ಮೈಸೂರು; ರೈಲ್ವೆ ಸಹಕಾರ ಬ್ಯಾಂಕ್‌ನಲ್ಲಿ 21 ಹುದ್ದೆಗೆ ಅರ್ಜಿ ಆಹ್ವಾನ

ಮೈಸೂರು, ಜೂನ್ 16; ರೈಲ್ವೆ ಸಹಕಾರ ಬ್ಯಾಂಕ್ ಲಿಮಿಡೆಡ್, ಮೈಸೂರು 21 ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಕರೆದಿದೆ. ಆಯ್ಕೆಯಾದ ಅಭ್ಯರ್ಥಿಗಳು ಮೈಸೂರಿನಲ್ಲಿ ಕೆಲಸ ಮಾಡಬೇಕಿದೆ. ಆಸಕ್ತ ಮತ್ತು ಅರ್ಹರು ಅರ್ಜಿಗಳನ್ನು ಸಲ್ಲಿಕೆ ಮಾಡಲು ಜೂನ್ 28 ಕೊನೆಯ ದಿನವಾಗಿದೆ.

ಬ್ರಾಂಚ್ ಮ್ಯಾನೇಜರ್ 1, ಅಕೌಟೆಂಟ್ 4, ಸೀನಿಯರ್ ಕ್ಯಾಶಿಯರ್‌ 1, ಕಂಪ್ಯೂಟರ್ ಸೂಪರ್ ವೈಸರ್ 1, ಜ್ಯೂನಿಯರ್ ಕ್ಲರ್ಕ್ 10, ಆಫೀಸ್ ಅಸಿಸ್ಟೆಂಟ್ 4 ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ. ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ.

Railway Co Operative Bank Mysore Recruitment Apply For 21 Post

ಬ್ರಾಂಚ್ ಮ್ಯಾನೇಜರ್ ಹುದ್ದೆಗೆ ಪದವಿ/ ಸಹಕಾರ ವಿಷಯದಲ್ಲಿ ಪದವಿ ಪಡೆದಿರಬೇಕು. ವೇತನ 35,400 ರೂ. ಗಳು. ಅಕೌಟೆಂಟ್ ಹುದ್ದೆಗೆ ವಾಣಿಜ್ಯ ಶಾಸ್ತ್ರದಲ್ಲಿ ಪದವಿ/ ಸಹಕಾರ/ ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಪದವಿ ಪಡೆದಿರಬೇಕು. ವೇತನ 35,400 ರೂ. ನಿಗದಿ ಮಾಡಲಾಗಿದೆ.

ಸೀನಿಯರ್ ಕ್ಯಾಶಿಯರ್‌ ಹುದ್ದೆಗೆ ವೇತನ 35,400 ರೂ.ಗಳು. ಅಭ್ಯರ್ಥಿಗಳು ಪದವಿ/ ಸಹಕಾರ ವಿಷಯದಲ್ಲಿ ಪದವಿ ಪಡೆದಿರಬೇಕು. ಕಂಪ್ಯೂಟರ್ ಸೂಪರ್ ವೈಸರ್ ಹುದ್ದೆಗೆ ಬಿಎಸ್‌ಸಿ, ಬಿಸಿಎ, ಕಂಪ್ಯೂಟರ್ ಸೈನ್ಸ್ ವಿಷಯದಲ್ಲಿ ಇಂಜಿನಿಯರಿಂಗ್ ಪದವಿ ಪಡೆದಿರಬೇಕು. ವೇತನ 29,200 ರೂ.ಗಳು.

ಜ್ಯೂನಿಯರ್ ಕ್ಲರ್ಕ್ ಹುದ್ದೆಗೆ 19,900 ರೂ. ವೇತನ ನಿಗದಿ ಮಾಡಲಾಗಿದೆ. ಅಭ್ಯರ್ಥಿಗಳು ಪಿಯುಸಿ ಓದಿರಬೇಕು. ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ವಿದ್ಯಾರ್ಹತೆ ಎಸ್‌ಎಸ್‌ಎಲ್‌ಸಿ ಆಗಿದೆ. ವೇತನ 18,000 ರೂ.ಗಳು.

ವಯೋಮಿತಿ ವಿವರಗಳು; ರೈಲ್ವೆ ಸಹಕಾರ ಬ್ಯಾಂಕ್ ಲಿಮಿಡೆಡ್, ಮೈಸೂರು ನೇಮಕಾತಿ ನಿಯಮಗಳ ಅನ್ವಯ ಅಭ್ಯರ್ಥಿಗಳಿಗೆ ಕನಿಷ್ಠ ವಯೋಮಿತಿ 18 ವರ್ಷಗಳು ಮತ್ತು ಗರಿಷ್ಠ ವಯೋಮಿತಿ 35 ವರ್ಷ 28 ಜೂನ್ 2023ಕ್ಕೆ ಅನ್ವಯವಾಗುವಂತೆ. ಎಸ್‌ಸಿ/ ಎಸ್‌ಟಿ/ ಪ್ರವರ್ಗ-1ರ ಅಭ್ಯರ್ಥಿಗಳಿಗೆ 5 ವರ್ಷದ ವಯೋಮಿತಿ ಸಡಿಲಿಕೆ ಇದೆ. ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳಿಗೆ 3 ವರ್ಷಗಳು.

ಅರ್ಜಿಗಳನ್ನು ಸಲ್ಲಿಕೆ ಮಾಡುವ ಎಸ್‌ಸಿ/ ಎಸ್‌ಟಿ/ ಪ್ರವರ್ಗ-1/ ಅಂಗವಿಕಲರು/ ಮಾಜಿ ಸೈನಿಕರು 500 ರೂ. ಶುಲ್ಕ ಪಾವತಿ ಮಾಡಬೇಕು. ಸಾಮಾನ್ಯ/ ಪ್ರವರ್ಗ 2ಎ/ 2ಬಿ/ 3ಎ/ 3ಬಿ ಅಭ್ಯರ್ಥಿಗಳು 1000 ರೂ. ಶುಲ್ಕವನ್ನು ಡಿಡಿ ಅಥವ ಪೇ ಅರ್ಡರ್ ಮೂಲಕ ಪಾವತಿಸಬೇಕು.

ಆಸಕ್ತ, ಅರ್ಹ ಅಭ್ಯರ್ಥಿಗಳು swrcbmysore.com ವೆಬ್‌ಸೈಟ್ ಮೂಲಕ ಅರ್ಜಿಗಳನ್ನು ಡೌನ್‌ಲೋಡ್ ಮಾಡಿಕೊಂಡು, ಅಗತ್ಯ ದಾಖಲೆಗಳನ್ನು ಲಗತ್ತಿಸಿ ಸ್ಪೀಡ್ ಅಥವ ರಿಜಿಸ್ಟರ್ ಪೋಸ್ಟ್ ಮೂಲಕ ಜೂನ್ 28ರೊಳಗೆ ಸಲ್ಲಿಸಬೇಕು.

ಅರ್ಜಿ ಸಲ್ಲಿಕೆ ಮಾಡಲು ವಿಳಾಸ; Member Secretary, Recruitment Committee, The Railway Co-operative Bank Limited, Sheshadri Iyer Road, Mysuru - 570001.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+