NIT Karnataka Jobs: ಅನೇಕ ವಿದ್ಯಾರ್ಥಿ ಇಂಟರ್ನಶಿಪ್ ಹುದ್ದೆ ಖಾಲಿ ಇವೆ, ಈಗಲೇ ಅರ್ಜಿ ಹಾಕಿ

ಬೆಂಗಳೂರು, ಮೇ 23: ಕರ್ನಾಟಕದ ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯು (NIT) ಖಾಲಿ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಈ ಸಲುವಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸಂಸ್ಥೆಯಲ್ಲಿ ಹಲವು ವಿದ್ಯಾರ್ಥಿ ಇಂಟರ್ನ್​ಶಿಪ್​ ಹುದ್ದೆಗಳು ಖಾಲಿ ಇವೆ. ಆಸಕ್ತರು ಅರ್ಜಿ ಸಲ್ಲಿಸಲು ಮೇ 30ರ ದಿನಾಂಕ ನಿಗದಿ ಮಾಡಲಾಗಿದೆ. ಈ ಕೂಡಲೇ ರೆಸ್ಯೂಮ್ ಕಳುಹಿಸುವಂತೆ ಕೋರಲಾಗಿದೆ. ಆಯ್ಕೆ ಆಗುವವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ ನಲ್ಲಿ ಉದ್ಯೋಗ ನೀಡಲಾಗುವುದು.

NIT Karnataka Recruitment Apply So Much Students Internship

ಅರ್ಜಿ ಸಲ್ಲಿಸುವ ಮೊದಲು ಉದ್ಯೋಗ ನೇಮಕಾತಿಯ ಪೂರ್ಣ ಮಾಹಿತಿ ಇಲ್ಲಿದೆ.

ನೇಮಕಾತಿ ಪ್ರಕ್ರಿಯೆ ಮಾಹಿತಿ

ಸಂಸ್ಥೆ ಹೆಸರು: ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ

ಹುದ್ದೆ ಹೆಸರು: ಸ್ಟೂಡೆಂಟ್ ಇಂಟರ್ನ್​ಶಿಪ್

ಮಾಸಿಕ ವೇತನ: 5,000 ರೂಪಾಯಿ.

ಪೋಸ್ಟಿಂಗ್: ಸುರತ್ಕಲ್

ಅರ್ಜಿ ಸಲ್ಲಿಕೆ ಕೊನೆ ದಿನಾಂಕ: ಮೇ 30.

ವಿದ್ಯಾರ್ಹತೆ ವಿವರ

ಅರ್ಜಿ ಸಲ್ಲಿಸಲು ಇಷ್ಟಪಡುವ ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಸಿವಿಲ್/ ಕೆಮಿಕಲ್/ಇಂಡಸ್ಟ್ರಿಯಲ್ ಬಯೋಟೆಕ್ನಾಲಜಿ/ ಎನ್ವಿರಾನ್​ಮೆಂಟಲ್​ ಸೈನ್ಸ್​ & ಟೆಕ್ನಾಲಜಿಯಲ್ಲಿ ಎಂಇ ಬಯೋಟೆಕ್ನಾಲಜಿಯಲ್ಲಿ ಬಿಇ/ಬಿ.ಟೆಕ್, ಎನ್ವಿರಾನ್​ಮೆಂಟಲ್ ಎಂಜಿನಿಯರಿಂಗ್/ಕೆಮಿಕಲ್ ಎಂಜಿನಿಯರಿಂಗ್​//ಎಂ.ಟೆಕ್ ಪದವಿಯನ್ನು ಕಡ್ಡಾಯವಾಗಿ ಪಡೆದಿರಬೇಕು ಎಂದು ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ಹೇಳಿದೆ.

NIT Karnataka Recruitment Apply So Much Students Internship

ವಯಸ್ಸಿನ ಮಿತಿ

ನೇಮಕಾತಿ ಬಯಸುವ ಅಭ್ಯರ್ಥಿಗಳ ವಯಸ್ಸು ಗರಿಷ್ಠ 25 ವರ್ಷ ಮೀರಿರಬಾರದು. ಜಾತಿ ಮೀಸಲಾತಿ ಅನುಗುಣವಾಗಿ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುವುದು ಎಂದು ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನೇಮಕಾತಿ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಆಯ್ಕೆ ಪ್ರಕ್ರಿಯೆ ಏನು?

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಂಸ್ಥೆಯು ಮೊದಲು ಲಿಖಿತ ಪರೀಕ್ಷೆ ನಡೆಸಲಾಗುವುದು. ಅಲ್ಲಿ ಶಾರ್ಟ್‌ ಲಿಸ್ಟ್ ಆದವರಿಗೆ ಮತ್ತೆ ಸಂದರ್ಶನ ನಡೆಸಿ ಆಯ್ಕೆ ಮಾಡಲಾಗುವುದು. ಅರ್ಹರನ್ನು ಆಯ್ಕೆ ಮಾಡಿ ಸುರತ್ಕಲ್ ನಲ್ಲಿ ಮಾಸಿಕ 5,000 ರೂಪಾಯಿ ನೀಡಲಾಗುವುದು ಎಂದು ಎನ್‌ಐಟಿ ಮಾಹಿತಿ ನೀಡಿದೆ.

ಅರ್ಜಿ ಸಲ್ಲಿಕೆ ಹೇಗೆ?

ಅಭ್ಯರ್ಥಿಗಳು ಸೂಕ್ತ ದಾಖಲೆಗಳ ಸಹಿತ ಭರ್ತಿ ಮಾಡಿದ ಅರ್ಜಿ ನಮೂನೆ/ ರೆಸ್ಯೂಮ್ ಅನ್ನು ಮೇ 30ರೊಳಗೆ ಇಲ್ಲಿ ಇಮೇಲ್ [email protected] ಗೆ ಕಳುಹಿಸುವಂತೆ ಕೋರಿಲಾಗಿದೆ.

ನೆನಪಿಡಬೇಕಾದ ದಿನಗಳು

ಅರ್ಜಿ ಸಲ್ಲಿಕೆ ಆರಂಭ ದಿನ: ಮೇ 17

ಅರ್ಜಿ ಸಲ್ಲಿಸಲು ಕೊನೆಯ ದಿನ: ಮೇ 30

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+