19 ಗ್ರೂಪ್ ಸಿ, ಡಿ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದ ಉತ್ತರ ರೈಲ್ವೆ
ಬೆಂಗಳೂರು, ಜನವರಿ 07 : ಉತ್ತರ ರೈಲ್ವೆ 19 ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು ಜನವರಿ 30, 2019 ಕೊನೆಯ ದಿನವಾಗಿದೆ.
ಉತ್ತರ ರೈಲ್ವೆ ಗ್ರೂಪ್ 'ಸಿ' ಮತ್ತು ಗ್ರೂಪ್ 'ಡಿ' ವೃಂದದ 19 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ದರಿರಬೇಕು. ಡಿಸೆಂಬರ್ 31 ರಿಂದ ಜನವರಿ 30ರೊಳಗೆ ಅರ್ಜಿಗಳನ್ನು ಸಲ್ಲಿಸಬೇಕಾಗಿದೆ.
ಗ್ರೂಪ್ 'ಸಿ' ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10+2 (+2ಸ್ಟೇಜ್) ಅಥವ ತತ್ಸಮಾನ ವಿದ್ಯಾರ್ಹತೆಯನ್ನು ಶೇ 50ರಷ್ಟು ಅಂಕಗಳೊಂದಿಗೆ ಮಾನ್ಯತೆ ಪಡೆದ ಸಂಸ್ಥೆಯಿಂದ ಪಡೆದಿರಬೇಕು.

ಗ್ರೂಪ್ 'ಡಿ' ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 10ನೇ ತರಗತಿ ಪಾಸ್ + ಎನ್‌ಎಸಿ ಗ್ರಾಂಟೆಡ್ ಬೈ ಎನ್‌ಸಿವಿಟಿ ಅಥವ 10ನೇ ತರಗತಿ +ಐಟಿಐಯನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಪೂರ್ಣಗೊಳಿಸಿರಬೇಕು.
ವಯೋಮಿತಿ ವಿವರಗಳು : ಗ್ರೂಪ್ 'ಸಿ' ಹುದ್ದೆಗೆ ಯುಆರ್ 18 ರಿಂದ 30 ವರ್ಷ. ಓಬಿಸಿ 18 ರಿಂದ 33 ವರ್ಷ, ಎಸ್‌ಸಿ/ಎಸ್‌ಟಿ 18 ರಿಂದ 35 ವರ್ಷಗಳು. ಗ್ರೂಪ್ 'ಡಿ' ಹುದ್ದೆ ಯುಆರ್ 18 ರಿಂದ 33 ವರ್ಷ, ಓಬಿಸಿ 18ರಿಂದ 36 ವರ್ಷ, ಎಸ್‌ಸಿ/ಎಸ್‌ಟಿ 18 ರಿಂದ 38 ವರ್ಷಗಳು. (ಜನವರಿ 1, 2019ಕ್ಕೆ ಅನ್ವಯ).
ವೇತನ ಶ್ರೇಣಿ : 5200-20200 ಪ್ರತಿ ತಿಂಗಳು.
ಅರ್ಜಿ ಶುಲ್ಕ : ಎಸ್‌ಸಿ/ಎಸ್‌ಟಿ/ಮಹಿಳೆ/ಆರ್ಥಿಕವಾಗಿ ಹಿಂದುಳಿದ ವರ್ಗದವರಿಗೆ 250 ರೂ.ಗಳು. ಇತರ ಅಭ್ಯರ್ಥಿಗಳಿಗೆ 500 ರೂ.ಗಳು. ಲಿಖಿತ ಪರೀಕ್ಷೆಗಳ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ











Click it and Unblock the Notifications