RWF Recruitment 2023: ಖಾಲಿ ಇರುವ 192 ವಿವಿಧ ಅಪ್ರೆಂಟಿಸ್ ಹುದ್ದೆಗಳಿಗೆ ಫೆ. 20ರೊಳಗೆ ಅರ್ಜಿ ಸಲ್ಲಿಸಿ
ಬೆಂಗಳೂರಿನ ರೈಲ್ ವ್ಹೀಲ್ ಫ್ಯಾಕ್ಟರಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಫೆಬ್ರುವರಿ 20ರೊಳಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಕೆ ವಿಧಾನ ಹೇಗೆಂದು ತಿಳಿಯಿರಿ.
ಬೆಂಗಳೂರು, ಫೆಬ್ರುವರಿ 02: ಬೆಂಗಳೂರಿನ ರೈಲ್ ವ್ಹೀಲ್ ಫ್ಯಾಕ್ಟರಿ (Rail Wheel Factory) ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಫೆಬ್ರುವರಿ 20ರೊಳಗೆ ಅರ್ಜಿ ಸಲ್ಲಿಸಬಹುದು.
ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಇಚ್ಛಿಸುವ ಅಭ್ಯರ್ಥಿಗಳಿಗೆ ಇದೊಂದು ಸುರ್ವಣ ಅವಕಾಶವಾಗಿದೆ. ಬೆಂಗಳೂರಿನ ರೈಲ್ ವ್ಹೀಲ್ ಫ್ಯಾಕ್ಟರಿಯಲ್ಲಿ ಒಟ್ಟು 192 ಅಪ್ರೆಂಟಿಸ್ ಹುದ್ದೆಗಳು ಖಾಲಿ ಇವೆ. ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.
ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು, ಹುದ್ದೆಗೆ ಬೇಕಾದ ಅರ್ಹತೆ, ವಯೋಮಿತ, ವೇತನ ಸೇರಿದಂತೆ ಎಲ್ಲ ಮಾಹಿತಿ ಇಲ್ಲಿ ತಿಳಿಯಿರಿ.

ಖಾಲಿ ಹುದ್ದೆಯ ವಿವರ
ಸಂಸ್ಥೆ- ರೈಲ್ ವ್ಹೀಲ್ ಫ್ಯಾಕ್ಟರಿ
ಹುದ್ದೆ ಹೆಸರು- ಅಪ್ರೆಂಟಿಸ್
ಒಟ್ಟು ಹುದ್ದೆ- 192
ಉದ್ಯೋಗ ಸ್ಥಳ- ಬೆಂಗಳೂರು
ಹುದ್ದೆ ಪೂರ್ತಿ ವಿವರ
ಫಿಟ್ಟರ್ ಹುದ್ದೆ - 85
ಮೆಕ್ಯಾನಿಸ್ಟ್ ಹುದ್ದೆ - 31
ಮೆಕ್ಯಾನಿಕ್ (ಮೋಟಾರ್ ವೆಹಿಕಲ್) ಹುದ್ದೆ - 8
ಟರ್ನರ್ ಹುದ್ದೆ - 5
ಸಿಎನ್ಸಿ ಪ್ರೋಗ್ರಾಮಿಂಗ್ ಮತ್ತು ಆಪರೇಟರ್ ಹುದ್ದೆ- 23
ಎಲೆಕ್ಟ್ರಿಷಿಯನ್ ಹುದ್ದೆ- 18
ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಹುದ್ದೆ - 22
ವಯೋಮಿತಿ- ವಿದ್ಯಾರ್ಹತೆ
ಅಭ್ಯರ್ಥಿಗಳ ವಯಸ್ಸು ಜನವರಿ 21, 2023ಕ್ಕೆ ಕನಿಷ್ಠ 15 ವರ್ಷ ಮತ್ತು ಗರಿಷ್ಠ 24 ವರ್ಷ ಮೀರಿರಬಾರದು.ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ 10ನೇ ತರಗತಿ, ಎನ್ಟಿಸಿ ಪಾಸಾಗಿರಬೇಕು ಎಂದು ಅಧಿಸೂಚನೆಯಲ್ಲಿ ತಿಳಿಸಿದೆ.

