145 ಅಪ್ರೆಂಟೀಸ್ ಹುದ್ದೆಗೆ ಅರ್ಜಿ ಕರೆದ ಎನ್‌ಎಫ್‌ಎಲ್
ಬೆಂಗಳೂರು, ಸೆಪ್ಟೆಂಬರ್ 06 : ನ್ಯಾಷನಲ್ ಫರ್ಟಿಲೈಸರ್ಸ್ ಲಿಮಿಟೆಡ್ 145 ಅಪ್ರೆಂಟೀಸ್ ಹುದ್ದೆಗಳ ಭರ್ತಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆನ್‌ಲೈನ್ ಮೂಲಕ ಅರ್ಜಿಗಳನ್ನು ಸಲ್ಲಿಸಲು 21/9/2019 ಕೊನೆಯ ದಿನವಾಗಿದೆ.
ಎನ್‌ಎಫ್‌ಎಲ್ ಟ್ರೇಡ್ ಅಪ್ರೆಂಟೀಸ್, ಗ್ರಾಜ್ಯುಯೇಟ್ ಅಪ್ರೆಂಟೀಸ್, ಟೆಕ್ನಿಕಲ್ ಅಪ್ರೆಂಟೀಸ್ ಸೇರಿ 145 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಯ್ಕೆಯಾದವರು ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಬೇಕಿದೆ.
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಐಟಿಐ, ಬಿಇ, ಡಿಪ್ಲೋಮಾ ಪದವಿಯನ್ನು ಪಡೆದಿರಬೇಕು. ಅರ್ಜಿ ಸಲ್ಲಿಸಲು ಕನಿಷ್ಠ ವಯೋಮಿತಿ 18 ವರ್ಷಗಳು. 31/7/2019ಕ್ಕೆ ಅನ್ವಯವಾಗುವಂತೆ.

ಅಭ್ಯರ್ಥಿಗಳನ್ನು ಆಯಾ ನಿಗದಿಪಡಿಸಿದ ಟ್ರೇಡ್‌ನಲ್ಲಿ ಪಡೆದಿರುವ ಅಂಕಗಳ ಮೆರಿಟ್ ಮೇಲೆ ಆಯ್ಕೆ ಮಾಡಲಾಗುತ್ತದೆ. ಅರ್ಜಿ ಸಲ್ಲಿಸುವವರು ಯಾವುದೇ ಶುಲ್ಕವನ್ನು ಪಾವತಿ ಮಾಡಬೇಕಿಲ್ಲ.
ಪ್ರಮುಖ ದಿನಾಂಕಗಳು : ಆಸಕ್ತ ಅಭ್ಯರ್ಥಿಗಳು 2/9/2019 ರಿಂದ ಇಪತ್ತು ದಿನದೊಳಗೆ ಅರ್ಜಿಗಳನ್ನು ಆನ್‌ಲೈನ್ ಮೂಲಕ ಸಲ್ಲಿಸಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications