NCLT Job 2023: ಕೇಂದ್ರ ಸರ್ಕಾರಿ ಉದ್ಯೋಗವಕಾಶ, 40-60 ಸಾವಿರ ಸಂಬಳದ ಹುದ್ದೆಗಾಗಿ ಈಗಲೇ ಅರ್ಜಿ ಹಾಕಿ
ಬೆಂಗಳೂರು, ಜೂನ್ 27: ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ (NCLT) ಸಂಸ್ಥೆ ತನ್ನಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳುತ್ತಿದ್ದು, ಈ ಸಂಬಂಧ ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 35 ಹುದ್ದೆಗಳಿಗೆ ನೇಮಕ ಪ್ರಕ್ರಿಯೆ ನಡೆಯಲಿದೆ. ಆಸಕ್ತರು ಇದೇ ಜೂನ್ 30ರೊಳಗೆ ಅರ್ಜಿ ಹಾಕಿ.
ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ (NCLT) ಸಂಸ್ಥೆಯಲ್ಲಿ ಒಟ್ಟು 55 ಲಾ ರಿಸರ್ಚ್ ಅಸೋಸಿಯೇಟ್ಸ್ ಹುದ್ದೆಗಳು ಖಾಲಿ ಇವೆ. ಕೇಂದ್ರ ಸರ್ಕಾರದ ಉದ್ಯೋಗ ಹುಡುಕುತ್ತಿರುವವರಿಗೆ ಇದೊಂದು ಸುವರ್ಣ ಅವಕಾಶವಾಗಿದೆ. ಆನ್‌ಲೈನ್ ಮೂಲಕವೇ ಅರ್ಜಿ ಹಾಕುವಂತೆ ಅಧಿಸೂಚನೆ ತಿಳಿಸಿದೆ.

ಆಸಕ್ತರು ಅಭ್ಯರ್ಥಿಗಳು ಅರ್ಜಿ ಸಲ್ಲಿಕೆಗೂ ಮೊದಲು ಖಾಲಿ ಹುದ್ದೆಗಳ ಮಾಹಿತಿ, ಶೈಕ್ಷಣಿಕ ಅರ್ಹತೆ, ಮಾಸಿಕ ವೇತನ ಸೇರಿದಂತೆ ಇನ್ನಿತರ ಅಗತ್ಯ ಮಾಹಿತಿ ಇಲ್ಲಿ ತಿಳಿಯೋಣ.
ಖಾಲಿ ಹುದ್ದೆಗಳ ಮಾಹಿತಿ
ಹುದ್ದೆ ಹೆಸರು - ಲಾ ರಿಸರ್ಚ್ ಅಸೋಸಿಯೇಟ್ಸ್
ಖಾಲಿ ಹುದ್ದೆ ಸಂಖ್ಯೆ - 55
ಉದ್ಯೋಗದ ಸ್ಥಳ - ಭಾರತ
ವೇತನ - 65,000 ರೂಪಾಯಿ.
ಶೈಕ್ಷಣಿಕ ಅರ್ಹತೆ- ವಯಸ್ಸಿನ ಮಿತಿ
ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು ಯಾವುದೇ ಮಾನ್ಯತೆ ಪಡೆದ ವಿಶ್ವವಿದ್ಯಾಲಯ/ಮಂಡಳಿಯಿಂದ ಕಡ್ಡಾಯವಾಗಿ ಎಲ್ಎಲ್ಬಿ, ಕಾನೂನು ಪದವಿ ಪಡೆದಿರಬೇಕು ಎಂದು ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ ನೇಮಕಾತಿ ಅಧಿಸೂಚನೆ ತಿಳಿಸಿದೆ.

ಈ ಖಾಲಿ ಹುದ್ದೆಗಳಿಗೆ ನೇಮಕವಾಗುವವರ ವಯಸ್ಸು 2023 ಜೂನ್ 30ಕ್ಕೆ ಗರಿಷ್ಠ 30 ವರ್ಷ ಮೀರಿರಬಾರದು. ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ಇರಲಿದೆ ಎಂದು ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ ನೇಮಕಾತಿ ಅಧಿಸೂಚನೆ ಹೇಳಿದೆ.
ಆಯ್ಕೆ ಪ್ರಕ್ರಿಯೆ
ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಸಂದರ್ಶನದ ನಡೆಸಲಾಗುವುದು. ಅಲ್ಲಿ ಅವರು ಉತ್ತೀರ್ಣರಾದರೆ ಹುದ್ದೆಗಳಿಗೆ ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಅರ್ಜಿ ಸಲ್ಲಿಕೆಗೆ ಶುಲ್ಕ ವಿನಾಯಿತಿ ನೀಡಲಾಗಿದ್ದು, ಯಾವುದೇ ಶುಲ್ಕ ಇರುವುದಿಲ್ಲ. ಭಾರತದ ಯಾವ ಸ್ಥಳದಲ್ಲಾದರೂ ಉದ್ಯೋಗ ಮಾಡಲು ಸಿದ್ಧರಿರಬೇಕು ಎಂದು ತಿಳಿಸಿದೆ.
ಮಾಸಿಕ ವೇತನದ ಮಾಹಿತಿ
ನ್ಯಾಷನಲ್ ಕಂಪನಿ ಲಾ ಟ್ರಿಬ್ಯುನಲ್ (NCLT) ಸಂಸ್ಥೆ ದೇಶದ ದೆಹಲಿ, ಜೈಪುರ, ಚಂಡೀಗರ್ ಸೇರಿದಂತೆ ವಿವಿಧೆಡೆ ಶಾಖೆಗಳನ್ನು ಹೊಂದಿದೆ. ಉದ್ಯೋಗಕ್ಕೆ ಆಯ್ಕೆಯಾಗುವ ಅಭ್ಯರ್ಥಿಗಳಿಗೆ ಶಾಖಾವಾರು ವೇತನದಲ್ಲಿ ಬದಲಾವಣೆ ಇದೆ.
ದೆಹಲಿಯಲ್ಲಿ ಮಾಸಿಕ 65,000, ಜೈಪುರ ವ್ಯಾಪ್ತಿಯಲ್ಲಿ ಮಾಸಿಕ 50,000, ಚಂಡೀಗರ್ ಶಾಖೆಯಲ್ಲಿ ಒಬ್ಬರಿಗೆ ತಿಂಗಳಿಗೆ 50,000 ಮತ್ತು ದೇಶದ ಇನ್ನಿತರ ಪ್ರದೇಶಗಳಲ್ಲಿ ಆಯ್ಕೆಯಾಗುವವರಿಗೆ ಮಾಸಿಕ 40,000 ರೂಪಾಯಿ ವೇತನ ನೀಡಲಾಗುವುದು ಎಂದು ಅಧಿಸೂಚನೆ ಮಾಹಿತಿ ನೀಡಿದೆ.











Click it and Unblock the Notifications