Job News: ಓಲಾ ಕಂಪನಿಯಲ್ಲಿ 3000 ಉದ್ಯೋಗ ಅವಕಾಶ

ಬೆಂಗಳೂರು, ಸೆಪ್ಟೆಂಬರ್ 21: ಓಲಾ ಎಲೆಕ್ಟ್ರಿಕ್ ಕಂಪನಿಯು 200ಕ್ಕೂ ಹೆಚ್ಚು ಉದ್ಯೋಗಿಗಳನ್ನು ಮನೆಗೆ ಕಳುಹಿಸುವುದಕ್ಕೆ ಯೋಜನೆ ಹಾಕಿಕೊಳ್ಳುತ್ತಿದೆ. 200 ಉದ್ಯೋಗ ಕಡಿತದ ಹಿಂದೆ 3000 ಉದ್ಯೋಗ ಸೃಷ್ಟಿಯ ಭಾರೀ ಪ್ಲ್ಯಾನ್ ರೆಡಿ ಆಗುತ್ತಿದೆ.

ಓಲಾ ಎಲೆಕ್ಟ್ರಿಕ್ ಕಂಪನಿಯು ಹೆಚ್ಚಾಗಿ ಸಾಫ್ಟ್‌ವೇರ್ ಅಭಿವೃದ್ಧಿ ಪಾತ್ರಗಳಲ್ಲಿ ಪುನಾರಚನೆ ಯೋಜನೆಗೆ ಕೈ ಹಾಕಿದೆ. ಇದರ ಭಾಗವಾಗಿ ಸಾಫ್ಟ್‌ವೇರ್ ಅಲ್ಲದ ಎಂಜಿನಿಯರಿಂಗ್ ವಲಯದ ಕಡೆಗೆ ಹೆಚ್ಚು ಗಮನ ಹರಿಸಲಾಗುತ್ತಿದ್ದು ಸುಮಾರು 3000 ನೇಮಕಾತಿಗಳನ್ನು ಮಾಡಿಕೊಳ್ಳಲು ಯೋಚಿಸುತ್ತಿದೆ. ಆ ಮೂಲಕ ನಿರುದ್ಯೋಗಿ ಯುವಕರಿಗೆ ಉದ್ಯೋಗದ ಬಾಗಿಲು ತೆರೆದುಕೊಳ್ಳಲಿದೆ.

ಎಲೆಕ್ಟ್ರಿಕ್ ಸ್ಕೂಟರ್‌ಗಳನ್ನು ಮಾರಾಟ ಮಾಡುವ ಕಂಪನಿಯು, ಸಾಫ್ಟ್‌ವೇರ್ ಅಲ್ಲದ ಎಂಜಿನಿಯರಿಂಗ್ ವಲಯದ ಕಡೆಗೆ ತನ್ನ ಗಮನವನ್ನು ಹೆಚ್ಚಿಸುತ್ತಿದೆ. ವಾಹನ, ಕೋಶ, ಬ್ಯಾಟರಿ, ಉತ್ಪಾದನೆ ಮತ್ತು ಯಾಂತ್ರೀಕೃತಗೊಂಡ ಎಂಜಿನಿಯರಿಂಗ್ ಮತ್ತು ಆರ್ & ಡಿ ಸಾಮರ್ಥ್ಯಗಳನ್ನು ನಿರ್ಮಿಸುವತ್ತ ಸ್ಪಷ್ಟವಾಗಿ ಗಮನ ಹರಿಸಲಾಗಿದೆ, ಎಂದು ಹೇಳಿದೆ.

ಮೊದಲ ಓಲಾ ಎಲೆಕ್ಟ್ರಿಕ್ ಕಾರು ಯಾವಾಗ ಬಿಡುಗಡೆ?

ಮೊದಲ ಓಲಾ ಎಲೆಕ್ಟ್ರಿಕ್ ಕಾರು ಯಾವಾಗ ಬಿಡುಗಡೆ?

2024ರಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಿಡುಗಡೆ ಮಾಡುವ ಯೋಜನೆ ಸಿದ್ಧವಾಗಿದೆ. ಆ ಮೂಲಕ ಓಲಾ ಎಲೆಕ್ಟ್ರಿಕ್ ಕಂಪನಿಯು ಸಂಯೋಜಿತ ಚಲನಶೀಲ ಸಂಸ್ಥೆಯಾಗಿ ಹೊರ ಹೊಮ್ಮುವತ್ತ ಗಮನಹರಿಸುತ್ತಿದೆ ಎಂದು ಹೇಳಿದೆ. "ಓಲಾ ಕಂಪನಿಯ ದ್ವಿಚಕ್ರ ವಾಹನಗಳು (Ola 2Ws) ಮತ್ತು ನಾಲ್ಕು ಚಕ್ರದ ವಾಹನಗಳು (4Ws) ಸೆಲ್ R&D ಮತ್ತು ಉತ್ಪಾದನೆಯಲ್ಲಿ ತನ್ನ ಸಾಮರ್ಥ್ಯವನ್ನು ಬಲಪಡಿಸಬೇಕಿದೆ. ಆ ಮೂಲಕ ಸಾಮರ್ಥ್ಯ ಮತ್ತು ಪ್ರಾಬಲ್ಯವನ್ನು ಸಾಧಿಸುವುದಾಗಿ ಕಂಪನಿಯು ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಓಲಾ ಲಕ್ಷ್ಯ ಗುರಿಯ ಕಡೆಗೆ

ಓಲಾ ಲಕ್ಷ್ಯ ಗುರಿಯ ಕಡೆಗೆ

ತಾನು ಅಂದುಕೊಂಡಿರುವಂತೆ ಗುರಿ ಸಾಧಿಸುವ ಮಾರ್ಗದ ಕಡೆಗೆ ಓಲಾ ಕಂಪನಿಯು ಲಕ್ಷ್ಯವನ್ನು ನೆಟ್ಟಿದೆ. ಈ ಪ್ರಯತ್ನಗಳ ಬೆಳಕಿನಲ್ಲಿ ಕಂಪನಿಯು ಕಾರ್ಯಾಚರಣೆಗಳನ್ನು ಕೇಂದ್ರೀಕರಿಸುತ್ತಿದೆ. ಪುನರ್ ಉತ್ಪಾದನೆಯನ್ನು ಕಡಿಮೆ ಮಾಡಲು ಮತ್ತು ಸಂಬಂಧಿತ ಪಾತ್ರಗಳು ಮತ್ತು ಕಾರ್ಯಗಳನ್ನು ಬಲಪಡಿಸಲು ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ಬಲವಾದ ಪಾರ್ಶ್ವ ರಚನೆಯನ್ನು ನಿರ್ಮಿಸಲು ಪುನಾರಚನೆ ವ್ಯಾಯಾಮವನ್ನು ಕೈಗೊಳ್ಳುವುದು ಬಹುಮುಖ್ಯವಾಗಿದೆ," ಎಂದು ಕಂಪನಿಯು ಹೇಳಿದೆ.

3000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿರುವ ಓಲಾ

3000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲಿರುವ ಓಲಾ

ಹೊಸ ದಾರಿಯತ್ತ ಸಾಗುತ್ತಿರುವ ಓಲಾ ಕಂಪನಿಯು ತನ್ನ ರೂಪುರೇಷೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡಿಕೊಳ್ಳುತ್ತಿದೆ. ಹೀಗಾಗಿ 2000 ಎಂಜಿನಿಯರ್‌ಗಳ ಪೈಕಿ ಶೇಕಡಾ 10ರಷ್ಟು ಅಂದರೆ ಕನಿಷ್ಠ 200 ಉದ್ಯೋಗಿಗಳನ್ನು ಕೆಲಸದಿಂದ ತೆಗೆದು ಹಾಕುವ ಸಾಧ್ಯತೆಯಿದೆ. ಅದೇ ರೀತಿ ಓಲಾ ಎಲೆಕ್ಟ್ರಿಕ್ "ಪ್ರಸ್ತುತ ಸುಮಾರು 2000 ಇಂಜಿನಿಯರ್‌ಗಳನ್ನು ಹೊಂದಿದೆ. ಮುಂದಿನ 18 ತಿಂಗಳುಗಳಲ್ಲಿ ತನ್ನ ಇಂಜಿನಿಯರಿಂಗ್ ಪ್ರತಿಭೆಗಳ ಪ್ರಮಾಣವನ್ನು 5,000ಕ್ಕೆ ಹೆಚ್ಚಿಸುವ ಗುರಿಯನ್ನು ಹೊಂದಿದೆ. ಆದ್ದರಿಂದ 3000 ಹೊಸ ಉದ್ಯೋಗಿಗಳನ್ನು ನೇಮಕಾತಿ ಮಾಡಿಕೊಳ್ಳುವ ಸಾಧ್ಯತೆಯಿದೆ," ಎಂದು ಸಂಸ್ಥೆಯು ಹೇಳಿದೆ.

ಎಲೆಕ್ಟ್ರಿಕ್ ಕಾರು ವಲಯಕ್ಕೆ ಓಲಾ ಪ್ರವೇಶ

ಎಲೆಕ್ಟ್ರಿಕ್ ಕಾರು ವಲಯಕ್ಕೆ ಓಲಾ ಪ್ರವೇಶ

ಕಳೆದ ಆಗಸ್ಟ್ 15ರಂದು ಓಲಾ ಕಂಪನಿಯು ಎಲೆಕ್ಟ್ರಿಕ್ ಕಾರುಗಳ ವಲಯಕ್ಕೆ ಎಂಟ್ರಿ ಕೊಡುವುದಾಗಿ ಘೋಷಿಸಿತು. 2024ರ ವೇಳೆಗೆ ತನ್ನ ಮೊದಲ ಮಾದರಿಯನ್ನು ಬಿಡುಗಡೆ ಮಾಡುವುದಾಗಿ ಪ್ರಕಟಿಸಿತ್ತು. ಅದೇ ನಿಟ್ಟಿನಲ್ಲಿ ಕಳೆದ ವರ್ಷ ಈ ವಿಭಾಗಕ್ಕೆ ಪ್ರವೇಶವನ್ನು ಘೋಷಿಸಿದ ನಂತರ ತನ್ನ ಎಲೆಕ್ಟ್ರಿಕ್ ಸ್ಕೂಟರ್‌ಗಳ ವಿತರಣೆಗೆ ಹೆಣಗಾಡುತ್ತಿರುವ ಕಂಪನಿಯು 2026-2027ರ ವೇಳೆಗೆ 10 ಲಕ್ಷ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡುವ ಮಹತ್ವಾಕಾಂಕ್ಷೆಯ ಗುರಿ ಹೊಂದಿದೆ.

ಫೆಡರೇಶನ್ ಆಫ್ ಆಟೋಮೊಬೈಲ್ ಡೀಲರ್ಸ್ ಅಸೋಸಿಯೇಷನ್ಸ್ (ಎಫ್‌ಎಡಿಎ) ಅಂಕಿ-ಅಂಶಗಳ ಪ್ರಕಾರ, ಈ ವರ್ಷದ ಆಗಸ್ಟ್‌ನಲ್ಲಿ ಓಲಾ ಎಲೆಕ್ಟ್ರಿಕ್ 3,351 ಯುನಿಟ್ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಈ ವರ್ಷದ ಜುಲೈನಲ್ಲಿ 3,426 ಯುನಿಟ್‌ಗಳಿಂದ ಕಡಿಮೆಯಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+