Indian Railway Jobs: ವಿವಿಧ 50 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ, ಕೈತುಂಬ ಸಂಬಳ, ಆಯ್ಕೆ ವಿವರ

ನವದೆಹಲಿ, ನವೆಂಬರ್ 07: ಭಾರತೀಯ ರೈಲ್ವೆ ವ್ಯಾಪ್ತಿಯ ರೈಲ್ ವಿಕಾಸ್ ನಿಗಮ್​ ಲಿಮಿಟೆಡ್ (RVNL) ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ನಿಮಿತ್ತ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಿದೆ. ಕೇಂದ್ರ ಸರ್ಕಾರಿ ವ್ಯಾಪ್ತಿಯಲ್ಲಿ ಉದ್ಯೋಗ ಮಾಡಲು ಇಚ್ಚಿಸುವ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

ರೈಲ್ ವಿಕಾಸ್ ನಿಗಮ್​ ಲಿಮಿಟೆಡ್ (RVNL) ನಲ್ಲಿ ಒಟ್ಟು 50 ವ್ಯವಸ್ಥಾಪಕರು, ಉಪ ವ್ಯವಸ್ಥಾಪಕ ಹುದ್ದೆಗಳು ಖಾಲಿ ಇವೆ. ಆಸಕ್ತ ಅಭ್ಯರ್ಥಿಗಳು ಮುಂದಿನ ತಿಂಗಳ ಡಿಸೆಂಬರ್ 5ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕು. ಇದಕ್ಕು ಮೊದಲು ಅಧಿಸೂಚನೆ ಓದಿಕೊಂಡು ಇಲ್ಲವೇ ಇಲ್ಲಿ ನೀಡಲಾಗಿರುವ ಮಾಹಿತಿ ಪಡೆದು ಅರ್ಜಿ ಸಲ್ಲಿಸಬೇಕು.

rvnl-recruitment-2023

ನೇಮಕಾತಿ ಸಂಪೂರ್ಣ ಮಾಹಿತಿ

ಸಂಸ್ಥೆ ಹೆಸರು: ರೈಲ್ ವಿಕಾಸ್ ನಿಗಮ್​ ಲಿಮಿಟೆಡ್ (RVNL)

ಹುದ್ದೆ ಹೆಸರು: ವ್ಯವಸ್ಥಾಪಕರು ಮತ್ತು ಉಪ ವ್ಯವಸ್ಥಾಪಕರು

ಖಾಲಿ ಹುದ್ದೆ ಎಷ್ಟಿವೆ: ಒಟ್ಟು 50

ಮಾಸಿಕ ವೇತನ: 50,000 ನಿಂದ 1,60,000 ರೂಪಾಯಿ

ಪೋಸ್ಟಿಂಗ್: ಭಾರತದಲ್ಲಿ

ಹುದ್ದೆಯ ಇತರ ಮಾಹಿತಿ ನೋಡುವುದಾದರೆ ಒಟ್ಟು ಹುದ್ದೆಗಳ ಪೈಕಿ ವ್ಯವಸ್ಥಾಪಕ ಹುದ್ದೆಗಳು 9, ಉಪ ವ್ಯವಸ್ಥಾಪಕ ಹುದ್ದೆಗಳು 16 ಮತ್ತು ಸಹಾಯಕ ವ್ಯವಸ್ಥಾಪಕ ಹುದ್ದೆಗಳು 25 ಇವೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ವ್ಯವಸ್ಥಾಪಕ, ಉಪವ್ಯವಸ್ಥಾಪಕ ಹುದ್ದೆಗಳಿಗೆ ಇಇಇ/ಇಸಿಇ/ಸಿವಿಲ್ ವಿಭಾಗದಲ್ಲಿ ಬಿಇ/ಬಿ.ಟೆಕ್, ಪದವಿ ಪೂರ್ಣಗೊಳಿಸಿರಬೇಕು. ಇನ್ನೂ ಸಹಾಯಕ ವ್ಯವಸ್ಥಾಪಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಡಿಪ್ಲೊಮಾ, ಇಇಇ/ಇಸಿಇ/ಸಿವಿಲ್ ವಿಭಾಗದಲ್ಲಿ ಬಿಇ/ಬಿ.ಟೆಕ್, ಪದವಿ ಪಡೆದಿರುವುದು ಕಡ್ಡಾಯಗೊಳಿಸಲಾಗಿದೆ.

