ಪಿಯುಸಿ, ಪದವಿ ಪಡೆದವರಿಗೆ ಎನ್‌ಐಆರ್‌ಟಿಎಚ್‌ನಲ್ಲಿ ಕೆಲಸವಿದೆ
ಬೆಂಗಳೂರು, ಜುಲೈ 11 : ಎನ್‌ಐಆರ್‌ಟಿಎಚ್ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಆಸಕ್ತ ಅಭ್ಯರ್ಥಿಗಳು 10 ಆಗಸ್ಟ್ 2018ರೊಳಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ನ್ಯಾಷನಲ್ ಇನ್ಸಿಟಿಟ್ಯೂಟ್ ಫಾರ್ ರಿಸರ್ಚ್ ಇನ್ ಟ್ರೈಬಲ್ ಹೆಲ್ತ್ 22 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಲೋವರ್ ಡಿವಿಷನ್ ಕ್ಲರ್ಕ್, ಟೆಕ್ನಿಕಲ್ ಅಸಿಸ್ಟೆಂಟ್, ಕಾರು ಚಾಲಕ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲಾಗುತ್ತಿದೆ.
ಲೋವರ್ ಡಿವಿಷನ್ ಕ್ಲರ್ಕ್ 3, ಟೆಕ್ನಿಕಲ್ ಅಸಿಸ್ಟೆಂಟ್ 3, ಸ್ಟಾಫ್ ಕಾರು ಚಾಲಕ 4 ಹುದ್ದೆಗಳಿವೆ. ಆಯ್ಕೆಯಾದ ಅಭ್ಯರ್ಥಿಗಳು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು. ಆಗಸ್ಟ್ 10 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ.

ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು 12ನೇ ತರಗತಿಯನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಉತ್ತೀರ್ಣರಾಗಿರಬೇಕು. ನಿಮಿಷಕ್ಕೆ 35 ಪದ ಇಂಗ್ಲಿಷ್ ಅಥವ 30 ಹಿಂದಿ ಪದಗಳನ್ನು ಟಪ್ ಮಾಡುವ ಅರ್ಹತೆ ಹೊಂದಿರಬೇಕು.
ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕಂಪ್ಯೂಟರ್ ಸೈನ್ಸ್‌ನಲ್ಲಿ ಪದವಿಯನ್ನು ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿರಬೇಕು. ಮಾನ್ಯತೆ ಪಡೆದ ಸಂಸ್ಥೆಯಿಂದ ಪದವಿ ಪಡೆದಿರಬೇಕು.
ವಿವಿಧ ಹುದ್ದೆಗಳಿಗೆ ಅರ್ಜಿ ಕರೆದ ಕೊಂಕಣ ರೈಲ್ವೆ
ಕಾರು ಚಾಲಕ ಹುದ್ದೆಗೆ ಅರ್ಜಿ ಸಲ್ಲಿಸುವವರು ಮ್ಯಾಟ್ರಿಕ್ಸ್, ಎಸ್‌ಎಸ್‌ಸಿ ಅಥವ ತತ್ಸಮಾನ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಸಂಸ್ಥೆಯಿಂದ ಪೂರ್ಣಗೊಳಿಸಿರಬೇಕು. ಚಾಲನಾ ಪರವಾನಿಗೆಯನ್ನು ಹೊಂದಿರಬೇಕು.
ವಯೋಮಿತಿ
* ಲೋವರ್ ಡಿವಿಷನ್ ಕ್ಲರ್ಕ್ ಹುದ್ದೆಗೆ 18 ರಿಂದ 27 ವರ್ಷ
* ಟೆಕ್ನಿಕಲ್ ಅಸಿಸ್ಟೆಂಟ್ ಹುದ್ದೆಗೆ 30 ವರ್ಷ
* ಕಾರು ಚಾಲಕ ಹುದ್ದೆಗೆ 25 ವರ್ಷಗಳ ವಯೋಮಿತಿ ನಿಗದಿ ಮಾಡಲಾಗಿದೆ 10 ಆಗಸ್ಟ್ 2018ಕ್ಕೆ ಅನ್ವಯವಾಗುವಂತೆ.
ಒಬಿಸಿ ವಿದ್ಯಾರ್ಥಿಗಳಿಗೆ 100 ರೂ.,ಎಸ್‌ಸಿ/ಎಸ್‌ಟಿ/ಅಂಗವಿಕಲ/ಮಹಿಳಾ ಅಭ್ಯರ್ಥಿಗಳಿಗೆ ಯಾವುದೇ ಶುಲ್ಕ ವಿರುವುದಿಲ್ಲ. ಲಿಖಿತ ಪರೀಕ್ಷೆ, ಕಂಪ್ಯೂಟರ್ ಸ್ಕಿಲ್ ಆಧಾರದ ಮೇಲೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ.
ವೇತನ ಶ್ರೇಣಿ : ಲೋವರ್ ಡಿವಿಷನ್ ಕ್ಲರ್ಕ್/ಕಾರು ಚಾಲಕ 19,900 ರಿಂದ 63,200 ರೂ. ಪ್ರತಿ ತಿಂಗಳು. ಟೆಕ್ನಿಕಲ್ ಅಸಿಸ್ಟೆಂಟ್ 35,400 ರಿಂದ 1,12,400 ರೂ.ಗಳು.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications