58 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಪಿಜಿಸಿಐಎಲ್
ಬೆಂಗಳೂರು, ಸೆಪ್ಟೆಂಬರ್ 18 : ಪಿಜಿಸಿಐಎಲ್ 58 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 4 ಅಕ್ಟೋಬರ್ 2018 ಕೊನೆಯ ದಿನವಾಗಿದೆ.
ಪವರ್ ಗ್ರೀಡ್ ಕಾರ್ಪೋರೇಷನ್ ಆಫ್ ಇಂಡಿಯಾ ಲಿಮಿಟೆಡ್ (ಪಿಜಿಸಿಐಎಲ್) ಡಿಪ್ಲೊಮಾ ಟ್ರೈನಿ, ಜ್ಯೂನಿಯರ್ ಆಫೀಸರ್ ಟ್ರೈನಿ, ಜ್ಯೂನಿಯರ್ ಟೆಕ್ನಿಶಿಯನ್ ಟ್ರೈನಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.
ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಡಿಪ್ಲೊಮಾ ಟ್ರೈನಿ/ ಜ್ಯೂನಿಯರ್ ಆಫೀಸರ್ ಟ್ರೈನಿ ಹುದ್ದೆಗೆ 16500 ರೂ. ವೇತನ ನಿಗದಿ ಮಾಡಲಾಗಿದೆ. ಜ್ಯೂನಿಯರ್ ಟೆಕ್ನಿಶಿಯನ್ ಟ್ರೈನಿ ಹುದ್ದೆಗೆ 11500 ರೂ. ವೇತನ ನಿಗದಿ ಮಾಡಲಾಗಿದೆ.

ಡಿಪ್ಲೊಮಾ ಟ್ರೈನಿ (ಎಲೆಕ್ಟ್ರಿಕಲ್/ಸಿವಿಲ್) ಹುದ್ದೆಗೆ ಅರ್ಜಿ ಸಲ್ಲಿಸುವವರು ಎಲೆಕ್ಟ್ರಿಕಲ್ ಇಂಜಿನಿಯರಿಂಗ್‌ನಲ್ಲಿ ಮಾನ್ಯತೆ ಪಡೆದ ಸಂಸ್ಥೆಯಿಂದ ಡಿಪ್ಲೊಮಾವನ್ನು ಶೇ 70ರಷ್ಟು ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.
ಜ್ಯೂನಿಯರ್ ಆಫೀಸರ್ ಟ್ರೈನಿ (ಎಚ್‌ಆರ್) ಹುದ್ದೆಗೆ ಅರ್ಜಿ ಸಲ್ಲಿಸುವವರು ಪಿಜಿ ಡಿಪ್ಲೊಮಾ ಇನ್ ಎಂಎಚ್‌ಆರ್‌ಎಂ/ಎಂಎಸ್‌ಡಬ್ಲ್ಯೂ ಅಥವ 2 ವರ್ಷದ ಎಂಬಿಎಯನ್ನು ಶೇ 55ರಷ್ಟು ಅಂಕಗಳೊಂದಿಗೆ ಪೂರ್ಣಗೊಳಿಸಿರಬೇಕು.
ಜ್ಯೂನಿಯರ್ ಟ್ರೈನಿ (ಎಲೆಕ್ಟ್ರಿಕಲ್) ಹುದ್ದೆಗೆ ಅರ್ಜಿ ಸಲ್ಲಿಸುವವರು ಎಲೆಕ್ಟ್ರಿಕಲ್ ಟ್ರೇಡ್‌ನಲ್ಲಿ ಎರಡು ವರ್ಷದ ಐಟಿಐ ಕೋರ್ಸ್ ಅನ್ನು ಪೂರ್ಣಗೊಳಿಸಿರಬೇಕು.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 18 ರಿಂದ 27 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ. 2 ಅಕ್ಟೋಬರ್ 2018ಕ್ಕೆ ಅನ್ವಯವಾಗುವಂತೆ.
ಅರ್ಜಿ ಶುಲ್ಕಗಳು
* ಡಿಪ್ಲೊಮಾ ಟ್ರೈನಿ ಹುದ್ದೆ/ಜ್ಯೂನಿಯರ್ ಆಫೀಸರ್ ಟ್ರೈನಿ ಹುದ್ದೆಗೆ 300 ರೂ.ಗಳು. ಜ್ಯೂನಿಯರ್ ಟೆಕ್ನಿಶಿಯನ್ ಟ್ರೈನಿ ಹುದ್ದೆಗೆ 200 ರೂ.. ಎಸ್‌ಸಿ/ಎಸ್‌ಟಿ/ಅಂಗವಿಕಲ/ಇಲಾಖೆ ಅಭ್ಯರ್ಥಿಗಳಿಗೆ ಯಾವುದೇ ಅರ್ಜಿ ಶುಲ್ಕ ಇರುವುದಿಲ್ಲ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications