NIT Karnataka Recruitment 2023: ಖಾಲಿ ಹುದ್ದೆಗೆ ಅರ್ಜಿ ಸಲ್ಲಿಕೆಗೆ ಸೆ.18 ಕೊನೆ ದಿನ

ಮಂಗಳೂರು, ಸೆಪ್ಟಂಬರ್ 17: ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (NIT Karnataka) ತನ್ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿಗಾಗಿ ಅರ್ಹರಿಂದ ಅರ್ಜಿಳನ್ನು ಆಹ್ವಾನಿಸಿದೆ. ಸೂರತ್ಕಲ್‌ನಲ್ಲಿ ಉದ್ಯೋಗ ಬಯಸುವವರಿಗೆ ಇದೊಂದು ಉತ್ತಮ ಅವಕಾಶವಾಗಿದೆ.

ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕದಲ್ಲಿ ಒಂದು ಜೂನಿಯರ್ ರಿಸರ್ಚ್​ ಫೆಲೋ ಹುದ್ದೆ ಖಾಲಿ ಇದೆ. ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಹಾಕಲು ಸೆಪ್ಟೆಂಬರ್ 18 ಕೊನೆ ದಿನವಿದೆ. ಈ ಉದ್ಯೋಗವಕಾಶದ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ತಿಳಿಸಿದೆ. ಅರ್ಜಿ ಸಲ್ಲಿಸುವವರು ಇಲ್ಲಿ ನೇಮಕಾತಿಯ ಪೂರ್ಣ ಮಾಹಿತಿ ತಿಳಿಯಿರಿ.

NIT Karnataka Recruitment 2023: NIT Invite Application For Empty Post By Eligible

ನೇಮಕಾತಿ ಪ್ರಕ್ರಿಯೆ ಮಾಹಿತಿ

ಸಂಸ್ಥೆ ಹೆಸರು: ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟ

ಹುದ್ದೆ ಹೆಸರು: ಜೂನಿಯರ್ ರಿಸರ್ಚ್​ ಫೆಲೋ

ಖಾಲಿ ಹುದ್ದೆ: 1

ಮಾಸಿಕ ವೇತನ : 31,000 ರೂಪಾಯಿ

ಉದ್ಯೋಗದ ಸ್ಥಳ: ಸುರತ್ಕಲ್

ಶೈಕ್ಷಣಿಕ ಅರ್ಹತೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ ಅಥವಾ ಮಂಡಳಿಯಿಂದ ಕಡ್ಡಾಯವಾಗಿ ಸಿವಿಲ್ ಎಂಜಿನಿಯರಿಂಗ್​ನಲ್ಲಿ ಬಿಇ/ಬಿ.ಟೆಕ್ , ಗಿಯೋಟೆಕ್ನಿಕಲ್ ಎಂಜಿನಿಯರಿಂಗ್​​ನಲ್ಲಿ ಎಂಇ/ಎಂ.ಟೆಕ್ ಪೂರ್ಣಗೊಳಿಸಿರಬೇಕು ಎಂದು ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ತಿಳಿಸಿದೆ.

ಅಲ್ಲದೇ ಅಭ್ಯರ್ಥಿಗಳು ಮಣ್ಣಿನ ಬಲವರ್ಧನೆ/ಜಿಯೋಟೆಕ್ನಿಕಲ್ ಸಾಫ್ಟ್‌ವೇರ್/ಜಿಐಎಸ್ ಕ್ಷೇತ್ರದಲ್ಲಿ ಅನುಭವ ಹೊಂದಿರುವುದು ಕಡ್ಡಾಯ ಎಂದು ಹೇಳಿದೆ.

NIT Karnataka Recruitment 2023: NIT Invite Application For Empty Post By Eligible

ವಯೋಮಿತಿ ಮತ್ತು ವೇತನ

ಉದ್ಯೋಗ ಆಸಕ್ತ ಅಭ್ಯರ್ಥಿಗಳ ವಯಸ್ಸು ಗರಿಷ್ಠ 32 ವರ್ಷ ಮೀರಿರಬಾರದು. ಇನ್ನು ಮಾಸಿಕವಾಗಿ 31,000 ರೂಪಾಯಿ ವೇತನ ನೀಡಲಾಗುವುದು ಎಂದು ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನೇಮಕಾತಿ ಅಧಿಸೂಚನೆ ತಿಳಿಸಿದೆ.

ಆಯ್ಕೆ ಹೇಗಿರಲಿದೆ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಯಲಿದೆ. ನಂತರ ಸಂದರ್ಶನ ನಡೆಯಲಿದೆ. ಅಭ್ಯರ್ಥಿಗಳು ಅರ್ಜಿಗಳನ್ನು ಸೂಕ್ತ ದಾಖಲೆಗಳ ಸಹಿತ 'ಡಾ. ಶ್ರೀವಲ್ಸ ಕೊಳತಯಾರ್, ಸಿವಿಲ್ ಇಂಜಿನಿಯರಿಂಗ್ ವಿಭಾಗ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ, ಸುರತ್ಕಲ್, ಮಂಗಳೂರು - 575025 ಇಲ್ಲಿಗೆ ಕಳುಹಿಸುಂತೆ ತಿಳಿಸಲಾಗಿದೆ.

ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ 9471192250 ಗೆ ಸಂಪರ್ಕಿಸಬೇಕು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+