rvnl-recruitment-2023

ವಯಸ್ಸಿನ ಮಿತಿ-ಸಡಿಲಿಕೆ ವಿವರ

ವ್ಯವಸ್ಥಾಪಕರ ಹುದ್ದೆಗೆ ಸೇರುವವರಿಗೆ ಗರಿ‍ಷ್ಠ 40 ವರ್ಷ, ಉಪ ವ್ಯವಸ್ಥಾಪಕರ ಹುದ್ದೆಗೆ 35 ವರ್ಷ ಹಾಗೂ ಸಹಾಯಕ ವ್ಯವಸ್ಥಾಪಕ ಹುದ್ದೆಗಳಿಗೆ ಗರಿಷ್ಠ 35 ವರ್ಷ ನಿಗದಿ ಮಾಡಲಾಗಿದೆ. ಮೀಸಲಾತಿಗೆ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಸಿಗಲಿದೆ. ಆಯ್ಕೆ ಆಗುವವರಿಗೆ ಭಾರತದಲ್ಲಿ ಎಲ್ಲಿಯಾದರೂ ಪೋಸ್ಟಿಂಗ್ ನೀಡಲಾಗುತ್ತದೆ ಎಂದು ಅಧಿಸೂಚನೆ ತಿಳಿಸಿದೆ.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಮೊದಲು ಕಂಪನಿ ನಡೆಸುವ ಲಿಖಿತ ಪರೀಕ್ಷೆಯಲ್ಲಿ ಭಾಗವಹಿಸಬೇಕು. ನಂತರ ನೇರ ಸಂದರ್ಶನದಲ್ಲಿ ಪಾಲ್ಗೊಳ್ಳಬೇಕಿರುತ್ತದೆ. ಅಭ್ಯರ್ಥಿಗಳು ಅಗತ್ಯ ದಾಖಲೆಗಳ ಸಹಿತ ಅರ್ಜಿಗಳನ್ನು ಈ ಕೆಳಗಿನ ಇಮೇಲ್ ವಿಳಾಸಕ್ಕೆ ಮೇಲ್ ಮಾಡಬೇಕು ಎಂದು ತಿಳಿಸಲಾಗಿದೆ.

ಮ್ಯಾನೇಜರ್/ಎಸ್ ಆಂಡ್ ಟಿ (ಇ-2): [email protected]

ಉಪ ವ್ಯವಸ್ಥಾಪಕ/ಎಸ್ ಆಂಡ್ ಟಿ (ಇ-1): [email protected]

ಸಹಾಯಕ ವ್ಯವಸ್ಥಾಪಕ/ಎಸ್ ಆಂಡ್ ಟಿ (ಇ-0): [email protected]

ಮ್ಯಾನೇಜರ್/ಎಲೆಕ್ಟ್ರಿಕಲ್ (ಇ-2): [email protected]

ಉಪ ವ್ಯವಸ್ಥಾಪಕ/ಎಲೆಕ್ಟ್ರಿಕಲ್ (ಇ-1): [email protected]

ಸಹಾಯಕ ವ್ಯವಸ್ಥಾಪಕ/ಎಲೆಕ್ಟ್ರಿಕಲ್ (E-0): [email protected]

ಮ್ಯಾನೇಜರ್/ಸಿವಿಲ್ (ಇ-2): [email protected]

ಉಪ ವ್ಯವಸ್ಥಾಪಕ/ಸಿವಿಲ್ (ಇ-1): [email protected]

ಸಹಾಯಕ ವ್ಯವಸ್ಥಾಪಕ/ಸಿವಿಲ್ (ಇ-0): [email protected]

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+