NIA Jobs Recruitment: ಪ್ರಮುಖ ತನಿಖಾ ಸಂಸ್ಥೆಯಲ್ಲಿ ಭರ್ಜರಿ ಉದ್ಯೋಗ, ಉತ್ತಮ ವೇತನ
ಬೆಂಗಳೂರು, ಡಿಸೆಂಬರ್ 15: ದೇಶದ ಪ್ರಮುಖ ತನಿಖೆ ಸಂಸ್ಥೆಗಳಲ್ಲಿ ಕೆಲಸ ಮಾಡಲು ಇಚ್ಛಿಸುವ ಅರ್ಹ ಅಭ್ಯರ್ಥಿಗಳಿಗೆ ಇಲ್ಲೊಂದು ಸುವರ್ಣ ಅವಕಾಶ ಇದೆ. ರಾಷ್ಟ್ರೀಯ ತನಿಖಾ ಸಂಸ್ಥೆಯು (NIA) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ನೇಮಕಾತಿ ಪ್ರಕ್ರಿಯೆ ಆರಂಭಿಸಿದೆ. ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಕೂಡಲೇ ಅರ್ಜಿ ಸಲ್ಲಿಸಿ, ತನಿಖೆಯ ಸಂಸ್ಥೆಯಲ್ಲಿನ ಉದ್ಯೋಗ ಕನಸು ನನಸು ಮಾಡಿಕೊಳ್ಳಬಹುದು.
ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯಲ್ಲಿ ಒಟ್ಟು 33 ಹುದ್ದೆಗಳ ನೇಮಕಾತಿ ನಡೆಯುತ್ತಿದೆ. ಡಾಟಾ ಎಂಟ್ರಿ ಆಪರೇಟರ್ (DEO) ಹುದ್ದೆಗಳಿಗೆ ಆಸಕ್ತರಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಆಸಕ್ತರು ಮುಂದಿನ ವರ್ಷ 8 ಫೆಬ್ರವರಿ 2025 ರ ಒಳಗಾಗಿ ಸೂಕ್ತ ದಾಖಲಾತಿಗಳ ಮೂಲಕ ಅರ್ಜಿ ಸಲ್ಲಿಸಬೇಕು. ಹೆಚ್ಚಿನ ಮಾಹಿತಿ, ಮಾಸಿಕ ವೇತನ, ವೆಬ್‌ಸೈಟ್ ಲಿಂಕ್ ಮುಂತಾದ ನೇಮಕಾತಿ ಸಂಬಂಧಿ ಮಾಹಿತಿಗಳು ಇಲ್ಲಿವೆ.

ನೇಮಕಾತಿ ಪೂರ್ಣ ಮಾಹಿತಿ ಇಲ್ಲಿದೆ
ನೇಮಕಾತಿ ಸಂಸ್ಥೆ: ರಾಷ್ಟ್ರೀಯ ತನಿಖಾ ಸಂಸ್ಥೆ (NIA)
ಹುದ್ದೆ ಹೆಸರು: ಡಾಟಾ ಎಂಟ್ರಿ ಆಪರೇಟರ್ (DEO)
ಹುದ್ದೆ ಎಷ್ಟು: 33
ಗರಿಷ್ಠ ವಯಸ್ಸು: 56
ಮಾಸಿಕ ವೇತನ: ನಿಯಮಾನುಸಾರ
ಅರ್ಜಿ ಸಲ್ಲಿಕೆ ಕೊನೆ ದಿನ: ಫೆಬ್ರವರಿ 8
ಅರ್ಜಿ ಸಲ್ಲಿಕೆ ವಿಧಾನ: ಆಫ್‌ಲೈನ್
ವಿದ್ಯಾರ್ಹತೆ ಏನಿರಬೇಕು?
ರಾಷ್ಟ್ರೀಯ ತನಿಖಾ ಸಂಸ್ಥೆ (NIA)ಯ ಅಧಿಸೂಚನೆ ತಿಳಿಸಿರುವಂತಹ ಎಲ್ಲ ಶೈಕ್ಷಣಿಕ ಅರ್ಹತೆ ಹೊಂದಿದವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಹೆಚ್ಚಿನ ಮಾಹಿತಿಗೆ ಒಮ್ಮೆ ನೇಮಕಾತಿ ಅಧಿಸೂಚನೆ ಪರಿಶೀಲಿಸಬೇಕು.
ಮಾಸಿಕ ವೇತನ ವಿವರ
ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಹುದ್ದೆಗಳ ನೇಮಕಾತಿಯಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ನವದೆಹಲಿಯಲ್ಲಿ ಪೋಸ್ಟಿಂಗ್ ನೀಡುವ ಜೊತೆಗೆ ಕೈ ತುಂಬ ಸಂಬಳ ಇರಲಿದೆ. ಆಯ್ಕೆಆದವರಿಗೆ ಕನಿಷ್ಠ 29,200 ರೂ.ನಿಂದ 92,300 ರೂಪಾಯಿ ವರೆಗೆ ವೇತನ ನಿಗದಿ ಮಾಡಲಾಗಿದೆ. ಇದರೊಂದಿಗೆ ಕೇಂದ್ರ ಸರ್ಕಾರಿ ನೌಕರರಿಗೆ ಇರುವ ಎಲ್ಲ ತುಟ್ಟಿಭತ್ಯೆ, ಪಿಂಚಣಿ, ಟಪಿಟಿ, ಮನೆ ಬಾಡಿಗೆ ಭತ್ಯೆಗಳೆಲ್ಲವು ನೀಡಲಾಗುವುದು ಎಂದು ತಿಳಿಸಲಾಗಿದೆ.

ಅಭ್ಯರ್ಥಿಗಳ ವಯೋಮಿತಿ
ಎನ್‌ಐಎ ನೇಮಕಾತಿ ಅಧಿಸೂಚನೆ ಪ್ರಕಾರ, ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಗರಿಷ್ಠ ವಯಸ್ಸು 56 ವರ್ಷವೆಂದು ನಿಗದಿಪಡಿಸಲಾಗಿದೆ. ಅದಕ್ಕಿಂತ ಹೆಚ್ಚಿರುವವರು ಅರ್ಜಿ ಸಲ್ಲಿಸಲು ಸಾಧ್ಯವಿಲ್ಲ.
ಅರ್ಜಿ ಸಲ್ಲಿಕೆ ಹೇಗೆ?
ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಭರ್ತಿ ಮಾಡಬೇಕು. ಹೆಚ್ಚಿನ ಮಾಹಿತಿಗೆ, ಅಧಿಸೂಚನೆಗಾಗಿ ಅಧಿಕೃತ ವೆಬ್‌ಸೈಟ್ nia.gov.in ಗೆ ಭೇಟಿ ನೀಡಬೇಕು. ಸೂಕ್ತ ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಸೂಕ್ತ ದಾಖಲೆಗಳ ಸಹಿ ಭರ್ತಿ ಮಾಡಬೇಕು ದಾಖಲೆಗಳನ್ನು ಲಗತ್ತಿಸಿ ಮುಚ್ಚಿದ ಲಕೋಟೆಯಲ್ಲಿ ಮೊಹರು ಮಾಡಿ ಈ ಕೆಳಗಿನ ವಿಳಾಸಕ್ಕೆ ಕೊನೆಯ ದಿನಾಂಕದೊಳಗೆ ತಲುಪುವಂತೆ ಮಾಡಬೇಕು.
ಅರ್ಜಿಯನ್ನು ''ಎಸ್‌ಪಿ (ಆಡಳಿತ), NIA ಪ್ರಧಾನ ಕಛೇರಿ, CGO ಕಾಂಪ್ಲೆಕ್ಸ್, ಲೋಧಿ ರಸ್ತೆ, ನವದೆಹಲಿ - 110003' ಇಲ್ಲಿಗೆ ಅರ್ಜಿ ಸಲ್ಲಿಸಬೇಕು ಎಂದು ತಿಳಿಸಲಾಗಿದೆ.












Click it and Unblock the Notifications