NIMHANS Recruitment 2022: ಖಾಲಿ ಇರುವ ಹುದ್ದೆಗಳ ಭರ್ತಿ ಅರ್ಜಿ ಆಹ್ವಾನ
ಬೆಂಗಳೂರು, ಡಿಸೆಂಬರ್ 20: ಬೆಂಗಳೂರಿನ 'ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ' (ನಿಮ್ಹಾನ್ಸ್)ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹರಿಂದ ಅರ್ಜಿ ಆಹ್ವಾನಿಸಲಾಗಿದೆ.
ನಿಮ್ಹಾನ್ಸ್ ನಲ್ಲಿ ಪ್ರಾಜೆಕ್ಟ್ ಅಸೋಸಿಯೇಟ್, ಮ್ಯಾನೇಜರ್ ವಿಭಾಗದಲ್ಲಿ ಒಟ್ಟು ಐದು ಹುದ್ದೆಗಳು ಖಾಲಿ ಇವೆ. ಅರ್ಹ ಆಸಕ್ತ ಅಭ್ಯರ್ಥಿಗಳು ಆನ್ಲೈನ್ ಮೂಲಕ ಡಿಸೆಂಬರ್ 31ರೊಳಗೆ ಅರ್ಜಿ ಸಲ್ಲಿಸಬೇಕು. ಬೆಂಗಳೂರಿನಲ್ಲಿ ಉದ್ಯೋಗ ಹುಡುಕುತ್ತಿರುವ ಅಭ್ಯರ್ಥಿಗಳಿಗೆ ಇದೊಂದು ಸುವರ್ಣ ಅವಕಾಶವಾಗಿದೆ.
ಅರ್ಜಿ ಹೇಗೆ ಸಲ್ಲಿಸಬೇಕು, ವಿದ್ಯಾರ್ಹತೆ ಏನು?, ಸಂಬಳ ಎಷ್ಟು, ವಯೋಮಿತಿ ಎಷ್ಟಿರಬೇಕು, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಎಂಬಿತ್ಯಾದಿ ಮಾಹಿತಿ ಕುರಿತು ಇಲ್ಲಿ ತಿಳಿದುಕೊಳ್ಳಬಹುದು.
ಪ್ರಾಜೆಕ್ಟ್ ಅಸೋಸಿಯೇಟ್ ಮತ್ತು ಮ್ಯಾನೇಜರ್ ವಿಭಾಗದಲ್ಲಿ ಖಾಲಿ ಇರುವ ಒಟ್ಟು 5 ಹುದ್ದೆಗಳ ನೇಮಕಾತಿ ನಡೆಯಲಿದೆ. ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಮಾಸಿಕ 25,000ದಿಂದ 31,000 ರೂಪಾಯಿ ವೇತನ ಇರಲಿದೆ.
ಹುದ್ದೆಯ ಮಾಹಿತಿ ಹೀಗಿದೆ
ಪ್ರಾಜೆಕ್ಟ್ ಅಸೋಸಿಯೇಟ್ - I (ಡಾ.ಜಿ.ಕೆ.ಚೇತನ್)-1
ಮ್ಯಾನೇಜರ್ ಮತ್ತು ಡಿಜಿಟಲ್ (ಟೆಕ್ನಿಕಲ್ ಆಫೀಸರ್)-1
ಪ್ರಾಜೆಕ್ಟ್ ಅಸೋಸಿಯೇಟ್- Iರಲ್ಲಿ 3 ಹುದ್ದೆ ಖಾಲಿ ಇವೆ.

ವಿದ್ಯಾರ್ಹತೆ ಏನು?
ಪ್ರಾಜೆಕ್ಟ್ ಅಸೋಸಿಯೇಟ್- I (ಡಾ.ಜಿ.ಕೆ.ಚೇತನ್)- ಸ್ನಾತಕೋತ್ತರ ಪದವಿ ಆಗಿರಬೇಕು.
ಮ್ಯಾನೇಜರ್ ಮತ್ತು ಡಿಜಿಟಲ್ (ಟೆಕ್ನಿಕಲ್ ಆಫೀಸರ್)- ಸ್ನಾತಕೋತ್ತರ ಪದವಿ ಆಗಿರಬೇಕು.
ಪ್ರಾಜೆಕ್ಟ್ ಅಸೋಸಿಯೇಟ್- I- ಸ್ನಾತಕೋತ್ತರ ಪದವಿ ಪಡೆದವರು ಅರ್ಜಿ ಸಲ್ಲಿಸಬಹುದು.
ವೇತನದ ಮಾಹಿತಿ
ಪ್ರಾಜೆಕ್ಟ್ ಅಸೋಸಿಯೇಟ್- I (ಡಾ.ಜಿ.ಕೆ.ಚೇತನ್)-ಮಾಸಿಕ 31,000 ರೂಪಾಯಿ.
ಮ್ಯಾನೇಜರ್ +ಡಿಜಿಟಲ್ (ಟೆಕ್ನಿಕಲ್ ಆಫೀಸರ್)- ಮಾಸಿಕ 30,000 ರೂಪಾಯಿ.
ಪ್ರಾಜೆಕ್ಟ್ ಅಸೋಸಿಯೇಟ್- I- ತಿಂಗಳಿಗೆ 25,000 ರಿಂದ 31,000 ರೂಪಾಯಿ ಇದೆ.
ವಯೋಮಿತಿ
ಅರ್ಜಿ ಸಲ್ಲಿಕೆಯ ಶುಲ್ಕದಲ್ಲಿ ವಿನಾಯಿತಿ ನೀಡಲಾಗಿದೆ. ರಾಷ್ಟ್ರೀಯ ಮಾನಸಿಕ ಆರೋಗ್ಯ ಹಾಗೂ ನರ ವಿಜ್ಞಾನ ಸಂಸ್ಥೆ ನೇಮಕಾತಿ ಅಧಿಸೂಚನೆ ಪ್ರಕಾರ, ಅಭ್ಯರ್ಥಿಗಳ ವಯಸ್ಸು ಗರಿಷ್ಠ 35 ವರ್ಷ ಮೀರಿರಬಾರದು. ಮೀಸಲಾತಿ ಅಭ್ಯರ್ಥಿಗಳಿಗೆ ವಯೋಮಿತಿಯಲ್ಲಿ ಸ್ವಲ್ಪ ಸಡಿಲಿಕೆ ನೀಡಲಾಗುವುದು ಎಂದು ಸಂಸ್ಥೆ ತಿಳಿಸಿದೆ. ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಲು ಮತ್ತು ಹೆಚ್ಚಿನ ಮಾಹಿತಿಗೆ ನಿಮ್ಹಾನ್ಸ್ ಸಂಸ್ಥೆಯ ಅಧಿಕೃತ ಜಾಲತಾಣ nimhans.ac.in ಗೆ ಭೇಟಿ ನೀಡಿ ಎಂದು ಪ್ರಕಟಣೆ ತಿಳಿಸಿದೆ.












Click it and Unblock the Notifications