ಪ್ರಾಥಮಿಕ, ಪ್ರೌಢಶಾಲಾ ಅತಿಥಿ ಶಿಕ್ಷಕರ ನೇಮಕಾತಿ ಅಧಿಸೂಚನೆ
ಬೆಂಗಳೂರು, ಜುಲೈ 21 : ರಾಜ್ಯದ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಅತಿಥಿ ಶಿಕ್ಷಕರನ್ನು ನೇಮಕ ಮಾಡಲು ಸರ್ಕಾರ ಅಧಿಸೂಚನೆ ಹೊರಡಿಸಿದೆ. ನೇರ ನೇಮಕಾತಿ ಮೂಲಕ ಶಿಕ್ಷಕರನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತಿದ್ದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜುಲೈ 25, 2015.
ಸರ್ಕಾರದಿಂದ ಮಂಜೂರಾಗಿರುವ ಅತಿಥಿ ಶಿಕ್ಷಕರ ಹುದ್ದೆಗಳಲ್ಲಿ ಪ್ರಾಥಮಿಕ ಶಾಲೆಗಳಿಗೆ 9,511 ಮತ್ತು ಪ್ರೌಢ ಶಾಲೆಗಳಿಗೆ 1,727 ಹುದ್ದೆಗಳನ್ನು ನಿಗದಿಪಡಿಸಲಾಗಿದ್ದು, ಜಿಲ್ಲಾವಾರು ಹಂಚಿಕೆ ಮಾಡಲಾಗಿದೆ. ಷರತ್ತುಗಳಿಗೆ ಅನ್ವಯವಾಗಿ ಈ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ.

ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿಗೆ ಸಂಬಂಧಿಸಿದ ಅತಿಥಿ ಶಿಕ್ಷಕರ ಆಯ್ಕೆ ಜವಾಬ್ದಾರಿಯನ್ನು ಸಂಬಂಧಿಸಿದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಮುಖ್ಯ ಶಿಕ್ಷಕರೇ ಮಾಡಬೇಕು. ಗ್ರಾಮೀಣ ಪ್ರದೇಶದಲ್ಲಿ ಮಾತ್ರ ಅತಿಥಿ ಶಿಕ್ಷಕರನ್ನು ನೇಮಕ ಮಾಡಬಹುದಾಗಿದೆ. [ನೇಮಕಾತಿ ಆದೇಶ ಮತ್ತು ಹುದ್ದೆಗಳ ಹಂಚಿಕೆ ವಿವರ]
ನೇಮಕಾತಿಗೆ ಅಧಿಸೂಚಿಸಿದ ಪ್ರಾಥಮಿಕ, ಪ್ರೌಢ ಶಿಕ್ಷಕರು ನೇಮಕಗೊಂಡು ಕರ್ತವ್ಯಕ್ಕೆ ಹಾಜರಾದ ತಕ್ಷಣ ಅತಿಥಿ ಶಿಕ್ಷಕರ ಹುದ್ದೆಗಳು ರದ್ದುಗೊಳ್ಳಲಿವೆ. ಪ್ರಾಥಮಿಕ ಶಾಲಾ ಶಿಕ್ಷಕರಿಗೆ 5,500 ರೂ. ಮತ್ತು ಪ್ರೌಢ ಶಾಲಾ ಶಿಕ್ಷಕರಿಗೆ 6000 ರೂ. ಗೌರವ ಧನ ನಿಗದಿಪಡಿಸಲಾಗಿದೆ.[KPSC ನೇಮಕಾತಿ, ಆಗಸ್ಟ್ 1 ಅರ್ಜಿ ಸಲ್ಲಿಸಲು ಕೊನೆಯ ದಿನ]
ಪ್ರಾಥಮಿಕ ಶಾಲಾ ಶಿಕ್ಷಕರ ವಿವರ : ಕೋಲಾರ 168, ಶಿವಮೊಗ್ಗ 281, ತುಮಕೂರು 110, ಚಾಮರಾಜನಗರ 192, ಮೈಸೂರು 306, ದಕ್ಷಿಣ ಕನ್ನಡ 300, ಬೆಳಗಾವಿ 308, ಧಾರವಾಡ 337, ಬಳ್ಳಾರಿ 612, ರಾಯಚೂರು 433 ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಒಟ್ಟು 9,511 ಪ್ರಾಥಮಿಕ ಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ.
ಪ್ರೌಢ ಶಾಲಾ ಶಿಕ್ಷಕರ ವಿವರ : ಕೋಲಾರ 100, ಶಿವಮೊಗ್ಗ 45, ಚಿತ್ರದುರ್ಗ 38, ದಾವಣಗೆರೆ 41, ತುಮಕೂರು 92, ಚಾಮರಾಜನಗರ 70, ಮಂಡ್ಯ 52, ಮೈಸೂರು 102, ದಕ್ಷಿಣ ಕನ್ನಡ 42, ಬೆಳಗಾವಿ 29, ಬಾಗಲಕೋಟೆ 62, ವಿಜಯಪುರ 34, ಧಾರವಾಡ 32, ಕಲಬುರಗಿ 155, ರಾಯಚೂರು 93 ಸೇರಿ ವಿವಿಧ ಜಿಲ್ಲೆಗಳಲ್ಲಿ 1,727 ಪ್ರೌಢಶಾಲಾ ಶಿಕ್ಷಕರ ಹುದ್ದೆಗಳು ಖಾಲಿ ಇವೆ.
ಅತಿಥಿ ಶಿಕ್ಷಕರಾಗಿ ಕಾರ್ಯನಿರ್ವಹಿಸಲು ಇಚ್ಛಿಸುವ ಶಾಲೆಗಳಲ್ಲಿ ಅಭ್ಯರ್ಥಿಗಳು ವಿದ್ಯಾರ್ಹತೆ ಅಂಕಪಟ್ಟಿಯೊಂದಿಗೆ ಜುಲೈ 21 ರಿಂದ 25ರ ವರೆಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. ಜುಲೈ 28ರಂದು ಶಿಕ್ಷಕರ ಆಯ್ಕೆ ಪಟ್ಟಿ ಪ್ರಕಟಗೊಳ್ಳಲಿದ್ದು, ಆಗಸ್ಟ್ 1ರಿಂದ ಕರ್ತವ್ಯಕ್ಕೆ ಹಾಜರಾಗಬೇಕಾಗಿದೆ.












Click it and Unblock the Notifications