ಎನ್‌ಬಿಸಿಸಿಯಲ್ಲಿ 145 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
ಬೆಂಗಳೂರು, ಫೆಬ್ರವರಿ 27 : ಎನ್‌ಬಿಸಿಸಿ 145 ಹುದ್ದೆಗಳನ್ನು ಭರ್ತಿ ಮಾಡಲು ಆನ್‌ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಿದೆ. ಮಾರ್ಚ್ 25, 2018 ಅರ್ಜಿಗಳನ್ನು ಸಲ್ಲಿಸಲು ಕೊನೆಯ ದಿನಾಂಕವಾಗಿದೆ.
ನ್ಯಾಷನಲ್ ಬಿಲ್ಡಿಂಗ್ ಕನ್ ಸ್ಟ್ರಕ್ಷನ್ ಕಾರ್ಪೊರೇಷನ್ (ಎನ್‌ಬಿಸಿಸಿ) 26 ಜ್ಯುನಿಯರ್ ಇಂಜಿನಿಯರ್, 3 ಆಫೀಸ್ ಅಸಿಸ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಿದೆ.
ಜ್ಯೂನಿಯರ್ ಇಂಜಿನಿಯರ್ ಹುದ್ದೆಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಡಿಪ್ಲೊಮಾ ಪದವಿ ಪಡೆದಿರಬೇಕು. ಆಫೀಸ್ ಅಸಿಸ್ಟೆಂಟ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಯಾವುದಾದರೂ ವಿಷಯದಲ್ಲಿ ಪದವಿ ಪಡೆದಿರಬೇಕು.

ಅರ್ಜಿ ಸಲ್ಲಿಸುವ ಅಭ್ಯರ್ಥಿಗಳಿಗೆ ಜ್ಯೂನಿಯರ್ ಇಂಜಿನಿಯರ್ (28), ಆಫೀಸ್ ಅಸಿಸ್ಟೆಂಟ್ (22) ವರ್ಷದ ವಯೋಮಿತಿಯನ್ನು ನಿಗದಿ ಮಾಡಲಾಗಿದೆ.
ವೇತನ ಶ್ರೇಣಿ : ಜ್ಯೂನಿಯರ್ ಅಸಿಸ್ಟೆಂಟ್ - 9760, ಆಫೀಸ್ ಅಸಿಸ್ಟೆಂಟ್ 7300 ರೂ.ಗಳು.
ಪ್ರಮುಖ ಅಂಶಗಳು
* ಒಟ್ಟು ಹುದ್ದೆಗಳು 145
* ದೇಶದ ಯಾವುದೇ ನಗರದಲ್ಲಿ ಕೆಲಸ ಮಾಡಲು ಸಿದ್ಧರಿರಬೇಕು
* ಕೊನೆ ದಿನಾಂಕ ಮಾರ್ಚ್ 25, 2018
ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ












Click it and Unblock the Notifications