166 ಹುದ್ದೆಗಳ ಭರ್ತಿಗೆ ಅರ್ಜಿ ಕರೆದ ಆರ್‌ಬಿಐ

ಬೆಂಗಳೂರು, ಜುಲೈ 09 : ರಿಸರ್ವ ಬ್ಯಾಂಕ್ ಆಫ್ ಇಂಡಿಯಾ 166 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 23 ಜುಲೈ 2018 ಕೊನೆಯ ದಿನವಾಗಿದೆ.

ಆರ್‌ಬಿಐ ಆಫೀಸರ್ಸ್ ಇನ್ ಗ್ರೇಡ್ ಬಿ (ಡಿಆರ್) ಜನರಲ್, ಆಫೀಸರ್ಸ್ ಇನ್ ಗ್ರೇಡ್ ಬಿ (ಡಿಆರ್) ಡಿಇಪಿಆರ್, ಆಫೀಸರ್ಸ್ ಇನ್ ಗ್ರೇಡ್ ಬಿ (ಡಿಆರ್) ಡಿಎಸ್ಐಎಮ್ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಒಟ್ಟು 166 ಹುದ್ದೆಗಳಿದ್ದು, ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು.

ಆಫೀಸರ್ಸ್ ಇನ್ ಗ್ರೇಡ್ ಬಿ (ಡಿಆರ್) ಜನರಲ್ 127, ಆಫೀಸರ್ಸ್ ಇನ್ ಗ್ರೇಡ್ ಬಿ (ಡಿಆರ್) ಡಿಇಪಿಆರ್ 22, ಆಫೀಸರ್ಸ್ ಇನ್ ಗ್ರೇಡ್ ಬಿ (ಡಿಆರ್) ಡಿಎಸ್ಐಎಮ್ 17 ಹುದ್ದೆಗಳಿವೆ.

RBI recruitment 2018 : Apply for 166 Officers Posts

ಆಫೀಸರ್ಸ್ ಇನ್ ಗ್ರೇಡ್ ಬಿ (ಡಿಆರ್) ಜನರಲ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಶೇ 60ರಷ್ಟು ಅಂಕಗಳೊಂದಿಗೆ ಪದವಿ, ಪಿಯುಸಿ/ಡಿಪ್ಲೊಮಾ/ ಮತ್ತು 10 ನೇ ತರಗತಿ ಉತ್ತೀರ್ಣರಾಗಿರಬೇಕು. ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ ಶೇ 50ರಷ್ಟು ಅಂಕಗಳು.

ಆಫೀಸರ್ಸ್ ಇನ್ ಗ್ರೇಡ್ ಬಿ (ಡಿಆರ್) ಡಿಇಪಿಆರ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಅರ್ಥಶಾಸ್ತ್ರ, ಮ್ಯಾಥಮೆಟಿಕಲ್ ಎಕಾನಿಮಿಕ್ಸ್, ಫೈನಾನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಶೇ55ರಷ್ಟು ಅಂಕಗಳೊಂದಿಗೆ ಮಾನ್ಯತೆ ಪಡೆದ ವಿವಿಯಿಂದ ಪೂರ್ಣಗೊಳಿಸಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 21 ರಿಂದ 30 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. 1 ಜುಲೈ 2018ಕ್ಕೆ ಅನ್ವಯವಾಗುವಂತೆ. ವೇತನ ಶ್ರೇಣಿ 35,150 ರಿಂದ 62,400 ಪ್ರತಿ ತಿಂಗಳು.

ಅರ್ಜಿ ಶುಲ್ಕ : ಸಾಮಾನ್ಯ ಮತ್ತು ಒಬಿಸಿ ಅಭ್ಯರ್ಥಿಗಳಿಗೆ 850 ರೂ.ಗಳು., ಎಸ್‌ಸಿ/ಎಸ್‌ಟಿ/ಅಂಗವಿಕಲ ಅಭ್ಯರ್ಥಿಗಳಿಗೆ 100 ರೂ.ಗಳು.

ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+