NIT Karnataka Jobs 2023: ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆ ಖಾಲಿ, ಅರ್ಹತೆ, ವೇತನ, ಅರ್ಜಿ ಸಲ್ಲಿಕೆ ವಿವರ

ಬೆಂಗಳೂರು, ಆಗಸ್ಟ್ 06: ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (NIT Karnataka) ತನ್ನಲ್ಲಿ ಖಾಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡುವ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಸಂಸ್ಥೆ ಅರ್ಜಿಗಳನ್ನು ಆಹ್ವಾನಿಸಿದೆ.

ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ (NIT Karnataka) ಸಂಸ್ಥೆಯಲ್ಲಿ ಒಟ್ಟು ಒಂದು ಪ್ರಾಜೆಕ್ಟ್ ಅಸೋಸಿಯೇಟ್ ಹುದ್ದೆ ಖಾಲಿ ಇದೆ. ಈ ಸಂಬಂಧ ಯಾರು ಬೇಕಾದರೂ ಇದೇ ಆಗಸ್ಟ್​ 16 ರೊಳಗೆ ಅರ್ಜಿ ಹಾಕಬಹುದಾಗಿದೆ. ಇ-ಮೇಲ್ ಮೂಲಕ ಅರ್ಜಿ ಹಾಕಲು ಅವಕಶ ಕಲ್ಪಿಸಲಾಗಿದೆ. ಆಯ್ಕೆಯಾಗುವವರಿಗೆ ಸುರತ್ಕಲ್​​ನಲ್ಲಿ ಪೋಸ್ಟ್ ನೀಡಲಾಗುವುದು. ಈ ಸದಾವಕಶವನ್ನು ಆಸಕ್ತರು ಉಪಯೋಗಿಸಬಹುದು.

NIT Karnataka Recruitment 2023: Invite Application Project Associate Post, Details Inside

ಅರ್ಜಿ ಸಲ್ಲಿಸುವವರು ಮೊದಲು ಖಾಲಿ ಹುದ್ದೆಗಳ ಪೂರ್ಣ ಮಾಹಿತಿ, ವೇತನ, ವಯೋಮಿತಿ, ಇನ್ನಿತರ ಅಂಶಗಳ ಮಾಹಿತಿ ಇಲ್ಲಿ ತಿಳಿಯಿರಿ.

ನೇಮಕಾತಿ ಪೂರ್ಣ ವಿವರ

ಒಟ್ಟು ಖಾಲಿ ಹುದ್ದೆ - 01

ಹುದ್ದೆ ಹೆಸರು - ಪ್ರಾಜೆಕ್ಟ್ ಅಸೋಸಿಯೇಟ್

ಪೋಸ್ಟಿಂಗ್ - ಸುರತ್ಕಲ್

ಮಾಸಿಕ ವೇತನ - ₹28,000

ಅರ್ಜಿ ಸಲ್ಲಿಕೆ ಕಡೆ ದಿನ - ಆಗಸ್ಟ್​ 16

ಶೈಕ್ಷಣಿಕ ಅರ್ಹತೆ ಏನು?

ಅರ್ಜಿ ಸಲ್ಲಿಸಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ಮಂಡಲಿ ಅಥವಾ ವಿಶ್ವವಿದ್ಯಾಲಯದಿಂದ ಕಡ್ಡಾಯವಾಗಿ ಎಂ.ಎಸ್ಸಿ, ಎಂಇ ಅಥವಾ ಎಂ.ಟೆಕ್, ಎಂಎಸ್ ಉತ್ತೀಣಗೊಳಿಸಿರಬೇಕು ಎಂದು ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನೇಮಕಾತಿ ಅಧಿಸೂಚನೆ ತಿಳಿಸಿದೆ.

NIT Karnataka Recruitment 2023: Invite Application Project Associate Post, Details Inside

ವೇತನ- ವಯಸ್ಸಿನ ಮಿತಿ

ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗೆ ಮಾಸಿಕ ಮಾಸಿಕ 28,000 ರೂಪಾಯಿ ನಿಗದಿ ಮಾಡಲಾಗಿದೆ. ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯಸ್ಸು ನಿಯಮಾನುಸಾರ ಇರಬೇಕು. ಜಾತಿ ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ನೀಡಲಾಗುವುದು ಎಂದು ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಕರ್ನಾಟಕ ನೇಮಕಾತಿ ಅಧಿಸೂಚನೆ ಮಾಹಿತಿ ನೀಡಿದೆ.

ಇನ್ನೂ ಆಯ್ಕೆ ಪ್ರಕ್ರಿಯೆ ನೋಡುವುದಾದರೆ, ಅರ್ಜಿ ಸಲ್ಲಿದವರಿಗೆ ಲಿಖಿತ ಪರೀಕ್ಷೆ ನಡೆಯಲಿದೆ. ಅಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಸಂದರ್ಶನ ನಡೆಸಲಾಗುವುದು.

ಆಸಕ್ತರು ದಾಖಲಾತಿಗಳ ಸಮೇತ ಭರ್ತಿ ಮಾಡಿದ ಅರ್ಜಿ ನಮೂನೆಯನ್ನು ಇ-ಮೇಲ್ [email protected] ಗೆ ಆಗಸ್ಟ್ 16 ರೊಳಗೆ ಕಳುಹಿಸಬೇಕು ಎಂದು ಅಧಿಸೂಚನೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+