NMPT Recruitment 2023: ಬಂದರಿನಲ್ಲಿನ ಈ ಸರ್ಕಾರಿ ಖಾಲಿ ಹುದ್ದೆಗೆ ಇಂದೆ ಅರ್ಜಿ ಸಲ್ಲಿಸಿ, ಹೇಗೆ ತಿಳಿಯಿರಿ

ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ತನ್ನಲ್ಲಿ ಖಾಲಿ ಇರುವ ಡೆಪ್ಯೂಟಿ ಚೀಫ್ ಅಕೌಂಟ್ಸ್ ಆಫೀಸರ್ ಹುದ್ದೆಗಳ ಭರ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಹೇಗೆ, ಹುದ್ದೆಗಳ ಮಾಹಿತಿ ಇಲ್ಲಿ ತಿಳಿಯಿರಿ.

ಬೆಂಗಳೂರು, ಮಾರ್ಚ್ 21: ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ತನ್ನಲ್ಲಿ ಖಾಲಿ ಇರುವ ಡೆಪ್ಯೂಟಿ ಚೀಫ್ ಅಕೌಂಟ್ಸ್ ಆಫೀಸರ್ ಹುದ್ದೆಗಳ ಭರ್ತಿಗಾಗಿ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳಿಗೆ ಸರ್ಕಾರಿ ಉದ್ಯೊಗ ಮಾಡಲು ಬಯಸುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಈ ಅವಕಾಶವನ್ನು ಬಳಸಿಕೊಳ್ಳಬಹುದು. ಆಸಕ್ತರು ಇದೇ ಮಾರ್ಚ್ 31 ರೊಳಗೆ ಆಫ್‌ಲೈನ್‌ ಮೂಲಕ ಅರ್ಜಿ ಹಾಕಬಹುದು. ಈ ಹುದ್ದೆಗೆ ಸಂಬಂಧಪಟ್ಟ ವಿದ್ಯಾರ್ಹತೆ, ವಯೋಮಿತಿ ಹಾಗೂ ಅರ್ಜಿ ಕಳಿಸುವ ವಿಳಾಸ ಸೇರಿದಂತೆ ಹೆಚ್ಚಿನ ಮಾಹಿತಿ ಇಲ್ಲಿದೆ.

NMPT Recruitment 2023: NMPT Invited applications for Deputy Chief Accounts Officer posts

ಹುದ್ದೆಗಳ ವಿವರ ಹೀಗಿದೆ

ನ್ಯೂ ಮಂಗಳೂರು ಪೋರ್ಟ್ ಟ್ರಸ್ಟ್ ( NMPT )ನಲ್ಲಿ ಒಂದು ಡೆಪ್ಯೂಟಿ ಚೀಫ್ ಅಕೌಂಟ್ಸ್ ಆಫೀಸರ್ ಹುದ್ದೆ ಖಾಲಿ ಇದೆ. ಮಂಗಳೂರು ಕರ್ನಾಟಕದಲ್ಲಿಯೇ ಪೋಸ್ಟಿಂಗ್ ಕೊಡಲಾಗುವುದು. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ ವೇತನ 13000-18250 ರೂಪಾಯಿವರೆಗೆ ನಿಗದಿ ಮಾಡಲಾಗಿದೆ.

ಶೈಕ್ಷಣಿಕ ಅರ್ಹತೆ: ಶೈಕ್ಷಣಿಕ ಅರ್ಹತೆ ನೋಡುವುದಾದರೆ ಅಭ್ಯರ್ಥಿಗಳು ಸಿಎ ಇಲ್ಲವೇ ICWA ಮಾಡಿರುವುದು ಕಡ್ಡಯಾವಿದೆ. ಇನ್ನೂ ವಯೋಮಿತಿ ಗರಿಷ್ಠ 40 ವರ್ಷ ನಿಗದಿ ಮಾಡಲಾಗಿದೆ. ಆಫ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮಾರ್ಚ್ 31 ಎಂದು ಸಂಸ್ಥೆಯ ಅಧಿಸೂಚನೆ ತಿಳಿಸಿದೆ.

NMPT Recruitment 2023: NMPT Invited applications for Deputy Chief Accounts Officer posts

ಆಯ್ಕೆ ಪ್ರಕ್ರಿಯೆ ಹೇಗಿರಲಿದೆ?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಸಲಾಗುವುದು. ಅದರಲ್ಲಿ ಆಯ್ಕೆಯಾಗುವವರಿಗೆ ಸಂದರ್ಶನ ನಡೆಸಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಇನ್ನೂ ಅರ್ಜಿ ಸಲ್ಲಿಸುವವರು ಸ್ವಯಂ-ದೃಢೀಕರಿಸಿದ ದಾಖಲೆಗಳೊಂದಿಗೆ FA & CAO, ಹೊಸ ಮಂಗಳೂರು ಬಂದರು ಪ್ರಾಧಿಕಾರ, ಪಣಂಬೂರು, ಮಂಗಳೂರು-575010 ಈ ವಿಳಾಸಕ್ಕೆ ಕಳುಹಿಸಬೇಕು.

ಹೆಚ್ಚಿನ ಮಾಹಿತಿಗೆ ಅಧಿಕೃತ ವೆಬ್‌ಸೈಟ್‌ಗೆ https://newmangaloreport.gov.in/ ಗೆ ಭೇಟಿ ನೀಡಬಹುದು. ಅಲ್ಲದೇ ಅರ್ಜಿ, ಅಧಿಸೂಚನೆಗಾಗಿಯೂ ನೀವು ವೆಬ್‌ಸೈಟ್‌ಗೆ ಭೇಟಿ ನೀಡಿ ಮಾಹಿತಿ ತಿಳಿಯಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+