RVNL Recruitment 2023: ರೈಲ್ವೆ ಇಲಾಖೆಯಲ್ಲಿ 50 ಹುದ್ದೆಗಳ ನೇಮಕಾತಿ, ವೇತನ, ಆಯ್ಕೆ ಮಾಹಿತಿ
ಬೆಂಗಳೂರು, ಡಿಸೆಂಬರ್ 04: ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) ತನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿ ಪ್ರಕ್ರಿಯೆ ಆರಂಭಿಸಿದ್ದು, ಅರ್ಹರಿಂದ ಅರ್ಜಿಗಳನ್ನು ಕರೆದಿದೆ. ರೈಲ್ವೆ ಇಲಾಖೆಯಲ್ಲಿ ಕೆಲಸ ಹುಡುಕುತ್ತಿರುವ ಅಭ್ಯರ್ಥಿಗಳು ಈ ಸದಾವಕಾಶವನ್ನು ಬಳಸಿಕೊಳ್ಳಬೇಕಿದೆ.
ರೈಲ್ ವಿಕಾಸ್ ನಿಗಮ್ ಲಿಮಿಟೆಡ್ (RVNL) ಇಲ್ಲಿ ಒಟ್ಟು 50 ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್ ಹುದ್ದೆಗಳು ಖಾಲಿ ಇವೆ. ಈ ಕೂಡಲೇ ಅರ್ಜಿ ಸಲ್ಲಿಸುವ ಮೂಲಕ ಹುದ್ದೆಗಳನ್ನು ತಮ್ಮದಾಗಿಸಿಕೊಳ್ಳಬೇಕು. ಅಧಿಸೂಚನೆ ಓದಿ ಅರ್ಜಿ ಸಲ್ಲಿಸಿ. ಅದಕ್ಕೂ ಮೊದಲು ಹುದ್ದೆ ಮಾಹಿತಿ, ವಿದ್ಯಾರ್ಹತೆ, ಸಂಬಳ ಸೇರಿದಂತೆ ಪೂರ್ಣ ನೇಮಕಾತಿ ಬಗ್ಗೆ ಇಲ್ಲಿ ತಿಳಿಯಿರಿ.

ನೇಮಕಾತಿ ಪೂರ್ಣ ವಿವರ
ಸಂಸ್ಥೆ ಹೆಸರು: ರೈಲ್ ವಿಕಾಸ್ ನಿಗಮ್ ಲಿಮಿಟೆಡ್
ಹುದ್ದೆ ಹೆಸರು: ಮ್ಯಾನೇಜರ್, ಡೆಪ್ಯುಟಿ ಮ್ಯಾನೇಜರ್
ಖಾಲಿ ಹುದ್ದೆ ಎಷ್ಟಿವೆ: 50
ಮಾಸಿಕ ವೇತನ: ₹50,000-1,60,000
ಪೋಸ್ಟಿಂಗ್: ಭಾರತ
ಅರ್ಜಿ ಸಲ್ಲಿಕೆ ಕೊನೆ ದಿನ: ಡಿಸೆಂಬರ್ 5, ನಾಳೆ ಕೊನೆ ದಿನ
ಹುದ್ದೆಯ ಇತರ ಮಾಹಿತಿ ನೋಡುವುದಾದರೆ, ಮ್ಯಾನೇಜರ್ ಹುದ್ದೆಗಳು 9, ಡೆಪ್ಯುಟಿ ಮ್ಯಾನೇಜರ್ 16 ಮತ್ತು ಅಸಿಸ್ಟೆಂಟ್ ಮ್ಯಾನೇಜರ್ 25 ಹುದ್ದೆಗಳು ಖಾಲಿ ಇವೆ.
