Job Fair: ಡಿಸೆಂಬರ್ 23ರಂದು 71,000 ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಿಸಲಿರುವ ಪ್ರಧಾನಿ ಮೋದಿ
PM Modi: ಸರ್ಕಾರವು ಆಗಾಗ ಉದ್ಯೋಗಾಂಕ್ಷಿಗಳಿಗೆ ಗಡ್ ನ್ಯೂಸ್ ನೀಡುತ್ತಲೇ ಇರುತ್ತದೆ. ಇನ್ನು ಇದೀಗ ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿನ 71,000 ಉದ್ಯೋಗ ನೇಮಕಾತಿ ಪತ್ರಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು (ಡಿಸೆಂಬರ್ 23) ವಿತರಣೆ ಮಾಡಲಿದ್ದಾರೆ. ತಮ್ಮ ಕಚೇರಿಯಿಂದ ವಿಡಿಯೋ ಕಾನ್ಫರೆನ್ಸ್ ಮೂಲಕ ವರ್ಚುವಲ್ ಆಗಿ ಮೋದಿ ಅವರು ಉದ್ಯೋಗ ಮೇಳದಲ್ಲಿ ಭಾಗವಹಿಸಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಉದ್ಯೋಗ ಸೃಷ್ಟಿಸಬೇಕೆಂವ ಪ್ರಧಾನಿ ನರೇಂದ್ರ ಮೋದಿ ಅವರ ಅತ್ಯಂತ ಬದ್ಧತೆಯ ಭಾಗವಾಗಿ ಈ ಉದ್ಯೋಗ ಮೇಳ ನಡೆಯುತ್ತಿದೆ ಎಂದು ಪ್ರಧಾನಿ ಕಾರ್ಯಾಲಯ ತಿಳಿಸಿದೆ. ನಾಳೆ ಬೆಳಗ್ಗೆ 10:30ಕ್ಕೆ ಕಾರ್ಯಕ್ರಮಕ್ಕೆ ಚಾಲನೆ ದೊರೆಯಲಿದ್ದು, ಉದ್ಯೋಗಾಕಾಂಕ್ಷಿಗಳನ್ನು ಉಲ್ಲೇಖಿಸಿ ಮೋದಿ ಮಾತನಾಡಲಿದ್ದಾರೆ. ಉದ್ಯೋಗ ಮೇಳವು ದೇಶ ಕಟ್ಟುವ ಮತ್ತು ಸ್ವಯಂ ಸಬಲೀಕರಣಕ್ಕಾಗಿ ಯುವಜನತೆಗೆ ಅರ್ಥಪೂರ್ಣ ಅವಕಾಶ ಕಲ್ಪಿಸುತ್ತದೆ ಎಂದೂ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ದೇಶದಲ್ಲಿ 45 ಭಾಗಗಳಲ್ಲಿ ನಡೆಯಲಿರುವ ಮೇಳದಲ್ಲಿ ಕೇಂದ್ರ ಸರ್ಕಾರದ ವಿವಿಧ ಸಚಿವಾಲಯ ಮತ್ತು ಇಲಾಖೆಗಳಿಗೆ ಉದ್ಯೋಗಿಗಳ ನೇಮಕ ಪ್ರಕ್ರಿಯೆ ನಡೆಯಲಿದೆ. ಉದ್ಯೋಗ ನೇಮಕಾತಿ ಪತ್ರಗಳನ್ನು ವಿತರಣೆ ಮಡುವ ಸಚುವಾಲಯಗಳ ಪೈಕಿ ಕೇಂದ್ರ ಗೃಹ ಸಚಿವಾಲಯ, ಅಂಚೆ ಇಲಾಖೆ, ಉನ್ನತ ಶಿಕ್ಷಣ ಇಲಾಖೆ, ಹಣಕಾಸು ಸಚಿವಾಲಯ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯಗಳೂ ಸೇರಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
4,115 ಹುದ್ದೆಗಳ ಭರ್ತಿಗೆ ಅನುಮೋದನೆ: ರಾಜ್ಯ ಪೊಲೀಸ್ ಇಲಾಖೆ ಸೇರಬಯಸುವಂತಹವರಿಗೆ ಸರ್ಕಾರ ಗುಡ್ ನ್ಯೂಸ್‌ವೊಂದನ್ನು ನೀಡಿದೆ. ಇಲಾಖೆಯಲ್ಲಿ 4,115 ಪೊಲೀಸ್ ಕಾನ್ಸ್‌ಟೇಬಲ್, PSI ಹುದ್ದೆಗಳ ಭರ್ತಿಗೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಹಾಗಾದರೆ ಇದರಲ್ಲಿ ಯಾವ್ಯಾವ ಹದ್ದೆಗಳು ಖಾಲಿಯಿವೆ ಹಾಗೂ ಯಾವ ಸಾಲಿನವು ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ ಗಮನಿಸಿ.
4,115 ಹುದ್ದೆಗಳ ಪೈಕಿ 3,500 ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಗಳು ಹಾಗೂ 615 ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಹುದ್ದೆಗಳಿವೆ. 2023-24ನೇ ಸಾಲಿನ ಹಾಗೂ 2022-23ನೇ ಸಾಲಿನಲ್ಲಿ ಭರ್ತಿ ಮಾಡಬೇಕಿದ್ದ, ಪ್ರಸ್ತಾವನೆ ಸಲ್ಲಿಕೆ ಮಾಡಲಾಗಿರುವ ಹುದ್ದೆಗಳು ಇವು.
ಹುದ್ದೆಗಳ ವಿವರ
* ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (ಸಿಎಆರ್ / ಡಿಎಆರ್) 2000 ಹುದ್ದೆಗಳು ಇದ್ದು, 2023-24ನೇ ಸಾಲಿನಲ್ಲಿ ಭರ್ತಿ ಮಾಡಬೇಕಿದ್ದ ಹುದ್ದೆಗಳು ಇವಾಗಿವೆ.
* ವಿಶೇಷ ಮೀಸಲು ಪೊಲೀಸ್ ಕಾನ್ಸ್‌ಟೇಬಲ್ (SRPC ) (KSRP) 150 ಹುದ್ದೆಗಳಿದ್ದು, 2023-24ನೇ ಸಾಲಿನಲ್ಲಿ ಭರ್ತಿ ಮಾಡಬೇಕಿದ್ದ ಹುದ್ದೆಗಳು ಇವಾಗಿವೆ.
* ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ 300 ಹುದ್ದೆಗಳಿದ್ದು, 2022-23ನೇ ಸಾಲಿನಲ್ಲಿ ಭರ್ತಿ ಮಾಡಬೇಕಿದ್ದ ಹುದ್ದೆಗಳು ಇವಾಗಿವೆ.
* ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ 300 ಹುದ್ದೆಗಳಿದ್ದು, 2023-24ನೇ ಸಾಲಿನಲ್ಲಿ ಭರ್ತಿ ಮಾಡಬೇಕಿದ್ದ ಹುದ್ದೆಗಳು ಇವಾಗಿವೆ.
* ಡೆಪ್ಯೂಟಿ ಸಬ್ ಇನ್ಸ್‌ಪೆಕ್ಟರ್ 15 ಹುದ್ದೆಗಳಿದ್ದು, 2024-25ನೇ ಸಾಲಿನಲ್ಲಿ ಭರ್ತಿ ಮಾಡಬೇಕಿದ್ದ ಹುದ್ದೆಗಳು ಇವಾಗಿವೆ.












Click it and Unblock the Notifications