26 ಸಾವಿರ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ರೈಲ್ವೆ
ಬೆಂಗಳೂರು, ಫಬ್ರವರಿ 5 : ರೈಲ್ವೆ ನೇಮಕಾತಿ ಮಂಡಳಿ 26502 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಮಾರ್ಚ್ 5, 2018 ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ರೈಲ್ವೆ ನೇಮಕಾತಿ ಮಂಡಳಿ ವೆಬ್‌ಸೈಟ್‌ನಲ್ಲಿ ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಫೆ.3ರಿಂದ ಮಾರ್ಚ್ 5ರ ತನಕ ಅರ್ಜಿಗಳನ್ನು ಸಲ್ಲಿಸಲು ಅವಕಾಶ ನೀಡಲಾಗಿದೆ.
17,673 ಅಸಿಸ್ಟೆಂಟ್ ಲೋಕೋ ಪೈಲೆಟ್ (ಎಎಲ್‌ಪಿ), 8829 ಟೆಕ್ನಿಷಿಯನ್ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಒಟ್ಟು 26502 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತದೆ.

ವಿದ್ಯಾರ್ಹತೆ : ನಿಗದಿಪಡಿಸಿದ ಹುದ್ದೆಗೆ ಸಂಬಂಧಿಸಿದ ಡಿಗ್ರಿ ಅಥವ ಡಿಪ್ಲೊಮಾ, ಎಚ್‌ಎಸ್‌ಸಿ (10+2) ಫಿಸಿಕ್ಸ್, ಗಣಿತ. 10ನೇ ತರಗತಿ ಉತ್ತೀರ್ಣ ವಿತ್ ಐಟಿಐ ನಿಗದಿಪಡಿಸಿದ ವಿಷಯ.
ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು 18 ರಿಂದ 28 ವರ್ಷದೊಳಗಿರಬೇಕು. 1/7/2018ಕ್ಕೆ ಅನ್ವಯವಾಗುವಂತೆ. ವೇತನ 19,900 ರೂ.ಗಳು.
ಪ್ರಮುಖ ಅಂಶಗಳು
* 26502 ಹುದ್ದೆಗಳು
* ವೇತನ : 19900
* ಅರ್ಜಿ ಹಾಕಲು ಕೊನೆ ದಿನಾಂಕ : 5/3/2018
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications