NIMHANS Jobs 2023: ತಿಂಗಳಿಗೆ 1 ಲಕ್ಷ ರೂ. ಸಂಬಳ, ಉದ್ಯೋಗ, ಅರ್ಜಿ ಸಲ್ಲಿಕೆ ವಿವರ

ಬೆಂಗಳೂರು, ಅಕ್ಟೋಬರ್ 03: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆ (NIMHANS) ತನ್ನಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆ ಆರಂಭಿಸಿದೆ. ಈ ಸಂಬಂಧ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆ (NIMHANS) ಯಲ್ಲಿ ಸೀನಿಯರ್ ರೆಸಿಡಂಟ್​ ಕಮ್ಯುನಿಟಿ ಮೆಡಿಸಿನ್ (SRCM) ಒಂದು ಹುದ್ದೆ ಖಾಲಿ ಇದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಈ ಕೂಡಲೇ ಅರ್ಜಿ ಸಲ್ಲಿಸಬೇಕು. ಅಭ್ಯರ್ಥಿ ಆಯ್ಕೆಗಾಗಿ ನೇರ ಸಂದರ್ಶನವನ್ನು ಅಕ್ಟೋಬರ್ 07ರಂದು ನಡೆಸಲಾಗುವುದು ಎಂದು ನಿಮ್ಹಾನ್ಸ್ ತಿಳಿಸಿದೆ.

NIMHANS Recuitment 2023: Nimhans Will Appoints Eligible Candidate For Empty Post

ನೇಮಕಾತಿ ಪೂರ್ಣ ವಿಳಾಸ

ಸಂಸ್ಥೆ ಹೆಸರು: ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರರೋಗ ವಿಜ್ಞಾನ ಸಂಸ್ಥೆ (NIMHANS)

ಹುದ್ದೆ ಸಂಖ್ಯೆ: 01

ಹುದ್ದೆ ಹೆಸರು: ಸೀನಿಯರ್ ರೆಸಿಡಂಟ್​ ಕಮ್ಯುನಿಟಿ ಮೆಡಿಸಿನ್

ಪೋಸ್ಟಿಂಗ್: ಬೆಂಗಳೂರು

ಮಾಸಿಕ ವೇತನ: 1ಲಕ್ಷ ರೂ.

ಶೈಕ್ಷಣಿಕ ಅರ್ಹತೆ: MBBS, MD ಉತ್ತೀರ್ಣ

ವಿದ್ಯಾರ್ಹತೆ

ಎಂಬಿಬಿಎಸ್, ಸಮುದಾಯ ವೈದ್ಯಕೀಯ / ಪ್ರಿವೆಂಟಿವ್ ಮತ್ತು ಸೋಶಿಯಲ್ ಮೆಡಿಸಿನ್‌ನಲ್ಲಿ ಎಂಡಿ ಪೂರ್ಣಗೊಳಿಸಿರಬೇಕು ಎಂದು ನಿಮ್ಹಾನ್ಸ್ ಅಧಿಕೃತ ಅಧಿಸೂಚನೆ ತಿಳಿಸಿದೆ.

NIMHANS Recuitment 2023: Nimhans Will Appoints Eligible Candidate For Empty Post

ಅನುಭವ ಕಡ್ಡಾಯ

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಸಮುದಾಯ ಆಧಾರಿತ ಯೋಜನೆಗಳನ್ನು ಅನುಷ್ಠಾನಗೊಳಿಸುವಲ್ಲಿ ಅನುಭವ ಹೊಂದಿರುವುದನ್ನು ಕಡ್ಡಾಯ ಮಾಡಲಾಗಿದೆ. ಇನ್ನೂ ಅಭ್ಯರ್ಥಿಗೆ ಗರಿಷ್ಠ ವಯಸ್ಸು 35 ವರ್ಷಗಳು ಮೀರಿರಬಾರದು. ನಿಯಮಾನುಸಾರ ಅಭ್ಯರ್ಥಿಗಳಿಗೆ ಸಡಿಲಿಕೆ ನೀಡಲಾಗುವುದು.

ಅಭ್ಯರ್ಥಿಗಳಿಗೆ ಮೊದಲು ಲಿಖಿತ ಪರೀಕ್ಷೆ ನಡೆಯಲಿದೆ. ಕೌಶಲ್ಯ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನ ಆಯ್ಕೆ ಮಾಡಲಾಗುವುದು ಎಂದು ನಿಮ್ಹಾನ್ಸ್ ತಿಳಿಸಿದೆ. ಅಕ್ಟೊಬರ್ 7ರಂದು ಬೆಂಗಳೂರಿನ ನಿಮ್ಹಾನ್ಸ್‌ ನಲ್ಲಿ ಸಂದರ್ಶಣ ನಡೆಯಲಿದೆ. ಹೆಚ್ಚಿನ ಮಾಹಿತಿಗೆ http://nimhans.ac.in/ ಅಧಿಕೃತ ಜಾಲತಾಣ ಇಲ್ಲಿಗೆ ಭೇಟಿ ನೀಡಬಹುದು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+