RBI Recruitment 2023: ಆರ್‌ಬಿಐ ನಲ್ಲಿ ಭರ್ಜರಿ ಉದ್ಯೋಗವಕಾಶ, 291 ಹುದ್ದೆಗಳಿಗೆ ಕೂಡಲೇ ಅರ್ಜಿ ಹಾಕಿ

ಬೆಂಗಳೂರು, ಮೇ 18: ಭಾರತಿ ರಿಸರ್ವ್‌ ಬ್ಯಾಂಕ್ (RBI) ನಲ್ಲಿ ಭರ್ಜರಿ ಉದ್ಯೋಗಾವಕಾಶಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿದೆ. ಒಟ್ಟು 291 ಖಾಲಿ ಹುದ್ದೆಗಳಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಬಹುದಾಗಿದೆ.

ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯನ್ನು ಪೂರ್ಣವಾಗಿ ಓದಿಕೊಂಡು ನಂತರವೇ ಅರ್ಜಿಸಲ್ಲಿಸಬೇಕು. ಅಜಿ ಸಲ್ಲಿಕೆಗೂ ಮುನ್ನ ಹುದ್ದೆಗಳ ಪೂರ್ಣ ಮಾಹಿತಿ, ಅರ್ಜಿ ಸಲ್ಲಿಕೆ ವಿಧಾನ ಮತ್ತು ಕೊನೆಯ ದಿನಾಂಕ, ಶೈಕ್ಷಣಿಕ ಅರ್ಹತೆ ಮುಂತಾದ ಅಂಶಗಳನ್ನು ಇಲ್ಲಿ ತಿಳಿಯಬಹುದು.

RBI Recruitment 2023

ಹುದ್ದೆಗಳ ಪೂರ್ಣ ಮಾಹಿತಿ

ಸಂಸ್ಥೆ- ಭಾರತಿ ರಿಸರ್ವ್‌ ಬ್ಯಾಂಕ್ (RBI)

ಖಾಲಿ ಹುದ್ದೆ - 291

ಹುದ್ದೆ ಹೆಸರು- ಅಧಿಕಾರಿ ಗ್ರೇ ಡ್-ಬಿ (DR): ಸಾಮಾನ್ಯ- 222 ಹುದ್ದೆಗಳು, ಗ್ರೇ ಡ್-ಬಿ (DR)ನಲ್ಲಿ ಅಧಿಕಾರಿ-ಡಿಇಪಿಆರ್- 38 ಹುದ್ದೆಗಳು, ಗ್ರೇಡ್-ಬಿ (DR) ನಲ್ಲಿ ಅಧಿಕಾರಿ- ಡಿಎಸ್ಐಎಂ- ಒಟ್ಟು 31 ಖಾಲಿ ಹುದ್ದೆಗಳು ಇವೆ.

ಶೈಕ್ಷಣಿಕ ಅರ್ಹತೆ

ಹುದ್ದೆಗಳಿಗೆ ಅಗತ್ಯಕ್ಕೆ ಸಂಬಂಧಿಸಿದ ವಿಷಯದಲ್ಲಿ ಅಭ್ಯರ್ಥಿಗಳು ಪದವಿ, ಸ್ನಾತಕೋತ್ತರ ಪದವಿ (PG) ಪೂರ್ಣಗೊಳಿಸಿರಬೇಕು. ಆರ್‌ಬಿಐ ಅಧಿಕಾರಿ (ಗ್ರೇಡ್ ಉಪ) ವಯೋಮಿತಿ ಕನಿಷ್ಠ 21 ರಿಂದ ಗರಿಷ್ಠ 30 ವರ್ಷ ಇರಬೇಕು. ಎಂಫಿಲ್ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 32 ವರ್ಷ ನಿಗದಿ ಮಾಡಲಾಗಿದೆ. ಪಿಎಚ್‌ಡಿ ಅಭ್ಯರ್ಥಿಗಳಿಗೆ ಗರಿಷ್ಠ ವಯೋಮಿತಿ 34 ವರ್ಷ ನಿಗದಿ ಮಾಡಲಾಗಿದೆ.

RBI Recruitment 2023

ಅರ್ಜಿ ಸಲ್ಲಿಕೆ ಹೇಗೆ

ಪ್ರಸ್ತುತ ಭಾರತೀಯ ರಿಸರ್ವ್‌ ಬ್ಯಾಂಕ್ ನ ಖಾಲಿ ಹುದ್ದೆಗಳಿ ಅರ್ಹ ಆಸಕ್ತರು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕು.

ಅರ್ಜಿ ಶುಲ್ಕ ಸಾಮಾನ್ಯ ಮತ್ತು ಒಬಿಸಿ ವರ್ಗದ ಅಭ್ಯ ರ್ಥಿಗಳಿಗೆ ಆರ್‌ಬಿಐ ಗ್ರೇಡ್ ಗ್ರೇ ಡ್-ಬಿ 2023ರ ಪರೀಕ್ಷೆ ಗೆ 850 ರೂಪಾಯಿ ಮತ್ತು ಎಸ್‌ಸಿ- ಎಸ್ಟಿ ಹಾಗೂ ಅಂಗವಿಕಲರಿಗೆ ವರ್ಗದವರಿಗೆ 100 ರೂಪಾಯಿ ನಿಗದಿ ಮಾಡಲಾಗಿದೆ. ಅರ್ಜಿಯನ್ನು ಜೂನ್ 09ರೊಳಗೆ ಸಲ್ಲಿಸಬೇಕು.

ಆಯ್ಕೆ ಪ್ರ ಕ್ರಿಯೆ ವಿವರ

ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಿದ ನಂತ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮೊದಲ ಹಂತದಲ್ಲಿ ಆನ್‌ಲೈನ್ ಮೂಲಕ ಪರೀಕ್ಷೆ ಹಾಗೂ ಎರಡನೇ ಹಂತದಲ್ಲಿ ನೇರ ಸಂದರ್ಶನ ಎದುರಿಸಬೇಕಿದೆ. ಇದೇ ದಾಖಲೆ ಪರಿಶೀಲನೆ ವೈದ್ಯಕೀಯ ಪರೀಕ್ಷೆ ಸಹ ನಡೆಯಲಿದೆ.

ನೆನಪಿಡಬೇಕಾದ ದಿನಾಂಕ

ಅರ್ಜಿ ಸಲ್ಲಿಕೆಗೆ ಕೊನೆ ದಿನ 9 ಜೂನ್ 2023

ಆಫೀಸರ್ ಗ್ರೇ ಡ್-ಬಿ (ಡಿಆರ್) ಆನ್‌ಲೈನ್ ಪರೀಕ್ಷೆ 9 ಜುಲೈ 2023 ಮತ್ತು 30 ಜುಲೈ 2023.

ಆಫೀಸರ್ ಗ್ರೇ ಡ್-ಬಿ (ಡಿಆರ್) DEPR- ಆನ್‌ಲೈನ್ ಪರೀಕ್ಷೆ 16 ಜುಲೈ 2023 ಮತ್ತು 02 ಸೆಪ್ಟಂಬರ್ 2023. ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗೆ https://rbi.org.in/ ವೆಬ್‌ಸೈಟ್‌ಗೆ ಬೇಟಿ ನೀಡಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+