲ್ಲಿಸಲು 45 ವರ್ಷ ಗರಿಷ್ಠ ವಯೋಮಿತಿಯಾಗಿದೆ.

ಅರ್ಜಿ ಶುಲ್ಕದ ವಿವರ

ಅರ್ಜಿ ಶುಲ್ಕದ ವಿವರ

ಅರ್ಜಿ ಸಲ್ಲಿಸುವ ಸಾಮಾನ್ಯ ಮತ್ತು ಓಬಿಸಿ ಅಭ್ಯರ್ಥಿಗಳಿಗೆ 600 ರೂ. ಅರ್ಜಿ ಶುಲ್ಕವನ್ನು ನಿಗದಿ ಮಾಡಲಾಗಿದೆ. ಎಸ್‌ಸಿ/ಎಸ್‌ಟಿ/ನಿವೃತ್ತ ಯೋಧರು/ಅಂಗವಿಕಲ ಅಭ್ಯರ್ಥಿಗಳಿಗೆ 100 ರೂ. ಶುಲ್ಕ ನಿಗದಿ ಮಾಡಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+