ವಿದ್ಯಾರ್ಹತೆ
ಈ ಎಲ್ಲ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಬೇಕಾದವರು ಕಡ್ಡಾಯವಾಗಿ ಇಇಇ/ಇಸಿಇ/ ಸಿವಿಲ್ ವಿಭಾಗದಲ್ಲಿ ಬಿಇ/ಬಿ.ಟೆಕ್, ಪದವಿ ಪೂರ್ಣಗೊಳಿಸಬೇಕು ಎಂದು ಅಧಿಸೂಚನೆ ತಿಳಿಸಿದೆ.
ವಯೋಮಿತಿ ಮಾಹಿತಿ
ಮ್ಯಾನೇಜರ್ ಹುದ್ದೆಗೆ ಅರ್ಜಿ ಸಲ್ಲಿಸುವವರಿಗೆ ಗರಿಷ್ಠ 40 ವರ್ಷ, ಡೆಪ್ಯುಟಿ ಮ್ಯಾನೇಜರ್ ಮತ್ತು ಅಸಿಸ್ಟೆಂಟ್ ಮ್ಯಾನೇಜರ್ ಹುದ್ದೆಗೆ ತಲಾ ಗರಿಷ್ಟ 35 ವರ್ಷ ನಿಗದಿ ಮಾಡಲಾಗಿದೆ. ಇನ್ನೂ ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಸಿಗಲಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲ ಲಿಖಿತ ಪರೀಕ್ಷೆ ನಡೆಸಲಾಗುತ್ತದೆ. ನಂತರ ನೇರವಾಗಿ ನಡೆಸುವ ಸಂದರ್ಶನದಲ್ಲಿ ಅವರು ಪಾಲ್ಗೊಳ್ಳಬೇಕಿರುತ್ತದೆ. ಆಯ್ಕೆ ಆಗುವವರಿಗೆ ಹುದ್ದೆಗೆ ತಕ್ಕ ನಿಯಮಾನುಸಾರ ವೇತನ ಸಹಿತ ಭಾರತದಲ್ಲಿ ಎಲ್ಲಿ ಬೇಕಾದರೂ ಪೊಸ್ಟಿಂಗ್ ನೀಡಲಾಗುವುದು ಎಂದು ರೈಲ್ವೆ ಇಲಾಖೆ ತಿಳಿಸಿದೆ.
ಅರ್ಜಿ ಸಲ್ಲಿಕೆ ಹೇಗೆ?
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿಯನ್ನು ಸೂಕ್ತ ದಾಖಲಾತಿ ಸಮೇತ ಇಮೇಲ್ ಮಾಡಬೇಕು. ಮ್ಯಾನೇಜರ್/ಸಿವಿಲ್ (ಇ-2) ಹುದ್ದೆಗೆ: [email protected], ಮ್ಯಾನೇಜರ್/ಎಸ್ ಮತ್ತು ಟಿ (ಇ-2): [email protected], ಉಪ ವ್ಯವಸ್ಥಾಪಕ/ಎಸ್ ಮತ್ತು ಟಿ (ಇ-1): [email protected], ಸಹಾಯಕ ವ್ಯವಸ್ಥಾಪಕ/ಎಸ್ ಮತ್ತು ಟಿ (ಇ-0): [email protected], ಉಪ ವ್ಯವಸ್ಥಾಪಕ/ಸಿವಿಲ್ (ಇ-1): [email protected], ಸಹಾಯಕ ವ್ಯವಸ್ಥಾಪಕ/ಸಿವಿಲ್ (ಇ-0): [email protected], ಮ್ಯಾನೇಜರ್/ಎಲೆಕ್ಟ್ರಿಕಲ್ (ಇ-2): [email protected], ಉಪ ವ್ಯವಸ್ಥಾಪಕ/ಎಲೆಕ್ಟ್ರಿಕಲ್ (ಇ-1): [email protected], ಸಹಾಯಕ ವ್ಯವಸ್ಥಾಪಕ/ಎಲೆಕ್ಟ್ರಿಕಲ್ (E-0): [email protected] ಗೆ ಮೇಲ್ ಮಾಡುವಂತೆ ತಿಳಿಸಲಾಗಿದೆ.












Click it and Unblock the Notifications