ಅರ್ಜಿ ಶುಲ್ಕ 100ರೂ.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು PH ಮಹಿಳಾ ಅಭ್ಯರ್ಥಿಗಳಿಗೆ ಶುಲ್ಕ ಇಲ್ಲ. ಇವರ ಹೊರತು ಉಳಿದೆಲ್ಲ
ಅಭ್ಯರ್ಥಿಗಳು 100 ರೂಪಾಯಿ ಶುಲ್ಕ ಭರಿಸಬೇಕು. ಡಿಮಾ ಡಿಮ್ಯಾಂಡ್ ಡ್ರಾಫ್ಟ್ ಮೂಲಕ ಪಾವತಿಸಬೇಕು.
ಹಿಂದುಳಿದ ವರ್ಗದ ಅಭ್ಯರ್ಥಿಗಳಿಗೆ ಮೂರು ವರ್ಷ ಹಾಗೂ ಎಸ್‌ಸಿ, ಎಸ್ಟಿ ಅಭ್ಯರ್ಥಿಗಳಿಗೆ ಐದು ವರ್ಷ ವಯೋಮಿತಿಯಲ್ಲಿ ಸಡಿಲಿಕೆ ಇದೆ.
ಆಯ್ಕೆ ಪ್ರಕ್ರಿಯೆ:
ಮೆರಿಟ್ ಲಿಸ್ಟ್
ವೇತನ- ಆಯ್ಕೆ ಹೇಗೆ
ಅಭ್ಯರ್ಥಿಗಳ ಆಯ್ಕೆಯು ಮೆರಿಟ್ ಆಧಾರದಲ್ಲಿ ಸಂಸ್ಥೆ ಮಾಡಲಿದೆ. ಇನ್ನು ವೇತನ ಹುದ್ದೆಯ ಆಧಾರದಲ್ಲಿ ಇರಲಿದೆ.
ಫಿಟ್ಟರ್ ಹುದ್ದೆಗೆ ಮಾಸಿಕ ರೂ. 12,261, ಮೆಕ್ಯಾನಿಸ್ಟ್ ಹುದ್ದೆಗೆ- ಮಾಸಿಕ ರೂ. 12,261
ಮೆಕ್ಯಾನಿಕ್ (ಮೋಟಾರ್ ವೆಹಿಕಲ್) ಹುದ್ದೆಗೆ ತಿಂಗಳೀಗೆ ರೂ. 12,261, ಟರ್ನರ್ ಹುದ್ದೆಗೆ ತಿಂಗಳಿಗೆ 12,261 ರೂಪಾಯಿ,
ಸಿಎನ್ಸಿ ಪ್ರೋಗ್ರಾಮಿಂಗ್ ಹಾಗೂ ಆಪರೇಟರ್ ಹುದ್ದೆಗೆ 10,899ರೂ., ಎಲೆಕ್ಟ್ರಿಷಿಯನ್ ಹುದ್ದೆಗೆ ಮಾಸಿಕ ರೂ.12,261,
ಎಲೆಕ್ಟ್ರಾನಿಕ್ ಮೆಕ್ಯಾನಿಕ್ ಹುದ್ದೆಗೆ ಮಾಸಿಕ ರೂ.12,261 ನಿಗದಿ ಮಾಡಲಾಗಿದೆ.
ಅರ್ಜಿ ಸಲ್ಲಿಕೆ ಹೇಗೆ
ಅಭ್ಯರ್ಥಿಗಳು ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಅಗತ್ಯ ದಾಖಲಾತಿಗಳೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಕಳುಹಿಸಬೇಕು.
ಸೀನಿಯರ್ ಪರ್ಸನಲ್ ಆಫೀಸರ್, ಪರ್ಸನಲ್ ಡಿಪಾರ್ಟ್ಮೆಂಟ್, ರೈಲ್ ವ್ಹೀಲ್ ಫ್ಯಾಕ್ಟರಿ, ಯಲಹಂಕ ಬೆಂಗಳೂರು- 560064 ಫೆ.20ರೊಳಗೆ ಸಲ್ಲಿಸಿ.












Click it and Unblock the Notifications