ನಿಮ್ಹಾನ್ಸ್‌ನಲ್ಲಿ 30 ಹುದ್ದೆಗಳ ಭರ್ತಿಗೆ ವಾಕ್-ಇನ್-ಇಂಟರ್ ವ್ಯೂ
ಬೆಂಗಳೂರು, ಆಗಸ್ಟ್ 17 : ನಿಮ್ಹಾನ್ಸ್ 30 ವಿವಿಧ ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಸಕ್ತ ಅಭ್ಯರ್ಥಿಗಳು ಆಗಸ್ಟ್ 21ರಂದು ನಡೆಯುವ ವಾಕ್-ಇನ್-ಇಂಟರ್ ವ್ಯೂಗೆ ಹಾಜರಾಗುವಂತೆ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್) ಕೌನ್ಸಿಲರ್, ಸೂಪರ್ ವೈಸರ್ ಸೇರಿದಂತೆ ವಿವಿಧ ಹುದ್ದೆ ಭರ್ತಿ ಮಾಡುತ್ತಿದೆ. ವಾಕ್ ಇನ್ ಇಂಟರ್ ವ್ಯೂ, ಲಿಖಿತ ಪರೀಕ್ಷೆ ಆಗಸ್ಟ್ 21ರಂದು ನಡೆಯುತ್ತಿದೆ.
ಕೌನ್ಸಿಲರ್ ಹುದ್ದೆಗೆ ಸೈಕಾಲಜಿ, ಸೋಶಿಯಲ್ ವರ್ಕ್ ವಿಷಯದಲ್ಲಿ ಮಾನ್ಯತೆ ಪಡೆದ ವಿಶ್ವವಿದ್ಯಾಲಯಿಂದ ಪದವಿ ಪಡೆದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.

ಸೂಪರ್ ವೈಸರ್ ಹುದ್ದೆಗೆ ಪಬ್ಲಿಕ್ ಹೆಲ್ತ್, ಸೋಶಿಯಲ್ ಸೈನ್ಸ್, ಸೈಕಾಲಜಿ, ಸೋಶಿಯಲ್ ವರ್ಕ್, ಮ್ಯಾನೇಜ್‌ಮೆಂಟ್ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದವರು ಅರ್ಜಿಗಳನ್ನು ಸಲ್ಲಿಸಬಹುದಾಗಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ 38 ವರ್ಷದ ವಯೋಮಿತಿ ನಿಗದಿ ಮಾಡಲಾಗಿದೆ.
ವೇತನ ಶ್ರೇಣಿ : ಕೌನ್ಸಿಲರ್ ಹುದ್ದೆಗೆ 25000 ರೂ. ಪ್ರತಿ ತಿಂಗಳು, ಸೂಪರ್ ವೈಸರ್ ಹುದ್ದೆಗೆ 30000 ಪ್ರತಿ ತಿಂಗಳು.
ವಾಕ್ ಇನ್ ಇಂಟರ್ ವ್ಯೂ ದಿನಾಂಕ 21 ಆಗಸ್ಟ್ 2018. ಬೆಳಗ್ಗೆ 10 ಗಂಟೆಯಿಂದ
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications