Railways Recruitment 2023: SSLC-PUC ಆದವರಿಗೂ ಅವಕಾಶ, ಕೂಡಲೇ 782 ಹುದ್ದೆಗಳಿಗೆ ಅರ್ಜಿ ಹಾಕಿ
ಬೆಂಗಳೂರು, ಜೂನ್ 04: ಭಾರತೀಯ ರೈಲ್ವೆಯು ತನ್ನಲ್ಲಿ ಖಾಲಿ ಇರುವ ವಿವಿಧ ನೂರಾರು ಹುದ್ದಗಳ ಭರ್ತಿಗಾಗಿ ಎಸ್‌ಎಸ್‌ಎಲ್‌ಸಿ ಮತ್ತು ದ್ವಿತೀಯ ಪಿಯುಸಿ ಓದಿದವರಿಂದಲೂ ಅರ್ಜಿ ಆಹ್ವಾನಿಸಿದೆ. ಅರ್ಹ ಆಸಕ್ತ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಬೇಕು.
ಭಾರತೀಯ ರೈಲ್ವೇಯು ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ICF) ಅಡಿಯಲ್ಲಿ ಅಪ್ರೆಂಟಿಸ್ ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. 10ನೇ ತರಗತಿ ಮತ್ತು 2nd ಪಿಯು ಉತ್ತೀರ್ಣ ಆಗಿ ಇತ್ತಿಚೆಗೆ ಹೊರ ಬಂದವರಿಗೂ ಇಲ್ಲಿ ಉದ್ಯೋಗವಕಾಶಗಳು ಇವೆ ಎಂದು ಭಾರತೀಯ ರೈಲ್ವೆ ಅಧಿಸೂಚನೆ ತಿಳಿಸಿದೆ. ಅರ್ಜಿಯನ್ನು ಇದೆ ತಿಂಗಳ ಜೂನ್ 30ರಂದು ಕೊನೆಗೊಳ್ಳುತ್ತದೆ.

ಭಾರತೀಯ ರೈಲ್ವೆಯಲ್ಲಿ ಒಟ್ಟು 782 ಅಪ್ರೆಂಟಿಸ್ ಹುದ್ದೆಗಳನ್ನು ವಿವಿಧ ಟ್ರೇಡ್‌ಗಳಿಗೆ ಭರ್ತಿ ಮಾಡವ ಪ್ರಕ್ರಿಯೆ ಆರಂಭವಾಗಿದೆ. ಇದರಲ್ಲಿ 252 ಫ್ರೆಶರ್‌ಗಳಿಗೆ ಮತ್ತು 530 ಸ್ಥಾನ X-ITI ಗೆ ಮೀಸಲಿಡಲಾಗಿದೆ ಎಂದು ರೈಲ್ವೆ ಸಚಿವಾಲಯದ ಮೂಲಗಳು ತಿಳಿಸಿದೆ.
ಅರ್ಜಿ ಸಲ್ಲಿಕೆಗೂ ಮುನ್ನ ಅಭ್ಯರ್ಥಿಗಳು ಹುದ್ದೆಗಳ ಮಾಹಿತಿ, ವಿದ್ಯಾರ್ಹತೆ, ವೇತನ, ವಿಧಾನ, ವಯೋಮಿತಿ ಸೇರಿದಂತೆ ಇನ್ನಿತರ ಅಂಶಗಳನ್ನು ಇಲ್ಲಿ ತಿಳಿಯಬಹುದು.
ನೇಮಕಾತಿಯ ಮಾಹಿತಿ
ಸಂಸ್ಥೆ ಹೆಸರು - ಭಾರತೀಯ ರೈಲ್ವೆ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ
ನೇಮಕ ಹೇಗೆ- ಅಪ್ರೆಂಟಿಸ್
ಖಾಲಿ ಹುದ್ದೆ ಸಂಖ್ಯೆ- 782
ಅರ್ಜಿ ಸಲ್ಲಿಕೆ ಕೊನೆ ದಿನ - ಜೂನ್ 30
ವಯೋಮೀತಿ - ವಿದ್ಯಾರ್ಹತೆ ವಿವರ
ಅರ್ಜಿ ಸಲ್ಲಿಸಲು ಇಚ್ಛಿಸುವವರ ವಯೋಮಿತಿ 24 ವರ್ಷ ದಾಟಿರಬಾರದು. ಇನ್ನು ಅಭ್ಯರ್ಥಿಗಳು ಎಸ್‌ಎಸ್‌ಎಲ್‌ಸಿಯಲ್ಲಿ ಹಾಗೂ ದ್ವಿತೀಯ ಪಿಯುಸಿಯಲ್ಲಿ ಉತ್ತೀರ್ಣರಾಗಿರಬೇಕು ಎಂದು ತಿಳಿಸಲಾಗಿದೆ. ಅರ್ಜಿ ಸಲ್ಲಿಸುವ ಮುನ್ನ ಅರ್ಹರು ಪೂರ್ತಿಯಾಗಿ ಅಧಿಸೂಚನೆ ಓದಿಕೊಂಡು ಅರ್ಜಿ ಹಾಕಬೇಕಿದೆ.
ವಿದ್ಯಾರ್ಹತೆಯ ಇತರೆ ಮಾಹಿತಿ
* ಫಿಟ್ಟರ್, ಎಲೆಕ್ಟ್ರಿಷಿಯನ್ ಮತ್ತು ಮೆಷಿನಿಸ್ಟ್ ಹುದ್ದೆಯ ಅಭ್ಯರ್ಥಿಗಳು 10 ನೇ ತರಗತಿಯಲ್ಲಿ 50 ಅಂಕ ಸಹಿತ ಉತ್ತೀರ್ಣರಾಗಿರಬೇಕು. ಜೊತೆಗೆ ಸಂಬಂಧಿತ ವ್ಯಾಪಾರದಲ್ಲಿ ಐಟಿಐ ಪ್ರಮಾಣಪತ್ರ ಇರಬೇಕು.
* ಕಾರ್ಪೆಂಟರ್, ಪೇಂಟರ್ ಮತ್ತು ವೆಲ್ಡರ್ ಗೆ ನ್ಯಾಷನಲ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೈನಿಂಗ್ ಅಥವಾ ಸ್ಟೇಟ್ ಕೌನ್ಸಿಲ್ ನೀಡಿದ ಅಧಿಸೂಚಿತ ವ್ಯಾಪಾರದಲ್ಲಿ ರಾಷ್ಟ್ರೀಯ ವ್ಯಾಪಾರ ಪ್ರಮಾಣ ಪತ್ರ ಜೊತೆಗೆ ಒಂದು ವರ್ಷ ವೃತ್ತಿಯ ಅನುಭವ ಹೊಂದಿರಬೇಕು. ಎಸ್‌ಎಸ್‌ಎಲ್‌ಸಿಯನ್ನು ಕನಿಷ್ಠ 50 ಅಂಕಗಳೊಂದಿಗೆ ಉತ್ತೀರ್ಣರಾಗಬೇಕು.
* ಪ್ರೋಗ್ರಾಮಿಂಗ್ ಮತ್ತು ಸಿಸ್ಟಮ್ ಅಡ್ಮಿನಿಸ್ಟ್ರೇಷನ್ ಹುದ್ದೆಗೆ ಅಸಿಸ್ಟೆಂಟ್ 10ನೇ ತರಗತಿಯಲ್ಲಿ ಸಹ ಉತ್ತೀರ್ಣರಾಗಿರಬೇಕು (ಕನಿಷ್ಠ 50 ಅಂಕ ಪಡೆದಿರುವುದು ಕಡ್ಡಾಯ) ಕಂಪ್ಯೂಟರ್ ಆಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ ವ್ಯಾಪಾರದಲ್ಲಿ ವೃತ್ತಿಪರ ತರಬೇತಿಗಾಗಿ ರಾಷ್ಟ್ರೀಯ ಕೌನ್ಸಿಲ್ ಅಥವಾ ಸ್ಟೇಟ್ ಕೌನ್ಸಿಲ್ ಫಾರ್ ವೊಕೇಶನಲ್ ಟ್ರೈನಿಂಗ್ ನಿಂದ ಒಂದು ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ಪ್ರಮಾಣಪತ್ರವನ್ನು ಹೊಂದಿರಬೇಕು ಎಂದು ಬಾರತೀಯ ರೈಲ್ವೆ ತಿಳಿಸಿದೆ.

* ಫಿಟ್ಟರ್, ಎಲೆಕ್ಟ್ರಿಷಿಯನ್ ಮತ್ತು ಮೆಷಿನಿಸ್ಟ್ ಹುದ್ದೆಗೆ ಫ್ರೆರ್ಶರ್ಸ್‌ಗಳು ವಿಜ್ಞಾನ ಮತ್ತು ಗಣಿತವನ್ನು ಒಂದು ವಿಷಯವಾಗಿ 10 ನೇ ತರಗತಿಯಲ್ಲಿ ಉತ್ತೀರ್ಣರಾಗಿರಬೇಕು.
ವಯೋಮಿತಿ ಸಡಿಲಿಕೆ ಮಾಹಿತಿ
ಮೇಲಿನ ಹುದ್ದೆಗಳಿಗೆ ಅರ್ಜಿ ಸಲ್ಲಿಸಲಿರುವ ಅಭ್ಯರ್ಥಿಗಳ ವಯಸ್ಸಿನ ಪೈಕಿ 15 ರಿಂದ 24 ವರ್ಷಗಳ ನಡುವೆ ಇರಬೇಕು ಎಂದು ನಿಗದಿ ಮಾಡಲಾಗಿದೆ. ಈ ಪೈಕಿ ಹಿಂದುಳಿದ ವರ್ಗದವರಿಗೆ ವಯೋಮಿತಿಯಲ್ಲಿ 3 ವರ್ಷ, ಪರಿಶಿಷ್ಟ ಜಾತಿ-ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ 5 ವರ್ಷಗಳು ಮತ್ತು ಬೆಂಚ್ ಮಾರ್ಕ್ ವಿಕಲಾಂಗ (PWBD) ಅಭ್ಯರ್ಥಿಗಳಿಗೆ 10 ವರ್ಷಗಳು ಗರಿಷ್ಠ ವಯೋಮಿತಿಯಲ್ಲಿ ಸಡಿಲಿಕೆ ಇರಲಿದೆ ಎಂದು ಅಧಿಸೂಚನೆ ತಿಳಿಸಿದೆ.
* 10 ನೇ ತರಗತಿ ಪಾಸಾದ ಫ್ರೆಶರ್ಸ್ ಗಳಿಗೆ ಮಾಸಿಕ ₹6000 ಸ್ಟೇಫಂಡ್ ಇರಲಿದೆ.
* ದ್ವಿತೀಯ ಪಿಯುಸಿ ಪಾಸಾದ ಫ್ರೆಶರ್ಸ್ ಗಳಿಗೆ ಮಾಸಿಕ ₹7000 ಸ್ಟೇಫಂಡ್ ಸಿಗಲಿದೆ.












Click it and Unblock the Notifications