ಕರ್ನಾಟಕ : ಡಿ-ಗ್ರೂಪ್ ನೌಕರಿಗೆ ಎಸ್‌ಎಸ್‌ಎಲ್‌ಸಿ ಕಡ್ಡಾಯ

ಬೆಂಗಳೂರು, ಜುಲೈ 03 : ಕರ್ನಾಟಕದಲ್ಲಿ ಡಿ ಗ್ರೂಪ್ ಸರ್ಕಾರಿ ನೌಕರಿ ಪಡೆಯಲು ಎಸ್‌ಎಸ್‌ಎಲ್‌ಸಿ ಕಡ್ಡಾಯವಾಗಲಿದೆ. ಕರ್ನಾಟಕ ನಾಗರಿಕ ಸೇವೆ ನಿಯಮಗಳಿಗೆ ರಾಜ್ಯ ಸರ್ಕಾರ ತಿದ್ದುಪಡಿ ತಂದಿದ್ದು ಅಧಿಸೂಚನೆ ಪ್ರಕಟಿಸಲಾಗಿದೆ.

ಪ್ರಸ್ತುತ 7ನೇ ತರಗತಿಗೆ ಪಬ್ಲಿಕ್ ಪರೀಕ್ಷೆಗಳಿಲ್ಲ. ಆದ್ದರಿಂದ, ಡಿ ಗ್ರೂಪ್ ನೌಕರಿಗೆ ಸೇರಲು ಎಸ್‌ಎಸ್‌ಎಲ್‌ಸಿ ಕಡ್ಡಾಯಗೊಳಿಸಲಾಗಿದೆ. ಸಿ-ಗ್ರೂಪ್ ನೌಕರರ ನೇಮಕಾತಿಗೆ ಲಿಖಿತ ಪರೀಕ್ಷೆ ಮಾತ್ರ ಮಾನದಂಡವಾಗಲಿದೆ.

ಕರ್ನಾಟಕ ಸರ್ಕಾರ 'ಕರ್ನಾಟಕ ನಾಗರಿಕ ಸೇವೆ (ಸಾಮಾನ್ಯ ನೇಮಕಾತಿ) ನಿಯಮಗಳಿಗೆ ತಿದ್ದುಪಡಿ ತಂದಿದೆ. ಈ ಕುರಿತು ಅಧಿಸೂಚನೆಯನ್ನು ಹೊರಡಿಸಲಾಗಿದೆ. ಆದ್ದರಿಂದ, ಇನ್ನು ಮುಂದೆ ಡಿ ಗ್ರೂಪ್ ನೌಕರಿ ಸೇರಲು ಎಸ್‌ಎಸ್‌ಎಲ್‌ಸಿ ಕಡ್ಡಾಯವಾಗಲಿದೆ.

Now SSLC mandatory for d group govt jobs Karnataka

ಸಿ-ಗ್ರೂಪ್ ಸಿಬ್ಭಂದಿ ನೇಮಕಾತಿಯ ಮೌಖಿಕ ಸಂದರ್ಶನದಲ್ಲಿ ಅಕ್ರಮ ನಡೆಯಬಹುದು ಎಂಬ ಕಾರಣಕ್ಕೆ ಲಿಖಿತ ಪರೀಕ್ಷೆ ಅಂಕಗಳನ್ನು ಮಾತ್ರ ಮಾನದಂಡವಾಗಿ ಮಾಡಲು ತೀರ್ಮಾನಿಸಲಾಗಿದೆ. ಆದ್ದರಿಂದ, ನೇಮಕಾತಿ ವೇಳೆ ಪರೀಕ್ಷಾ ಫಲಿತಾಂಶ ಮಾತ್ರ ಪರಿಗಣನೆಯಾಗಲಿದೆ.

ಕರ್ನಾಟಕ ನಾಗರಿಕ ಸೇವೆ (ಸಾಮಾನ್ಯ ನೇಮಕಾತಿ) ನಿಯಮಗಳ ತಿದ್ದುಪಡಿಯಿಂದ ಹಲವು ಬದಲಾವಣೆಯಾಗಲಿದೆ. ಹಿಂದೆ ಒಂದು ಇಲಾಖೆಯಲ್ಲಿ ಪ್ರೊಬೆಷನರಿ ಅವಧಿ ಪೂರೈಸಿದವರು ಮತ್ತೊಂದು ಇಲಾಖೆಗೆ ಹೋದರೆ ಒಂದು ವರ್ಷ ಪ್ರೊಬೆಷನರಿ ಅವಧಿ ಪೂರ್ಣಗೊಳಿಸಬೇಕಿತ್ತು. ಈಗ ಇನ್ನೊಂದು ಇಲಾಖೆಯಲ್ಲೂ 2 ವರ್ಷ ಪ್ರೊಬೆಷನರಿ ಅವಧಿ ಪೂರ್ಣಗೊಳಿಸಬೇಕಿದೆ.

ಅಭ್ಯರ್ಥಿಗಳು ಪ್ರೊಬೆಷನರಿ ಅವಧಿಯಲ್ಲಿ ಕೆಲವೊಂದು ಪರೀಕ್ಷೆಗಳನ್ನು ಅಥವ ಅರ್ಹತೆಗಳನ್ನು ಪಡೆಯುವುದಕ್ಕೆ ಇದ್ದ ಒಂದು ವರ್ಷದ ಅವಧಿಯನ್ನು 5 ವರ್ಷಕ್ಕೆ ವಿಸ್ತರಣೆ ಮಾಡಲಾಗಿದೆ. ಅಷ್ಟರೊಳಗೆ ಪೂರೈಸದಿದ್ದರೆ ಕೆಲಸದಿಂದ ತೆಗೆದುಹಾಕಲು ಅವಕಾಶವಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+