NHPC ನೇಮಕಾತಿ 2020: 86 ಇಂಜಿನಿಯರ್ ಹುದ್ದೆಗಳಿವೆ
ನವದೆಹಲಿ, ಆ. 22: ನ್ಯಾಷನಲ್ ಹೈಡ್ರೋ ಪವರ್ ಕಾರ್ಪೊರೇಷನ್ ಲಿಮಿಟೆಡ್ (NHPC) 2020ನೇ ಸಾಲಿನ ನೇಮಕಾತಿಗಾಗಿ ಅಧಿಕೃತ ವೆಬ್ ತಾಣದಲ್ಲಿ ಪ್ರಕಟಣೆ ಹೊರಡಿಸಲಾಗಿದೆ. ಇಂಜಿನಿಯರ್ ಸೇರಿದಂತೆ ವಿವಿಧ ಹುದ್ದೆಗಳು ಖಾಲಿ ಇದ್ದು, ಅರ್ಹ ಆಸಕ್ತರು ಸೆಪ್ಟೆಂಬರ್ 28, 2020ರೊಳಗೆ ಅರ್ಜಿ ಸಲ್ಲಿಸಬಹುದಾಗಿದೆ.
ಸಂಸ್ಥೆ ಹೆಸರು: National Hydro Power Corporation Limited(NHPC)
ಒಟ್ಟು ಹುದ್ದೆಗಳು: 86
ಹೆಸರು: ಇಂಜಿನಿಯರ್ ಹಾಗೂ ಟ್ರೈನಿ ಆಧಿಕಾರಿ
ಉದ್ಯೋಗ ಸ್ಥಳ: ಭಾರತದೆಲ್ಲೆಡೆ
ಅರ್ಜಿ ಸಲ್ಲಿಸಲು ಕೊನೆ ದಿನಾಂಕ: ಸೆಪ್ಟೆಂಬರ್ 28, 2020

ವಿದ್ಯಾರ್ಹತೆ :
ಸರ್ಕಾರದಿಂದ ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಇಂಜಿನಿಯರಿಂಗ್ ಪದವಿ ಅಥವಾ ತತ್ಸಮಾನ ಅರ್ಹತೆಯುಳ್ಳವರು ಅರ್ಜಿ ಸಲ್ಲಿಸಬಹುದು. ಸಿವಿಎಲ್, ಮೆಕ್ಯಾನಿಕಲ್ ಇಂಜಿನಿಯರ್, ಬಿಎಸ್ಸಿ (ಇಂಜಿನಿಯರಿಂಗ್) ಕೂಡಾ ಅರ್ಹರಾಗಿದ್ದಾರೆ.
ಟೈನಿ ಅಧಿಕಾರಿ: ಸ್ನಾತಕೋತ್ತರ ಪದವಿ/ ಸ್ನಾತಕೋತ್ತರ ಡಿಪ್ಲೋಮಾ, ಸಿಎ, ಕಾನೂನು ವಿಷಯದಲ್ಲಿ ಪದವಿ.
ವಯೋಮಿತಿ: ನೇಮಕಾತಿ ಅಧಿಸೂಚನೆಯಂತೆ 30 ವರ್ಷ.
ನೇಮಕಾತಿ ಪ್ರಕ್ರಿಯೆ: ಟ್ರೈನಿ ಇಂಜಿನಿಯರ್ ಗಳಿಗೆ ಗೇಟ್ 2020, ಯುಜಿಸಿ ಎನ್ ಇಟಿ, ಸಿಎಲ್ಎಟಿ 2020 ಪರೀಕ್ಷೆ ಫಲಿತಾಂಶದ ಆಧಾರ ಹಾಗೂ ವೈಯಕ್ತಿಕ ಸಂದರ್ಶನ.
ಪ್ರಮುಖ ದಿನಾಂಕ:
ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಆರಂಭ ದಿನಾಂಕ: 29-08-2020
ಆನ್ಲೈನಲ್ಲಿ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 28-09-2020
ಅರ್ಜಿ ಸಲ್ಲಿಸುವ ವಿಧಾನ ಹಾಗೂ ಇನ್ನಿತರ ವಿವರಗಳಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ












Click it and Unblock the Notifications