Sainik School Kodagu Jobs 2023: ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ನೇಮಕಾತಿ, ವೇತನ ವಿವರ ತಿಳಿಯಿರಿ

ಬೆಂಗಳೂರು, ಅಕ್ಟೋಬರ್ 08: ಕೊಡಗು ಸೈನಿಕ್ ಶಾಲೆಯಲ್ಲಿ (Sainik School Kodagu) ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ನಡೆಯುತ್ತಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸರ್ಕಾರಿ ಕೆಲಸ ಹುಡುಕುತ್ತಿರುವವರು ಈ ಕೂಡಲೇ ಅರ್ಜಿ ಸಲ್ಲಿಸಬಹುದು.

ಕೊಡಗು ಸೈನಿಕ್ ಶಾಲೆಯಲ್ಲಿ ಒಟ್ಟು 8 ಆರ್ಟ್​ ಮಾಸ್ಟರ್, ವಾರ್ಡನ್​ ಹುದ್ದೆಗಳು ಖಾಲಿ ಇವೆ. ಅರ್ಹ ಅಭ್ಯರ್ಥಿಗಳು ಇದೇ ತಿಂಗಳ ಅಕ್ಟೋಬರ್ 20ರ ಒಳಗೆ ಅರ್ಜಿಯನ್ನು ಆಫ್ಲೈನ್ ಮೂಲಕ ಅಂದರೆ ಅಂಚೆ ಮೂಲಕ ಸಲ್ಲಿಸಬೇಕು. ಹುದ್ದೆ, ನೇಮಕಾತಿ, ಆಯ್ಕೆ ಇನ್ನಿತರ ಮಾಹಿತಿ ಕುರಿತು ಇಲ್ಲಿ ತಿಳಿದುಕೊಳ್ಳಿ.

Sainik School Kodagu jobs 2023: School Invite Application For 8 Posts By Eligible

ನೇಮಕಾತಿ ಪೂರ್ಣ ಮಾಹಿತಿ

ಸಂಸ್ಥೆ ಹೆಸರು: ಸೈನಿಕ್ ಸ್ಕೂಲ್ ಕೊಡಗು

ಹುದ್ದೆ ಹೆಸರು: ಆರ್ಟ್​ ಮಾಸ್ಟರ್, ವಾರ್ಡನ್​

ಖಾಲಿ ಹುದ್ದೆ: ಎಂಟು

ಮಾಸಿಕ ವೇತನ: 34,100 ರೂಪಾಯಿ

ಉದ್ಯೋಗದ ಸ್ಥಳ: ಕೊಡಗು

ಅರ್ಜಿ ಸಲ್ಲಿಕೆ ಕೊನೆ ದಿನ: ಅಕ್ಟೋಬರ್ 20

ಶೈಕ್ಷಣಿ ಅರ್ಹತೆ ವಿವರ

ವಾರ್ಡನ್ ಹುದ್ದೆಗೆ: ದ್ವಿತೀಯ ಪಿಯುಸಿ, ಬಿಎ, ಬಿ.ಎಸ್ಸಿ, ಬಿ.ಕಾಂ ಪೂರ್ಣಗೊಂಡಿರಬೇಕು.

PEM/PTI & ಮ್ಯಾಟ್ರನ್ (ಮಹಿಳೆ) ಹುದ್ದೆಗೆ: ದ್ವಿತೀಯ ಪಿಯುಸಿ, BA, BSs, B.com

ಆರ್ಟ್​ ಮಾಸ್ಟರ್- ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ

ಬ್ಯಾಂಡ್ ಮಾಸ್ಟರ್- 12ನೇ ತರಗತಿ, ಪದವಿ, ಡಿಪ್ಲೊಮಾ ಉತ್ತೀರ್ಣ ಕಡ್ಡಾಯ

ಅಭ್ಯರ್ತಿಗಳ ವಯೋಮಿತಿ

ವಾರ್ಡನ್ ಹುದ್ದೆಗೆ: ಕನಿಷ್ಠ 18 ರಿಂದ ಗರಿಷ್ಠ 50 ವರ್ಷ

PEM/PTI & ಮ್ಯಾಟ್ರನ್ (ಮಹಿಳೆ) ಹುದ್ದೆಗೆ: ಕನಿಷ್ಠ 18 ರಿಂದ ಗರಿಷ್ಠ 50 ವರ್ಷ

ಆರ್ಟ್​ ಮಾಸ್ಟರ್ ಹುದ್ದೆಗೆ: ಕನಿಷ್ಠ 21ರಿಂದ ಗರಿಷ್ಠ 35 ವರ್ಷ

ಬ್ಯಾಂಡ್ ಮಾಸ್ಟರ್ ಹುದ್ದೆಗೆ: ಕನಿಷ್ಠ 21 ರಿಂದ ಗರಿಷ್ಠ 35 ವರ್ಷ

Sainik School Kodagu jobs 2023: School Invite Application For 8 Posts By Eligible

ವೇತನ ಮತ್ತು ಉದ್ಯೋಗದ ಸ್ಥಳ:

ಆಯ್ಕೆ ಆಗುವವರಿಗೆ ಕೊಡಗು ಜಿಲ್ಲೆಯಲ್ಲಿ ಪೋಸ್ಟಿಂಗ್ ನೀಡುವ ಜೊತೆಗೆ ಮಾಸಿಕ 22, 000 ರೂ.ನಿಂದ 34,100 ರೂಪಾಯಿ ನೀಡಲಾಗುವುದು ಎಂದು ಶಾಲೆ ನೇಮಕಾತಿ ತಿಳಿಸಿದೆ.

ಅರ್ಜಿ ಶುಲ್ಕದ ಮಾಹಿತಿ

ಅರ್ಜಿ ಸಲ್ಲಿಸಲಿರುವ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕ ಇಲ್ಲ. ಸಾಮಾನ್ಯ/ ಒಬಿಸಿ ಅಭ್ಯರ್ಥಿಗಳು 400 ರೂಪಾಯಿ ಮಾತ್ರ ನಿಗದಿ ಮಾಡಲಾಗಿದೆ. ಆ ಹಣವನ್ನು ಡಿಮ್ಯಾಂಡ್ ಡ್ರಾಫ್ಟ್​ ಮೂಲಕ ಪಾವತಿಸಬೇಕು.

ಆಯ್ಕೆ ಪ್ರಕ್ರಿಯೆ ಹೇಗೆ?

ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳು ಮೊದಲು ಲಿಖಿತ ಪರೀಕ್ಷೆ ಎದುರಿಸಬೇಕಿರುತ್ತದೆ. ಪ್ರಾತ್ಯಕ್ಷಿಕೆ/ಕೌಶಲ್ಯ ಪರೀಕ್ಷೆ, ಪ್ರಾಯೋಗಿಕ ಪರೀಕ್ಷೆ ಬಳಿಕ ಅಲ್ಲಿ ಆಯ್ಕೆ ಆಗುವವರನ್ನು ನೇರ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು.

ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆ ಸೂಕ್ತ ದಾಖಲೆಗಳ ಸಹಿತ ಈ ವಿಳಾಸ '' ಪ್ರಾಂಶುಪಾಲರು, ಸೈನಿಕ ಶಾಲೆ ಕೊಡಗು, ಅಂಚೆ: ಕೂಡಿಗೆ ಕುಶಾಲನಗರ ತಾಲೂಕು, ಜಿಲ್ಲೆ- ಕೊಡಗು, ಕರ್ನಾಟಕ- 571232' ಇಲ್ಲಿಗೆ ಕಳುಹಿಸಬೇಕಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+